ಇನ್ಮುಂದೆ ನೀವು ನಿಮ್ಮ ಕೈಬರಹವನ್ನೂ ಕೂಡ Copy-Paste ಮಾಡಬಹುದು

ಗೂಗಲ್ ತನ್ನ ಆಬ್ಜೆಕ್ಟ್ ರೆಕಗ್ನಿಷನ್ ಟೂಲ್ ಆಗಿರುವ ಗೂಗಲ್ ಲೆನ್ಸ್‌ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಸೇರಿಸಿದೆ. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ಈಗ ಕಂಪ್ಯೂಟರ್ ಪರದೆಯಲ್ಲಿ ಕೈಯಿಂದ ಬರೆದ ಟಿಪ್ಪಣಿಗಳನ್ನು ಕಾಪಿ-ಪೇಸ್ಟ್ ಮಾಡಬಹುದು.

Last Updated : May 11, 2020, 07:26 PM IST
ಇನ್ಮುಂದೆ ನೀವು ನಿಮ್ಮ ಕೈಬರಹವನ್ನೂ ಕೂಡ Copy-Paste ಮಾಡಬಹುದು title=

ಗೂಗಲ್ ತನ್ನ ಆಬ್ಜೆಕ್ಟ್ ರೆಕಗ್ನಿಷನ್ ಟೂಲ್ ಆಗಿರುವ ಗೂಗಲ್ ಲೆನ್ಸ್‌ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಜೋಡಿಸಿದೆ. ಈ ವೈಶಿಷ್ಟ್ಯದ ಬಳಸಿ ಬಳಕೆದಾರರು ಇದೀಗ ತಮ್ಮ  ಕಂಪ್ಯೂಟರ್ ಪರದೆಯಲ್ಲಿ ಕೈಯಿಂದ ಬರೆದ ಟಿಪ್ಪಣಿಗಳನ್ನು ಕಾಪಿ-ಪೇಸ್ಟ್ ಮಾಡಬಹುದಾಗಿದೆ. ಕಂಪ್ಯೂಟರ್‌ನಲ್ಲಿ ಕಾಗದದಲ್ಲಿ ಬರೆದ ಪಠ್ಯವನ್ನು ನೀವು ತಕ್ಷಣ ಪಡೆಯಲು ಬಯಸಿದರೆ ಈ ವೈಶಿಷ್ಟ್ಯವು ನಿಮ್ಮ ಕೆಲಸವನ್ನು ಸುಲಭಗೊಳಿಸಲಿದೆ. ಈ ವೈಶಿಷ್ಟ್ಯ ಯಾವುದೇ ವಸ್ತುವಿನ ಮೇಲೆ ಬರೆದ ಅಕ್ಷರಗಳನ್ನು, ಟೈಪ್ ಮಾಡದೆಯೇ ಫೋನ್ ಅಥವಾ ಲ್ಯಾಪ್‌ಟಾಪ್‌ಗೆ ವರ್ಗಾಯಿಸಲು ಸಮರ್ಥವಾಗಿದೆ.

ಇದಕ್ಕೂ ಮೊದಲು ಗೂಗಲ್ ನ ಈ ವೈಶಿಷ್ಟ್ಯ ಸ್ಮಾರ್ಟ್‌ಫೋನ್‌ನಲ್ಲಿ ಕಾಗದದ ಟಿಪ್ಪಣಿಗಳನ್ನು ಕಾಪಿ-ಪೇಸ್ಟ್ ಮಾಡುವ ಆಯ್ಕೆ ನೀಡಿದ್ದು. ಆದರೆ ಇದೀಗ ಅದನ್ನು ಕಂಪ್ಯೂಟರ್ ಸ್ಕ್ರೀನ್ ಡಾಕ್ಯುಮೆಂಟ್‌ನಲ್ಲೂ ಬಳಸಬಹುದಾಗಿದೆ. ಇದನ್ನು ಬಳಸಲು, ಬಳಕೆದಾರನು ತನ್ನ ಪಿಸಿ ಮತ್ತು ಸ್ಮಾರ್ಟ್‌ಫೋನ್‌ ಗೆ  ಒಂದೇ ಖಾತೆಯಿಂದ ಲಾಗಿನ್ ಆಗಬೇಕು. ಅಷ್ಟೇ ಅಲ್ಲ ಬಳಕೆದಾರರ ಬಳಿ ಲೇಟೆಸ್ಟ್ ಕ್ರೋಮ್ ಬ್ರೌಸರ್ ಹಾಗೂ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಲೆನ್ಸ್ ಅಪ್ಲಿಕೇಶನ್ ಅನ್ನು ಹೊಂದಿರುವುದು ಅವಶ್ಯಕವಾಗಿದೆ. ಈ ವೈಶಿಷ್ಟ್ಯವನ್ನು ಸರಿಯಾಗಿ ಬಳಸಲು, ಬಳಕೆದಾರರ ಕೈಬರಹವು ಸ್ಫುಟವಾಗಿರಬೇಕು.

