Government Scheme: ಕಾರ್ಯನಿರತ ಮಹಿಳೆಯರಿಗೆ ಸರ್ಕಾರ ನೀಡುವ ಈ ವಿಶೇಷ ಸವಲತ್ತು ನಿಮಗೆ ತಿಳಿದಿದೆಯೇ?

Hostel Scheme: ಕಾರ್ಯನಿರತ ಮಹಿಳಾ ಹಾಸ್ಟೆಲ್ ಯೋಜನೆಯಡಿ, ಕೆಲಸದ ಕಾರಣದಿಂದ ತಮ್ಮ ನಗರದ ಹೊರಗೆ ಬೇರೆ ಯಾವುದಾದರೂ ನಗರದಲ್ಲಿ ವಾಸಿಸುವ ಮಹಿಳೆಯರಿಗೆ ಸರ್ಕಾರವು ಹಾಸ್ಟೆಲ್ ಸೌಲಭ್ಯವನ್ನು ಒದಗಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹಾಗಾದರೆ ಬನ್ನಿ ಈ ಯೋಜನೆಯ ಕುರಿತು ತಿಳಿದುಕೊಳ್ಳೋಣ,  

Written by - Nitin Tabib | Last Updated : Feb 18, 2022, 03:21 PM IST
  • ಮಹಿಳೆಯರನ್ನು ಸಮಾಜದಲ್ಲಿ ಮುಂದಕ್ಕೆ ತರಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ.
  • ಹೆಣ್ಣು ಮಗುವಿನ ಜನನದಿಂದ ಅವಳ ಶಿಕ್ಷಣ ಮತ್ತು ಮದುವೆಯ ವೆಚ್ಚದವರೆಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ನಡೆಸುತ್ತವೆ.
  • ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಮಹಿಳೆಯರು ಕೂಡ ಮುಂದೆ ಬರುತ್ತಿದ್ದಾರೆ.
Government Scheme: ಕಾರ್ಯನಿರತ ಮಹಿಳೆಯರಿಗೆ ಸರ್ಕಾರ ನೀಡುವ ಈ ವಿಶೇಷ ಸವಲತ್ತು ನಿಮಗೆ ತಿಳಿದಿದೆಯೇ? title=
Working Women Hostel Scheme (File Photo)

Working Women Hostel Scheme: ಮಹಿಳೆಯರನ್ನು ಸಮಾಜದಲ್ಲಿ ಮುಂದಕ್ಕೆ ತರಲು ಸರ್ಕಾರ ಹಲವಾರು ಯೋಜನೆಗಳನ್ನು (Government Schemes for Women) ಜಾರಿಗೆ ತರುತ್ತಿದೆ. ಹೆಣ್ಣು ಮಗುವಿನ ಜನನದಿಂದ ಅವಳ ಶಿಕ್ಷಣ ಮತ್ತು ಮದುವೆಯ ವೆಚ್ಚದವರೆಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು  (Central Government)  ಅನೇಕ ಯೋಜನೆಗಳನ್ನು ನಡೆಸುತ್ತವೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಮಹಿಳೆಯರು ಕೂಡ ಮುಂದೆ ಬರುತ್ತಿದ್ದಾರೆ. ಓದು ಬರಹ ಮಾಡುತ್ತಾ ಕೆಲಸ ಮಾಡುತ್ತಿದ್ದಾಳೆ. ಆದರೆ, ಕೆಲಸದ ನಿಮಿತ್ತ ಅನೇಕ ಬಾರಿ ಮಹಿಳೆಯರು ತಮ್ಮ ಮನೆಗಳನ್ನು ಬಿಟ್ಟು ಬೇರೆ ನಗರಗಳಿಗೆ ಹೋಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಹಲವರು ಬೇರೆ ನಗರದಲ್ಲಿ ವಾಸಿಸಲು ಸುರಕ್ಷಿತ ಸ್ಥಳವನ್ನು ಹುಡುಕುವಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಹೀಗಿರುವಾಗ ಮಹಿಳೆಯರಿಗೆ ಉತ್ತೇಜನ ನೀಡಲು ಸರ್ಕಾರ ಮಹಿಳಾ ಹಾಸ್ಟೆಲ್ ಯೋಜನೆ (Hostel Scheme for Woman) ಆರಂಭಿಸಿದೆ.

