ಎಲೆಕ್ಷನ್‍ನಲ್ಲಿ ಪ್ರಧಾನಿ ಮೋದಿ ಗೆದ್ದ ಖುಷಿಗೆ ಈ ಸಲೂನ್‌ನಲ್ಲಿ ಫ್ರೀ ಹೇರ್ ಕಟ್ಟಿಂಗ್ ಆಫರ್!

ಭೂಪಾಲ್ ಬಳಿಯಿರುವ ಬದ್ವಾನಿ ಜಿಲ್ಲೆಯ ಸೇಂಧ್ವಾದ  ದಾವಲ್ ಬಡೀ ಕ್ಷೇತ್ರದ ಹೇರ್ ಸಲೂನ್ ನಡೆಸುತ್ತಿರುವ ರವೀಂದ್ರ ಸೋನೆವಾಲ ಜನರಿಗೆ ಫ್ರೀ ಶೇವಿಂಗ್ ಆಫರ್ ನೀಡಿದ್ದಾರೆ.

Last Updated : May 25, 2019, 06:21 PM IST
ಎಲೆಕ್ಷನ್‍ನಲ್ಲಿ ಪ್ರಧಾನಿ ಮೋದಿ ಗೆದ್ದ ಖುಷಿಗೆ ಈ ಸಲೂನ್‌ನಲ್ಲಿ ಫ್ರೀ ಹೇರ್ ಕಟ್ಟಿಂಗ್ ಆಫರ್!

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಖುಷಿಯಲ್ಲಿ ದೇಶದೆಲ್ಲೆಡೆ ಜನತೆ ಸಂಭ್ರಮಿಸುತ್ತಿದ್ದರೆ, ಮಧ್ಯಪ್ರದೇಶದ ಭೂಪಾಲ್ ಬಳಿಯಿರುವ ಬದ್ವಾನಿ ಜಿಲ್ಲೆಯ ಸೇಂಧ್ವಾದ  ದಾವಲ್ ಬಡೀ ಕ್ಷೇತ್ರದ ಹೇರ್ ಸಲೂನ್ ನಡೆಸುತ್ತಿರುವ ರವೀಂದ್ರ ಸೋನೆವಾಲ ಜನರಿಗೆ ಫ್ರೀ ಶೇವಿಂಗ್ ಆಫರ್ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ಹಮ್ಮಿಕೊಂಡ ಹಲವು ಯೋಜನೆಗಳಿಂದ ತಾವು ಪ್ರಭಾವಿತರಾಗಿದ್ದು, ಮೋದಿ ಗೆದ್ದ ಖುಷಿಯಲ್ಲಿ ಒಂದು ದಿನ ಪೂರ್ತಿ ಉಚಿತವಾಗಿ ಜನರಿಗೆ ಕೌರ ಸೇವೆ ಮಾಡುವುದಾಗಿ ರವೀಂದ್ರ ಹೇಳಿದ್ದಾರೆ.

"ಪ್ರಧಾನಿ ಮೋದಿ ಅವರು ಎಷ್ಟು ಮತಗಳನ್ನು ಗೆದ್ದಿದ್ದಾರೋ ಅಷ್ಟು ಜನರಿಗೆ ಇಂದು ಉಚಿತವಾಗಿ ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡಬೇಕು ಅಂದುಕೊಂಡಿದ್ದೇನೆ. ನಮ್ಮ ಅಂಗಡಿಯಲ್ಲಿ ಫ್ರೀ ಹೇರ್ ಕಟ್ಟಿಂಗ್ ಬಗ್ಗೆ ಇಡೀ ಊರಲ್ಲೇ ಚರ್ಚೆ ಆಗ್ತಿದೆ. ಬಹಳ ದೂರದ ಪ್ರದೇಶಗಳಿಂದ ಹೇರ್ ಕಟ್ ಮಾಡಿಸಿಕೊಳ್ಳಲು ಜನ ಬರ್ತಿದ್ದಾರೆ" ಎಂದು ರವೀಂದ್ರ ಹೇಳಿದ್ದಾರೆ.
 

More Stories

Trending News