ಈ ಅಪ್ಲಿಕೇಶನ್‌ನಲ್ಲಿನ ವಿಶೇಷತೆ ಏನೆಂದರೆ ನೀವು ಕಾಗದದ ಜೊತೆಗೆ ಬೇರೆ ಯಾವುದೇ ವಸ್ತುವಿನ ಮೇಲೆ ಬರೆದ ಪಠ್ಯವನ್ನು ಸಹ ನೀವು ಕಾಪಿ-ಪೇಸ್ಟ್ ಮಾಡಬಹುದಾಗಿದೆ. ಜೊತೆಗೆ ನೀವು ನಿಮ್ಮ ಪಠ್ಯವನ್ನು ಬೇರೆ ಭಾಷೆಗೆ ಅನುವಾದಿಸಬಹುದು. ಗೂಗಲ್ ಲೆನ್ಸ್‌ನ ಹೊಸ ವೈಶಿಷ್ಟ್ಯ ಬಳಸಿ ಯಾವುದೇ ಸಾಲು ಅಥವಾ ಪ್ಯಾರಾಗ್ರಾಫ್‌ನ ಅರ್ಥವನ್ನು ಸಹ  ನೀವು ತಿಳಿಯಬಹುದು.

ಬಳಕೆಗೆ ಈ ಕೆಳಗೆ ಸೂಚಿಸಿದ ಸ್ಟೆಪ್ಸ್ ಗಳನ್ನು ಅನುಸರಿಸಿ
ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ ಗೂಗಲ್ ಲೆನ್ಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಅಪ್ಲಿಕೇಶನ್ ತೆರೆಯಿರಿ ಮತ್ತು ಪಠ್ಯದ ಮೇಲೆ ನಿಮ್ಮ ಫೋನ್ ಲೆನ್ಸ್ ಅನ್ನು ಕೊಂಡೊಯ್ಯಿರಿ. ಪಠ್ಯದ ಫೋಟೋ ಕ್ಲಿಕ್ಕಿಸಿ. ಇದಾದ ಬಳಿಕ ನಿಮಗೆ ಪಠ್ಯ ಆಯ್ಕೆಯ ಆಪ್ಶನ್ ಕಾಣಿಸಿಕೊಳ್ಳಲಿದೆ. ನೀವು ಕಾಪಿ ಮಾಡಲು ಬಯಸುವಷ್ಟು ಪಠ್ಯವನ್ನು ಸೆಲೆಕ್ಟ್ ಮಾಡಿ. ಈಗ ಕಾಪಿ ಅಥವಾ ಕಾಪಿ ಟು ಕಂಪ್ಯೂಟರ್  ಆಯ್ಕೆಯನ್ನು ಕ್ಲಿಕ್ ಮಾಡಿ. ತನ್ಮೂಲಕ ನೀವು ಪಠ್ಯವನ್ನು ಕಂಪ್ಯೂಟರ್‌ಗೆ ಕಾಪಿ ಮಾಡಬಹುದು. ನೀವು ಬಯಸಿದರೆ, ನೀವು ಫೋನ್‌ನಲ್ಲಿನ ಪಠ್ಯವನ್ನು ಕಾಪಿ ಮಾಡಿ ಬಳಿಕ ಅದನ್ನು ಕಂಪ್ಯೂಟರ್‌ಗೆ ಕಳುಹಿಸಬಹುದು.

Trending News