Ration Card: ಪಡಿತರ ಚೀಟಿ ಇಲ್ಲದಿದ್ದರೂ ಸಿಗಲಿದೆ ಉಚಿತ ರೇಶನ್, ಮಾಡಬೇಕಿರುವುದು ಏನು ತಿಳಿಯಿರಿ

ಹೊಸ ಪಡಿತರ ಚೀಟಿಗಳ ಜೊತೆಗೆ, ಹಳೆಯ ಪಡಿತರ ಚೀಟಿಗಳಲ್ಲಿ ಹೆಸರುಗಳನ್ನು ಸೇರಿಸುವ ಮತ್ತು ಅಳಿಸುವ ಕೆಲಸವೂ ನಡೆಯುತ್ತಿದೆ. ಆದರೆ, ಇದಕ್ಕಾಗಿ ನಿಮ್ಮ ಪಡಿತರ ಚೀಟಿಯನ್ನು ಆಧಾರ್ ಅಥವಾ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವುದು ಅಗತ್ಯವಾಗಿದೆ. 

Written by - Ranjitha R K | Last Updated : Sep 11, 2021, 05:44 PM IST
  • ಭರದಿಂದ ನಡೆಯುತ್ತಿದೆ ಪಡಿತರ ಚೀಟಿಗೆ ಸಂಬಂಧಿಸಿದ ಕೆಲಸಗಳು
  • ಪಡಿತರ ಚೀಟಿ ಇಲ್ಲದಿದ್ದರೂ ಪಡಿತರ ಉಚಿತವಾಗಿ ಲಭ್ಯವಿರುತ್ತದೆ
  • ಒನ್ ನೇಶನ್ ಒನ್ ರೇಶನ್ ಕಾರ್ಡ್ ಅಡಿಯಲ್ಲಿ ಸೌಲಭ್ಯ
Ration Card: ಪಡಿತರ ಚೀಟಿ ಇಲ್ಲದಿದ್ದರೂ ಸಿಗಲಿದೆ ಉಚಿತ ರೇಶನ್, ಮಾಡಬೇಕಿರುವುದು ಏನು ತಿಳಿಯಿರಿ    title=
ಒನ್ ನೇಶನ್ ಒನ್ ರೇಶನ್ ಕಾರ್ಡ್ ಅಡಿಯಲ್ಲಿ ಸೌಲಭ್ಯ (file photo)

ನವದೆಹಲಿ : ಪಡಿತರ ಚೀಟಿಯ ಫಲಾನುಭವಿಗಳಿಗೊಂದು ಒಳ್ಳೆಯ ಸುದ್ದಿ ಇದೆ. ಕೇಂದ್ರ ಸರ್ಕಾರ (Central government) ದೇಶದ ಹಲವು ರಾಜ್ಯಗಳಲ್ಲಿ ಉಚಿತ ಪಡಿತರವನ್ನು ನೀಡುತ್ತಿದೆ. ದೆಹಲಿ-ಎನ್‌ಸಿಆರ್‌ನಲ್ಲಿ 'One Nation One Ration Card Scheme ಜಾರಿಯಾದ ನಂತರ, ಇತರ ರಾಜ್ಯಗಳ ಜನರು ಕೂಡಾ ಉಚಿತ ಪಡಿತರ ಪಡೆಯಲು ಪ್ರಾರಂಭಿಸಿದ್ದಾರೆ.

ಇದಲ್ಲದೇ, ಪಡಿತರ ಚೀಟಿಗಳಿಲ್ಲದಿದ್ದರೂ (Rationa card) ಯುಪಿ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಈಗಾಗಲೇ ಪಡಿತರವನ್ನು ಉಚಿತವಾಗಿ ನೀಡಲಾಗುತ್ತಿದೆ. ಉಚಿತ ಪಡಿತರ (Free Ration) ಪಡೆಯುವ ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ.  

