ನವದೆಹಲಿ: ಕೋವಿನ್ ಡೇಟಾ ಹ್ಯಾಕಿಂಗ್ ವರದಿಗಳನ್ನು ಸುಳ್ಳು ಮತ್ತು ಆಧಾರರಹಿತ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health Ministry) ಹೇಳಿದೆ. ಕೋವಿನ್ ಡಾಟಾ ಲೀಕ್ (CoWin Data Leak) ಆಗಿರುವ ವರದಿಗಳನ್ನು ತಳ್ಳಿಹಾಕಿರುವ ಆರೋಗ್ಯ ಸಚಿವಾಲಯ, ಕೋವಿನ್ ವ್ಯಾಕ್ಸಿನೇಷನ್ (Vaccination) ಸಂಬಂಧಿತ ಡೇಟಾವನ್ನು ಮಾತ್ರ ಸಂಗ್ರಹಿಸುತ್ತದೆ ಮತ್ತು ಇದು ಅತ್ಯಂತ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ತನಿಖೆ ನಡೆಯುತ್ತಿದೆ:
ಕೇಂದ್ರ ಆರೋಗ್ಯ ಸಚಿವಾಲಯ (Health Ministry) ಮತ್ತು ಲಸಿಕೆ ಆಡಳಿತದ ಅಧಿಕಾರ ಗುಂಪು (EGVAC) ಈ ವಿಷಯವನ್ನು ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು ತನಿಖೆ ನಡೆಸುತ್ತಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ- CoWin Portal ಬಳಸುವಾಗ ಈ ವಿಚಾರಗಳ ಬಗ್ಗೆ ಎಚ್ಚರವಿರಲಿ, ತಪ್ಪಿದರೆ ಬ್ಲಾಕ್ ಆದೀತು..!
ವಾಸ್ತವವಾಗಿ, ಒಂದು ಗುಂಪಿನ ಹ್ಯಾಕರ್ಗಳು ಕೋವಿನ್ನಲ್ಲಿ 150 ಮಿಲಿಯನ್ ಬಳಕೆದಾರರ ಡೇಟಾಬೇಸ್ ಅನ್ನು ಹಾಳು ಮಾಡಿದ್ದಾರೆ ಮತ್ತು ಆ ಡೇಟಾವನ್ನು ಮಾರಾಟ ಮಾಡಲು ಸಿದ್ಧರಾಗಿದ್ದಾರೆ ಎಂದು ಗುರುವಾರ ವರದಿಗಳು ಬಂದಿದ್ದವು.
ಕೋವಿಡ್ ಡೇಟಾವನ್ನು ಹಂಚಲಾಗುವುದಿಲ್ಲ:
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಇಜಿವಿಎಸಿ ಅಧ್ಯಕ್ಷ ಡಾ.ಆರ್.ಎಸ್.ಶರ್ಮಾ ಅವರು ಡೇಟಾ ಸೋರಿಕೆಯ ಹಕ್ಕು ಸುಳ್ಳು. ಕೋವಿನ್ನಲ್ಲಿ (Cowin) ಲಭ್ಯವಿರುವ ಬಳಕೆದಾರರ ಗೌಪ್ಯ ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ- Corona Vaccine: ಲಸಿಕೆ ಪ್ರಮಾಣಪತ್ರದಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ ತಪ್ಪಿದ್ದರೆ ಅದನ್ನು ಈ ರೀತಿ ಸರಿಪಡಿಸಿ
ಕೋವಿನ್ ಪ್ಲಾಟ್ಫಾರ್ಮ್ ಅನ್ನು ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಮತ್ತು ಕ್ಯಾಪ್ಚಾ ಸೆಟ್ಟಿಂಗ್ನೊಂದಿಗೆ ಸುರಕ್ಷಿತಗೊಳಿಸಲಾಗಿರುವುದರಿಂದ ಅದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವಾಲಯವು ಈ ಹಿಂದೆಯೂ ಮಾಹಿತಿ ನೀಡಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.