Gyanvapi Case : ಜ್ಞಾನವಾಪಿ ಪ್ರಕರಣ ಹಿಂದೂಗಳ ಪರ ಕೋರ್ಟ್ ತೀರ್ಪು, ಮುಸ್ಲಿಂರ ಅರ್ಜಿ ವಜಾ

ಐದು ಮಹಿಳಾ ಹಿಂದೂಗಳ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ. ಜ್ಞಾನವಾಪಿ ಶೃಂಗಾರ್ ಗೌರಿ ವಿವಾದ ಪ್ರಕರಣದ ತೀರ್ಪು ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರಿದ್ದ ಏಕ ಪೀಠವು ವಿಚಾರಣೆಗೆ ಯೋಗ್ಯವಾಗಿದೆ ಎಂದು ಹೇಳಿದೆ.

Last Updated : Sep 12, 2022, 03:38 PM IST
  • ಜ್ಞಾನವಾಪಿ ಮಸೀದಿ ಪ್ರಕರಣ
  • ವಾರಣಾಸಿ ನ್ಯಾಯಾಲಯವು ಹಿಂದೂ ಪರ ತೀರ್ಪು
  • ಐದು ಮಹಿಳಾ ಹಿಂದೂಗಳ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ
Gyanvapi Case : ಜ್ಞಾನವಾಪಿ ಪ್ರಕರಣ ಹಿಂದೂಗಳ ಪರ ಕೋರ್ಟ್ ತೀರ್ಪು, ಮುಸ್ಲಿಂರ ಅರ್ಜಿ ವಜಾ  title=

Gyanvapi Masjid Verdict : ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯವು ಹಿಂದೂ ಪರ ತೀರ್ಪು ನೀಡಿದೆ. ಅಂಜುಮನ್ ಇಂತೇಜಾಮಿಯಾ ಸಮಿತಿಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಐದು ಮಹಿಳಾ ಹಿಂದೂಗಳ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ. ಜ್ಞಾನವಾಪಿ ಶೃಂಗಾರ್ ಗೌರಿ ವಿವಾದ ಪ್ರಕರಣದ ತೀರ್ಪು ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರಿದ್ದ ಏಕ ಪೀಠವು ವಿಚಾರಣೆಗೆ ಯೋಗ್ಯವಾಗಿದೆ ಎಂದು ಹೇಳಿದೆ. 

ಇದನ್ನೂ ಓದಿ : Gyanvapi Case Verdict : ಜ್ಞಾನವಪಿ ತೀರ್ಪು ನಮ್ಮ ಪರ ಬರದಿದ್ದರೆ ಹೈಕೋರ್ಟ್ ಹೋಗ್ತವೆ : ಮುಸ್ಲಿಂ ಪರ ವಕೀಲ 

ಜ್ಞಾನವಾಪಿ ಮಸೀದಿ ಪ್ರಕರಣದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾತನಾಡಿ, ನ್ಯಾಯಾಲಯವು ಮುಸ್ಲಿಂರ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 22 ಕ್ಕೆ ಮುಂದೂಡಿದೆ. ಜ್ಞಾನವಾಪಿ ಮಸೀದಿ ಪ್ರಕರಣದ ಅರ್ಜಿದಾರ ಸೋಹನ್ ಲಾಲ್ ಆರ್ಯ, ಇದು ಹಿಂದೂಗಳ ಪಾಲಿಗೆ ಸಂದ ಜಯವಾಗಿದೆ. ಇದು ಜ್ಞಾನವಾಪಿ ದೇವಾಲಯದ ಮೂಲಾಧಾರವಾಗಿದೆ. ಶಾಂತಿ ಕಾಪಾಡುವಂತೆ ನಾವು ಜನರಲ್ಲಿ  ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಹಿಂದೂಗಳ ಪರವಾಗಿ, ಜ್ಞಾನವಾಪಿ ಸಂಕೀರ್ಣದಲ್ಲಿರುವ ಶೃಂಗಾರ ಗೌರಿ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳಲ್ಲಿ ನಿತ್ಯ ಪೂಜೆ ಸಲ್ಲಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಲಾಯಿತು. ಮುಸ್ಲಿಂ ಕಡೆಯವರು ಈ ಪ್ರಕರಣವನ್ನು ವಜಾಗೊಳಿಸುವಂತೆ ಒತ್ತಾಯಿಸಿದರು, ಇದು ನ್ಯಾಯಾಲಯದಲ್ಲಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ವಾದಿಸಿತ್ತು. ಮುಸ್ಲಿಂ ಪರ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು ಸಿವಿಲ್ ಪ್ರಕ್ರಿಯಾ ಸಂಹಿತೆಯ ಆದೇಶ 07 ನಿಯಮ 11 ರ ಅಡಿಯಲ್ಲಿ ಈ ವಿಷಯವನ್ನು ಆಲಿಸಬಹುದು ಎಂದು ತೀರ್ಪಿನಲ್ಲಿ ತಿಳಿಸಿದೆ. ಮತ್ತೊಂದೆಡೆ, ಅರ್ಜಿದಾರ ಮಂಜು ವ್ಯಾಸ್ ಮಾತನಾಡಿ, ಇಂದು ಇಡೀ ದೇಶದ ಜನತೆ ಸಂತೋಷವಾಗಿದೆ. ನನ್ನ ಹಿಂದೂ ಸಹೋದರರು ಮತ್ತು ಸಹೋದರಿಯರು ಈ ದಿನವನ್ನು ಆಚರಿಸಲು ದೀಪಗಳನ್ನು ಬೆಳಗಿಸಬೇಕು ಎಂದರು.

