Gujarat Cabinet : ಗುಜರಾತ್ ಸಂಪುಟದ ಪಟ್ಟಿಯಿಂದ ಹಾರ್ದಿಕ್ ಪಟೇಲ್ ಹೆಸರು ನಾಪತ್ತೆ! 25 ಹೊಸ ಮುಖಗಳಿಗೆ ಮಣೆ

ossible List of Gujarat Cabinet : ಗುಜರಾತಿನಲ್ಲಿ ದಾಖಲೆಯ ಸೀಟುಗಳಿಂದ ಗೆದ್ದಿರುವ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸಲು ಉತ್ಸಾಹದಲ್ಲಿದೆ. ಪಕ್ಷವು ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಶನಿವಾರ ಆಯ್ಕೆ ಮಾಡಿದೆ, ಅಲ್ಲದೆ, ಇದೆ ತಿಂಗಳ 12 ರಂದು ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕಾಗಿ ಕಾಯುತ್ತಿದೆ.

Written by - Channabasava A Kashinakunti | Last Updated : Dec 11, 2022, 05:59 PM IST
  • ಗುಜರಾತಿನಲ್ಲಿ ದಾಖಲೆಯ ಸೀಟುಗಳಿಂದ ಗೆದ್ದಿರುವ ಭಾರತೀಯ ಜನತಾ ಪಕ್ಷ
  • ಪಕ್ಷವು ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಶನಿವಾರ ಆಯ್ಕೆ ಮಾಡಿದೆ
  • ಇದೆ ತಿಂಗಳ 12 ರಂದು ನಡೆಯಲಿರುವ ಪ್ರಮಾಣ ವಚನ ಸಮಾರಂಭ
Gujarat Cabinet : ಗುಜರಾತ್ ಸಂಪುಟದ ಪಟ್ಟಿಯಿಂದ ಹಾರ್ದಿಕ್ ಪಟೇಲ್ ಹೆಸರು ನಾಪತ್ತೆ! 25 ಹೊಸ ಮುಖಗಳಿಗೆ ಮಣೆ title=

Possible List of Gujarat Cabinet : ಗುಜರಾತಿನಲ್ಲಿ ದಾಖಲೆಯ ಸೀಟುಗಳಿಂದ ಗೆದ್ದಿರುವ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸಲು ಉತ್ಸಾಹದಲ್ಲಿದೆ. ಪಕ್ಷವು ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಶನಿವಾರ ಆಯ್ಕೆ ಮಾಡಿದೆ, ಅಲ್ಲದೆ, ಇದೆ ತಿಂಗಳ 12 ರಂದು ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕಾಗಿ ಕಾಯುತ್ತಿದೆ. ಗುಜರಾತ್‌ನ ಹಂಗಾಮಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಇದಾದ ನಂತರ ಪಟೇಲ್ ಅವರು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿ ಮಾಡಿ ಗುಜರಾತ್‌ನಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಗುಜರಾತ್ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಕೂಡ ಭೂಪೇಂದ್ರ ಪಟೇಲ್ ಅವರೊಂದಿಗೆ ರಾಜಭವನಕ್ಕೆ ತೆರಳಿದ್ದರು. ಪಟೇಲ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ತಕ್ಷಣ ರಾಜಭವನ ತಲುಪಿದರು.

182 ಸ್ಥಾನಗಳ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗೆದ್ದಿದೆ. ಬಂಪರ್ ಗೆಲುವಿನ ನಂತರ ಪಕ್ಷದಿಂದ ಸರ್ಕಾರ ರಚಿಸುವ ಹಕ್ಕು ಕೂಡ ಮಂಡಿಸಲಾಗಿದೆ. ಈಗ ಗುಜರಾತ್‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಹಾರ್ದಿಕ್ ಪಟೇಲ್ ಅವರ ಹೆಸರನ್ನು ಸಂಪುಟದಲ್ಲಿ ಕೈ ಬಿಟ್ಟು ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಲು ಕಮಲಾ ಪದೇ ಮುಂದಾಗಿದೆ ಎಂಬುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : Assembly Elections 2023 : ಲೋಕಸಭೆ ಚುನಾವಣೆಗೂ ಮುನ್ನ 2023ರಲ್ಲಿ ಕರ್ನಾಟಕ ಸೇರಿ ಈ 10 ರಾಜ್ಯಗಳಲ್ಲಿ ಎಲೆಕ್ಷನ್!

