ನವದೆಹಲಿ: ಎಷ್ಟೋ ವರ್ಷಗಳ ಕನಸಾದ ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆಗೂ ಮೊದರು ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy) ಸರ್ಕಾರಕ್ಕೆ ದೊಡ್ಡ ಬೇಡಿಕೆ ಇಟ್ಟಿದ್ದಾರೆ.
ಭೂಮಿ ಪೂಜೆ ನಡೆಸುವ ಮೊದಲು ಲಾಲ್ ಕೃಷ್ಣ ಅಡ್ವಾಣಿ (Lal Krishna Advani), ಮುರಳಿ ಮನೋಹರ್ ಜೋಶಿ ಸೇರಿದಂತೆ ಉಳಿದ ನಾಯಕರ ಮೇಲೆ ವಿವಾದಿತ ರಚನೆ ಮೊಕದ್ದಮೆಯನ್ನು ಪ್ರಧಾನಿ ನಿಲ್ಲಿಸಬೇಕು ಎಂದು ಸ್ವಾಮಿ ಆಗ್ರಹಿಸಿದ್ದಾರೆ. ಈ ನಾಯಕರು ಯಾವುದೇ ಮಸೀದಿಯನ್ನು ನೆಲಸಮ ಮಾಡಿಲ್ಲ, ಬದಲಿಗೆ ಅಲ್ಲಿ ಈಗಾಗಲೇ ನಿರ್ಮಿಸಲಾದ ದೇವಾಲಯವನ್ನು ಪುನರ್ನಿರ್ಮಿಸಲು ಅದರ ಭಗ್ನಾವಶೇಷಗಳನ್ನು ಎಸೆದರು ಎಂದು ಸ್ವಾಮಿ ಹೇಳಿದ್ದಾರೆ.
ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಮೊದಲು ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡುವ ಮೂಲಕ ಬಾಬ್ರಿ ಪ್ರಕರಣದ ಬಗ್ಗೆ ಮತ್ತೊಮ್ಮೆ ದನಿ ಎತ್ತಿದ್ದಾರೆ. ಅಯೋಧ್ಯೆಗೆ ಹೋಗುವ ಮೊದಲು ಪ್ರಧಾನಮಂತ್ರಿಯವರು ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಶಿ (Murli Manohar Joshi) ಮತ್ತು ಇತರ ನಾಯಕರ ವಿರುದ್ಧ ನಡೆಯುತ್ತಿರುವ ಮಸೀದಿ ಉರುಳಿಸುವಿಕೆಯ ಪ್ರಕರಣವನ್ನು ಕೊನೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
Before taking Advani Joshi etc., to Ayodhya PM must order the closing of the silly case of demolition of the "Babri Masjid". If at all complicit, they did not demolish a masjid but a functioning temple to rebuild it.
— Subramanian Swamy (@Swamy39) July 21, 2020
ಈ ನಾಯಕರು ಯಾವುದೇ ಮಸೀದಿಯನ್ನು ಹಾನಿಮಾಡಲಿಲ್ಲ. ಆಗಲೇ ಅಲ್ಲಿ ಒಂದು ದೇವಾಲಯವಿತ್ತು ಈ ವಿಷಯವನ್ನು ಸುಪ್ರೀಂ ಕೋರ್ಟ್ ಕೂಡ ಒಪ್ಪಿಕೊಂಡಿದೆ. ಈ ನಾಯಕರು ಈಗಾಗಲೇ ಸ್ಥಾಪಿಸಲಾದ ದೇವಾಲಯವನ್ನು ಪುನರ್ನಿರ್ಮಿಸಲು ಅದರ ಭಗ್ನಾವಶೇಷಗಳನ್ನು ಎಸೆದರು ಎಂದವರು ಘಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ.
ಸದ್ಯ ಸುಬ್ರಮಣಿಯನ್ ಸ್ವಾಮಿಯವರ ಈ ಟ್ವೀಟ್ ವೈರಲ್ ಆಗಿದೆ. ಆದರೆ ಈ ಟ್ವೀಟ್‌ಗೆ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.