ದೆಹಲಿಯ ರಾಖಿ ಸಿಂಗ್ ಮತ್ತು ವಾರಣಾಸಿಯ ನಾಲ್ವರು ಮಹಿಳೆಯರು ಕಳೆದ ವರ್ಷ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಜ್ಞಾನವಾಪಿ ಮಸೀದಿಯ ಹೊರಗೋಡೆಯ ಮೇಲಿರುವ ಹಿಂದೂ ದೇವತೆಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸುವಂತೆ ಒತ್ತಾಯಿಸಿದರು. ಅವರ ಆದೇಶದ ಮೇರೆಗೆ ಕಳೆದ ಮೇನಲ್ಲಿ ಜ್ಞಾನವಾಪಿ ಕ್ಯಾಂಪಸ್‌ನ ವಿಡಿಯೋಗ್ರಾಫಿ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯನ್ನು ಆರಾಧನಾ ಕಾಯಿದೆ 1991 ರ ಉಲ್ಲಂಘನೆ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮುಸ್ಲಿಂ ಕಡೆಯವರು ಅರ್ಜಿ ಸಲ್ಲಿಸಿದ್ದರು.

ವೀಡಿಯೋಗ್ರಾಫಿ ಸಮೀಕ್ಷೆಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದ್ದರೂ, ಪ್ರಕರಣವನ್ನು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾಯಿಸಲು ಆದೇಶಿಸಿದೆ. ಜ್ಞಾನವಾಪಿ ಸಮೀಕ್ಷಾ ವರದಿಯನ್ನು ಕಳೆದ ಮೇ 19ರಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸಮೀಕ್ಷೆಯ ಸಮಯದಲ್ಲಿ, ಹಿಂದೂ ಕಡೆಯವರು ಜ್ಞಾನವಾಪಿ ಮಸೀದಿಯ ವಾಜು ಖಾನಾದಲ್ಲಿ ಶಿವಲಿಂಗವನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದ್ದರು, ಆದರೆ ಮುಸ್ಲಿಂ ಕಡೆಯವರು ಅದನ್ನು ಕಾರಂಜಿ ಎಂದು ಹೇಳಿದ್ದರು.

ಇದನ್ನೂ ಓದಿ : GST On Rent: ಬಾಡಿಗೆ ಮನೆಯ ಮೇಲೂ 18% ಜಿಎಸ್‌ಟಿ ಪಾವತಿಸಬೇಕೇ?

ಆರಾಧನಾ ಸ್ಥಳ ಕಾಯಿದೆಯ ವಿರುದ್ಧ ಈ ವಿಷಯವನ್ನು ವಿವರಿಸಿದ ಮುಸ್ಲಿಂ ಕಡೆಯವರು ಈ ವಿಷಯವನ್ನು ವಿಚಾರಣೆಗೆ ಸಮರ್ಥವಾಗಿಲ್ಲ ಎಂದು ಹೇಳಿದ್ದರು. ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಮೊದಲು ನಡೆಸಲು ಜಿಲ್ಲಾ ನ್ಯಾಯಾಧೀಶರು ನಿರ್ಧರಿಸಿದ್ದರು. ಈ ಪ್ರಕರಣದಲ್ಲಿ ಉಭಯ ಪಕ್ಷಗಳ ವಾದಗಳು ಪೂರ್ಣಗೊಂಡಿವೆ. ಮುಸ್ಲಿಂ ಕಡೆಯವರು ಈ ವಿಷಯಕ್ಕೆ ಸಂಬಂಧಿಸದ ಅತ್ಯಂತ ಹಳೆಯ ದಾಖಲೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ ಎಂದು ಹಿಂದೂ ಕಡೆಯವರು ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News