ಗುಜರಾತ್‌ನ ಸಂಭಾವ್ಯ ಸಚಿವ ಸಂಪುಟದ ಪಟ್ಟಿ ಇಂದು ಹೊರಬಿದ್ದಿದೆ. ಹರ್ಷ ಸಾಂಘ್ವಿ, ಅಲ್ಪೇಶ್ ಠಾಕೂರ್, ಜಿತು ವಘಾನಿ, ಕಿರಿತ್ ಸಿಂಗ್ ರಾಣಾ ಮತ್ತು ಕನು ದೇಸಾಯಿ ಸೇರಿದಂತೆ ಒಟ್ಟು 25 ಹೆಸರುಗಳು ಈ ಪಟ್ಟಿಯಲ್ಲಿವೆ. ಆದರೆ, ಈ ಪಟ್ಟಿಯಲ್ಲಿ ಹಾರ್ದಿಕ್ ಪಟೇಲ್ ಹೆಸರು ಇಲ್ಲದಿರುವುದು ಅಚ್ಚರಿ ಮೂಡಿಸಿದೆ.

ಸಂಭಾವ್ಯ ಕ್ಯಾಬಿನೆಟ್‌ನಲ್ಲಿರುವ ಹೊಸ ಮುಖಗಳು ಯಾವವು?

ಗುಜರಾತಿನ ನೂತನ ಸಚಿವ ಸಂಪುಟಕ್ಕೆ ಹಲವು ಯುವ ಮುಖಗಳನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂಪುಟದ ಸಂಭಾವ್ಯ ಪಟ್ಟಿಯ ಪ್ರಕಾರ ಕಿರಿತ್ ಸಿಂಗ್ ರಾಣಾ, ಕಾನು ದೇಸಾಯಿ, ಹೃಷಿಕೇಶ್ ಪಟೇಲ್, ಕುನ್ವರ್ಜಿ ಬವಲಿಯಾ, ರಮಣ್‌ಲಾಲ್ ವೋರಾ, ಗಣಪತ್ ವಾಸವ, ನರೇಶ್ ಪಟೇಲ್, ಹರ್ಷ್ ಸಾಂಘ್ವಿ, ಬಾಲಕೃಷ್ಣ ಶುಕ್ಲಾ ಅವರು ಸಂಪುಟದಲ್ಲಿ ಸ್ಥಾನ ಪಡೆಯಬಹುದು. ಇವರಲ್ಲದೆ, ಜಯೇಶ್ ರಾಡಾಡಿಯಾ, ಶಂಭುಪ್ರಸಾದ್ ತುಂಡಿಯಾ, ಮೌಲು ಬೇರಾ, ಅಲ್ಪೇಶ್ ಠಾಕೋರ್, ಜಿತು ವಘಾನಿ, ಮನಿಶಾ ವಕೀಲ್ ಮತ್ತು ಭಾನು ಬಾಬಾರಿಯಾ ಅವರ ಹೆಸರುಗಳೂ ಚರ್ಚೆಗೆ ಕಾರಣವಾಗಿದೆ.

ಮಾಹಿತಿ ಪ್ರಕಾರ ಹೀರಾ ಸೋಲಂಕಿ, ದರ್ಶನಾ ವಘೇಲಾ, ಶಂಕರ್ ಚೌಧರಿ, ನಿಕುಲ್ ಪಟೇಲ್, ಪಂಕಜ್ ದೇಸಾಯಿ, ದರ್ಶನ ದೇಶಮುಖ್, ಪಿಸಿ ಬಾರಾಂಡಾ, ಜಗದೀಶ್ ವಿಶ್ವಕರ್ಮ ಮತ್ತು ಕೌಶಿಕ್ ವೆಕಾರಿಯಾ ಕೂಡ ಗುಜರಾತ್‌ನ ನೂತನ ಸಂಪುಟದಲ್ಲಿ ಸಚಿವರಾಗಬಹುದು.

ಗುಜರಾತ್ ನ 18ನೇ ಸಿಎಂ ಆಗಿ ಪಟೇಲ್ ಪ್ರಮಾಣ ವಚನ

ಡಿಸೆಂಬರ್ 12 ರಂದು 18ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗಾಂಧಿನಗರದ ಹೊಸ ಸಚಿವಾಲಯದ ಬಳಿಯ ಹೆಲಿಪ್ಯಾಡ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಮೊದಲು ಪಕ್ಷವು ಪಟೇಲ್ ಅವರನ್ನು ಮುಖ್ಯಮಂತ್ರಿ ಮಾಡಿತ್ತು. ಅವರು ವಿಜಯ್ ರೂಪಾನಿ ಬದಲಿಗೆ ಅಧಿಕಾರವಹಿಸಿಕೊಂಡಿದ್ದರು.

ಇದನ್ನೂ ಓದಿ : Sukhwinder Singh Sukhu Oath Ceremony : ಹಿಮಾಚಲದ ನೂತನ ಸಿಎಂ ಆಗಿ ಸುಖ್ವಿಂದರ್, ಡಿಸಿಎಂ ಮುಖೇಶ್ ಅಗ್ನಿಹೋತ್ರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News