ಜನವರಿ 22 ರಂದು ದೇಶಾದ್ಯಂತ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ :ಕೇಂದ್ರ ಸರ್ಕಾರ ಘೋಷಣೆ

Ayodhya News: ರಾಮ ಮಂದಿರದ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಜನವರಿ 22 ರಂದು ಇಡೀ ದೇಶದಲ್ಲಿ ಅರ್ಧ ದಿನ ರಜೆ. ದೇಶದಾದ್ಯಂತ ಸರ್ಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 2.30 ರವರೆಗೆ ಅರ್ಧ ದಿನ ರಜೆ  ಇರಲಿದೆ.  

Written by - Ranjitha R K | Last Updated : Jan 18, 2024, 06:39 PM IST
  • ಜನವರಿ 22 ರಂದು ಇಡೀ ದೇಶದಲ್ಲಿ ಅರ್ಧ ದಿನ ರಜೆ
  • ಬೆಳಿಗ್ಗೆಯಿಂದ ಮಧ್ಯಾಹ್ನ 2.30 ರವರೆಗೆ ಅರ್ಧ ದಿನ ರಜೆ
  • ನೇರ ಪ್ರಸಾರವನ್ನು ವೀಕ್ಷಿಸಲು ಅನುಕೂಲವಾಗುವಂತೆ ಈ ಕ್ರಮ
ಜನವರಿ 22 ರಂದು ದೇಶಾದ್ಯಂತ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ :ಕೇಂದ್ರ ಸರ್ಕಾರ ಘೋಷಣೆ  title=

Ayodhya News : ರಾಮ ಮಂದಿರದ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಜನವರಿ 22 ರಂದು ಇಡೀ ದೇಶದಲ್ಲಿ ಅರ್ಧ ದಿನ ರಜೆ ಘೋಷಿಸಲಾಗಿದೆ. ದೇಶದಾದ್ಯಂತ ಸರ್ಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 2.30ರವರೆಗೆ ಅರ್ಧ ದಿನ ರಜೆ ಇರುತ್ತದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಜನವರಿ 22 ರಂದು ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳನ್ನು ಅರ್ಧ ದಿನ ಮುಚ್ಚಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಜನರಲ್ಲಿರುವ ಅಗಾಧ ಉತ್ಸಾಹವನ್ನು ಗಮನದಲ್ಲಿಟ್ಟುಕೊಂಡು ಜನವರಿ 22 ರಂದು ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನದ ರಜೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. 

ಮುಖ್ಯ ಅತಿಥಿಯಾಗಲಿದ್ದಾರೆ ಪ್ರಧಾನಿ ಮೋದಿ : 
ಅಯೋಧ್ಯೆ ರಾಮಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ರಾಮಮಂದಿರದಲ್ಲಿ ಜನವರಿ 22 ರ ಪ್ರಾಣ ಪ್ರತಿಷ್ಠಾ ಸಮಾರಂಭದ ಮೊದಲು ನಡೆಸಲಾಗುತ್ತಿರುವ ಧಾರ್ಮಿಕ ವಿಧಿಗಳ ಅಂಗವಾಗಿ, ಬುಧವಾರ ಸರಯೂ ನದಿಯ ದಡದಲ್ಲಿ ಕಲಶ ಪೂಜೆಯನ್ನು ನೆರವೇರಿಸಲಾಯಿತು. 

ಇದನ್ನೂ ಓದಿ : Daily GK Quiz: ಮಾನವನ ಅಂಗಾಂಗಗಳಲ್ಲಿ ಅತ್ಯಂತ ದೊಡ್ಡ ಅಂಗ ಯಾವುದು?

ಜನವರಿ 22ರವರೆಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.ಮಂಗಳವಾರ ಆರಂಭವಾದ ಧಾರ್ಮಿಕ ವಿಧಿ ವಿಧಾನಗಳು ಬುಧವಾರವೂ ಸರಯೂ ನದಿಯ ದಡದಲ್ಲಿ ಕಲಶ ಪೂಜೆಯೊಂದಿಗೆ ಮುಂದುವರೆಯಿತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ, ಅವರ ಪತ್ನಿ ಮತ್ತು ಇತರರು ಸರಯೂ ನದಿಯ ದಡದಲ್ಲಿ 'ಕಲಶ ಪೂಜೆ' ನೆರವೇರಿಸಿದರು. ಈಗಾಗಲೇ ವಿಧಿವಿಧಾನಗಳು ಪ್ರಾರಂಭವಾಗಿದ್ದು, ಜನವರಿ 22 ರವರೆಗೆ ನಡೆಯಲಿದೆ ಎಂದು  ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು ಹೇಳಿದ್ದಾರೆ. 11 ಪುರೋಹಿತರು ಎಲ್ಲಾ ದೇವರು ಮತ್ತು ದೇವತೆಗಳನ್ನು ಆವಾಹನೆ ಮಾಡುವ  ಪೂಜಾ ಕಾರ್ಯವನ್ನು ನೆರವೇರಿಸಿದ್ದಾರೆ. 

ಗರ್ಭಗುಡಿಗೆ  ಶ್ರೀ ರಾಮನ ವಿಗ್ರಹ : 
ಬುಧವಾರ ರಾತ್ರಿ  ಶ್ರೀರಾಮನ ವಿಗ್ರಹವನ್ನು ರಾಮಮಂದಿರದ ಗರ್ಭಗುಡಿಗೆ ತರಲಾಗಿತ್ತು. ವಿಗ್ರಹವನ್ನು ಒಳಗೆ ತರುವ ಮೊದಲು ಗರ್ಭಗುಡಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಗುರುವಾರ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸುವ ಸಾಧ್ಯತೆ ಇದೆ ಎಂದು ಮಿಶ್ರಾ ಹೇಳಿದ್ದಾರೆ. ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ : ಸಾವು ಸಮೀಪಿಸಿದಾಗ ದೇಹದಲ್ಲಿ ಈ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News