ಪುಲ್ವಾಮಾ: ಜಮ್ಮು-ಕಾಶ್ಮೀರದಲ್ಲಿ ಅಂತರ್ಜಾಲ ಮತ್ತು ಸಂವಹನ ನಿರ್ಬಂಧಗಳಿಂದ ಎದುರಾದ ಅನಾನುಕೂಲತೆಯ ಹಿನ್ನೆಲೆಯಲ್ಲಿ ಶೋಪಿಯಾನ್ ಮತ್ತು ಪುಲ್ವಾಮಾ ವಿದ್ಯಾರ್ಥಿಗಳಿಗಾಗಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂಟರ್ನೆಟ್ ಸೌಲಭ್ಯ ಕೇಂದ್ರವನ್ನು ಆರಂಭಿಸಲಾಗಿದೆ.
ಇದರಿಂದಾಗಿ ವಿದ್ಯಾರ್ಥಿಗಳು ಯುಜಿಸಿ-ನೆಟ್, ಗೇಟ್ ಮತ್ತು ಮೇನ್ಸ್-ಐಐಟಿ ಮೊದಲಾದ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು, ಪ್ರವೇಶ ಪತ್ರ ಪಡೆಯಲು ಸಹಾಯವಾಗಲಿದೆ.
"ನಮ್ಮ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಅಂತರ್ಜಾಲ ಸೌಲಭ್ಯವನ್ನು ಒದಗಿಸಲಾಗಿದೆ. ಇದರಿಂದಾಗಿ ಅವರು ಪ್ರವೇಶ ಪತ್ರಗಳನ್ನು ಪಡೆಯಲು, ಅರ್ಜಿ ನಮೂನೆಗಳನ್ನು ಭರ್ತಿ ಮಾಡಲು ಸಹಾಯವಾಗಲಿದೆ. ಈ ಕೆಲಸಗಳಿಗಾಗಿ ಅವರು ದೂರದ ಪ್ರದೇಶಗಳಿಗೆ ಹೋಗುವ ಅಗತ್ಯವಿಲ್ಲ" ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮುಹಮ್ಮದ್ ಅಶ್ರಫ್ ಹಕ್ಕಕ್ ಹೇಳಿದ್ದಾರೆ.
"ಕಾಶ್ಮೀರದಲ್ಲಿರುವ ಪ್ರಸ್ತತ ಪರಿಸ್ಥಿತಿಯಲ್ಲಿ ಬ್ರಾಡ್ಬ್ಯಾಂಡ್ ಮತ್ತು ಇಂಟರ್ನೆಟ್ ಸೇವೆಗಳು ಈ ಹಿಂದೆ ಇರಲಿಲ್ಲ. ಆದರೀಗ ಅಂತರ್ಜಾಲ ಸೌಲಭ್ಯ ಕೇಂದ್ರ ಆರಂಭವಾಗಿರುವುದರಿಂದ ಇಲ್ಲೇ ಜೆಇಇ ಮೇನ್ಸ್ಗೆ ಅರ್ಜಿ ಸಲ್ಲಿಸುತ್ತಿದ್ದೇನೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ" ಎಂದು ಮಿಲಾಡ್ ಮೆಹಮೂದ್ ಹೇಳಿದ್ದಾರೆ.