ಈ ಯೋಜನೆಯಡಿಯಲ್ಲಿ, ಸರ್ಕಾರವು ಉದ್ಯೋಗಸ್ಥ ಮಹಿಳೆಯರಿಗೆ ಹಳ್ಳಿಗಳು, ಪಟ್ಟಣಗಳು, ನಗರಗಳು ಮತ್ತು ದೊಡ್ಡ ನಗರಗಳಲ್ಲಿ ಉಳಿಯಲು ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸುತ್ತದೆ. ಹೀಗಾಗಿ ಮಹಿಳೆಯರು ಯಾವುದೇ ತೊಂದರೆಯಿಲ್ಲದೆ ಬೇರೆ ಊರುಗಳಿಗೆ ಹೋಗಿ ಉದ್ಯೋಗ ಮಾಡಲು ಅನುಕೂಲವಾಗುವಂತೆ ಹಲವು ರೀತಿಯ ಕಟ್ಟಡಗಳನ್ನು ಸರ್ಕಾರ ನಿರ್ಮಿಸುತ್ತಿದೆ. ವರ್ಕಿಂಗ್ ವುಮೆನ್ ಹಾಸ್ಟೆಲ್ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಡೆಸುತ್ತಿವೆ. ಹಾಗಾದರೆ ಬನ್ನಿ ಈ ವರ್ಕಿಂಗ್ ವುಮೆನ್ ಹಾಸ್ಟೆಲ್ (Working Women Hostel Scheme) ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ವರ್ಕಿಂಗ್ ವುಮೆನ್ ಹಾಸ್ಟೆಲ್ ಸ್ಕೀಮ್ ಎಂದರೇನು?
ಉದ್ಯೋಗ ಮಾಡುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಸರ್ಕಾರವು ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಯೋಜನೆಗೆ ಜಾರಿಗೆ ಮುಂದಾಗಿದೆ. ಈ ಯೋಜನೆಯಡಿ, ಇತರ ನಗರಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹಾಸ್ಟೆಲ್ ಸೌಲಭ್ಯವನ್ನು ನೀಡಲಾಗುತ್ತದೆ. ಈ ಹಾಸ್ಟೆಲ್‌ನಲ್ಲಿ ಮಹಿಳೆಯರು ಸುರಕ್ಷಿತವಾಗಿ ಇದ್ದುಕೊಂಡು ತಮ್ಮ ಕೆಲಸವನ್ನು ಸುಲಭವಾಗಿ ಮಾಡಬಹುದು.

ಇದನ್ನೂ ಓದಿ-Siddaramaiah : ಹಿಜಾಬ್ ಪರವಾಗಿ ನಿಂತ ಸಿದ್ದರಾಮಯ್ಯ : ಸುತ್ತೋಲೆ ವಾಪಾಸ್ ಪಡೆಯಲು ಆಗ್ರಹ!

ಈ ಮಹಿಳೆಯರು ಈ ಯೋಜನೆಯ  ಲಾಭವನ್ನು ಪಡೆಯಬಹುದು
ಕೆಲಸ ಮಾಡುವ ಮಹಿಳಾ ಹಾಸ್ಟೆಲ್ ಯೋಜನೆಯಡಿ, ಕೆಲಸದ ಕಾರಣದಿಂದ ತಮ್ಮ ನಗರವನ್ನು ಬಿಟ್ಟು ಬೇರೆ ಯಾವುದಾದರೂ ನಗರದಲ್ಲಿ ವಾಸಿಸುವ ಮಹಿಳೆಯರಿಗೆ ಸರ್ಕಾರವು ಹಾಸ್ಟೆಲ್ ಸೌಲಭ್ಯವನ್ನು ಒದಗಿಸುತ್ತದೆ. ಒಂಟಿ ಮಹಿಳೆಯರಿಗೆ (Single Women), ವಿಚ್ಛೇದಿತ ಮಹಿಳೆಯರಿಗೆ, ಉದ್ಯೋಗಸ್ಥ ಮಹಿಳೆಯರಿಗೆ ಅಥವಾ ವಿಧವೆಯರಿಗಾಗಿ (Widow Women) ಈ ಹಾಸ್ಟೆಲ್ ಗಳಲ್ಲಿ ಸ್ಥಳಾವಕಾಶ ನೀಡಲಾಗುತ್ತದೆ. ಇದಲ್ಲದೆ, ವಿವಾಹಿತ ಮಹಿಳೆ ತನ್ನ ಕೆಲಸದ ಆಧಾರದ ಮೇಲೆ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಸಹ ಪಡೆಯುತ್ತಾರೆ. ಇದರೊಂದಿಗೆ 50,000 ರೂ.ಗಿಂತ ಕಡಿಮೆ ವೇತನ ಇರುವ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. ಅದೇ ಸಮಯದಲ್ಲಿ, ಮಹಿಳೆಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರಬಾರದು.

ಇದನ್ನೂ ಓದಿ-Ahmedabad serial bomb blast case: 38 ಅಪರಾಧಿಗಳಿಗೆ ಮರಣದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ

ಅರ್ಜಿ ಸಲ್ಲಿಸಲು ಈ ದಾಖಲೆಗಳು ಅಗತ್ಯವಿದೆ
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು, ನಿಮಗೆ ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (PAN Card), ಪಾಸ್‌ಪೋರ್ಟ್ (Passport) ಇತ್ಯಾದಿಗಳ ಫೋಟೋಕಾಪಿ (Photocopy) ಅಗತ್ಯವಿದೆ. ಇದರೊಂದಿಗೆ ನೀವು ಕೆಲಸ ಮಾಡುವ ಸ್ಥಳದ ಗುರುತಿನ ಚೀಟಿಯೂ ನಿಮ್ಮ ಬಳಿ ಇರಬೇಕು. ಇದರೊಂದಿಗೆ, ನಿಮ್ಮ ಕಚೇರಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯೂ (Mobile Number) ಅಗತ್ಯವಿರುತ್ತದೆ.

ಇದನ್ನೂ ಓದಿ-ಧರಣಿ ಕೈ ಬಿಡದ ಕಾಂಗ್ರೆಸ್ : ಸೋಮವಾರದ ಬಳಿಕ ಸದನ ಅನಿರ್ದಿಷ್ಟಾವಧಿ ಗೆ ಮುಂದೂಡಲು ಸರ್ಕಾರ ತೀರ್ಮಾನ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News