ಇದನ್ನೂ ಓದಿ :  SBI Alert:ಈ ಕೆಲಸ ಮಾಡದೇ ಹೋದಲ್ಲಿ ನಿಂತೇ ಹೋಗಬಹುದು ಬ್ಯಾಂಕಿಂಗ್ ಸೇವೆ

ಭರದಿಂದ ನಡೆಯುತ್ತಿದೆ ಪಡಿತರ ಚೀಟಿಗೆ ಸಂಬಂಧಿಸಿದ ಕೆಲಸಗಳು : 
ಹೊಸ ಪಡಿತರ ಚೀಟಿಗಳ ಜೊತೆಗೆ, ಹಳೆಯ ಪಡಿತರ ಚೀಟಿಗಳಲ್ಲಿ ಹೆಸರುಗಳನ್ನು ಸೇರಿಸುವ ಮತ್ತು ಅಳಿಸುವ ಕೆಲಸವೂ ನಡೆಯುತ್ತಿದೆ. ಆದರೆ, ಇದಕ್ಕಾಗಿ ನಿಮ್ಮ ಪಡಿತರ ಚೀಟಿಯನ್ನು ಆಧಾರ್ (Aadhaar) ಅಥವಾ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವುದು ಅಗತ್ಯವಾಗಿದೆ. ಅಮಾನತುಗೊಂಡ ಕಾರ್ಡ್‌ಗಳನ್ನು ಇತ್ತೀಚೆಗೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಬಿಹಾರ, ಜಾರ್ಖಂಡ್, ಉತ್ತರಾಖಂಡ ಮತ್ತು ದೆಹಲಿ-ಎನ್‌ಸಿಆರ್‌ಗಳಲ್ಲಿ (Delhi NCR)ಲಿಂಕ್ ಮಾಡಲಾಗಿದೆ. 

ಒನ್ ನೇಶನ್ ಒನ್ ರೇಶನ್ ಕಾರ್ಡ್ : 
ದೆಹಲಿ ಸರ್ಕಾರವು 'ಒನ್ ನೇಶನ್ ಒನ್ ರೇಶನ್ ಕಾರ್ಡ್' (One Nation One Ration Card) ಯೋಜನೆಯಡಿ ಆಹಾರ ಧಾನ್ಯಗಳ ವಿತರಣೆಯನ್ನು ಈಗ ಎಲ್ಲಾ ಇ-ಪಿಓಎಸ್ ಮೂಲಕ ಜಾರಿಗೊಳಿಸುತ್ತಿದೆ. ಇದರ ಅಡಿಯಲ್ಲಿ, ಫಲಾನುಭವಿಗಳು ಕಾರ್ಡ್ ಇಲ್ಲದಿದ್ದರೂ ಉಚಿತ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಇದಕ್ಕಾಗಿ ನಿಮ್ಮ ಕಾರ್ಡ್ ಅನ್ನು ಆಧಾರ್ ಅಥವಾ ಬ್ಯಾಂಕಿನೊಂದಿಗೆ (Bank) ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದರ ಹೊರತಾಗಿ, ಆರೋಗ್ಯ ಸರಿಯಿಲ್ಲದಿದ್ದರೆ ಅಥವಾ ಬೇರೆ ಬೇರೆ ಕಾರಣಗಳಿಂದ ಪಡಿತರ ಅಂಗಡಿಗೆ ಹೋಗಲು ಸಾಧ್ಯವಾಗದಿದ್ದರೆ, ನಿಮ್ಮ ಕಾರ್ಡ್‌ನಲ್ಲಿ ಬೇರೆ ಯಾರಾದರೂ  ಪಡಿತರವನ್ನು ತೆಗೆದುಕೊಳ್ಳಬಹುದು. 

ಇದನ್ನೂ ಓದಿ :  ನವೆಂಬರ್ ನಲ್ಲಿ ಮದುವೆಯಾಗುವುದಕ್ಕೆ ಜನ ಹಿಂದೇಟು ಹಾಕುವುದಕ್ಕೆ ಇದೇ ಕಾರಣ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News