WhatsApp Privacy Policy Update - ನವದೆಹಲಿ: ಖ್ಯಾತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ನ ತನ್ನ ಗೌಪ್ಯತೆ ನೀತಿಯನ್ನು ನವೀಕರಿಸಿದಾಗಿನಿಂದ ಬಳಕೆದಾರರು ಆತಂಕಕ್ಕೊಳಗಾಗಿದ್ದಾರೆ. ವರದಿಯ ಪ್ರಕಾರ, ಈ ಗೌಪ್ಯತೆ ನೀತಿಯಿಂದಾಗಿ ವಾಟ್ಸಾಪ್ ತನ್ನ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಿನ ಸಂಖ್ಯೆಯ ಬಳಕೆದಾರರು ತಮ್ಮ ವಾಟ್ಸಾಪ್ನ ಆಯ್ಕೆ ಸಿಗ್ನಲ್ ಮತ್ತು ಟೆಲಿಗ್ರಾಮ್ಗೆ ಬದಲಾಯಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಯೈರುವ ಲೋಕಲ್ ಸರ್ಕಲ್ ಪ್ರಕಾರ, ನೂತನ ನವೀಕರಣದ ಬಳಿಕ ಭಾರತದಲ್ಲಿ ಕೇವಲ ಶೇ.18 ರಷ್ಟು ಬಳಕೆದಾರರು ಮಾತ್ರ ವಾಟ್ಸ್ ಆಪ್ ಮುಂದುವರೆಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ ಶೇ.36ರಷ್ಟು ಬಳಕೆದಾರರು ತಾವು ವಾಟ್ಸ್ ಆಪ್ ಬಳಕೆಯನ್ನು ನಿಧಾನಕ್ಕೆ ಕಡಿಮೆಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಶೇ.15 ರಷ್ಟು ಬಳಕೆದಾರರು ತಾವು ಈಗಾಗಲೇ ವಾಟ್ಸ್ ಆಪ್ ಬಳಕೆಯನ್ನು ನಿಲ್ಲಿಸಿರುವುದಾಗಿ ಹೇಳಿದ್ದಾರೆ. ಈ ಕುರಿತು ಸಮೀಕ್ಷೆ ನಡೆಸಿರುವ ಲೋಕಲ್ ಸರ್ಕಲ್ ವಾಟ್ಸ್ ಆಪ್ ಬಳಕೆ ಮಾಡುವ ಸುಮಾರು 8977 ಬಳಕೆದಾರರಿಂದ ಅಭಿಪ್ರಾಯ ಸಂಗ್ರಹಿಸಿದ್ದು, ಬಳಕೆದಾರರ ಅಭಿಪ್ರಾಯದ ಮೂಲಕ ಈ ನಿಷ್ಕರ್ಷಕ್ಕೆ ತಲುಪಿದೆ.
ಕಳೆದ ಕೆಲ ದಿನಗಳ ಹಿಂದೆ ತನ್ನ ಬಳಕೆದಾರರಿಗೆ ಸಂದೇಶ ರವಾನಿಸಿದ್ದ ವಾಟ್ಸ್ ಆಪ್, ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಮೂಲ ಕಂಪನಿಯಾಗಿರುವ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಜೊತೆಗೆ ಹಂಚಿಕೊಳ್ಳುವುದಾಗಿ ಹೇಳಿತ್ತು. ಅಷ್ಟೇ ಅಲ್ಲ ಒಂದು ವೇಳೆ ಬಳಕೆದಾರರಿಗೆ ಈ ಷರತ್ತು ಒಪ್ಪಿಗೆ ಇಲ್ಲದಿದ್ದರೆ ಅಂತವರ ಮೊಬೈಲ್ ನಲ್ಲಿ ವಾಟ್ಸ್ ಆಪ್ ತನ್ನ ಕಾರ್ಯ ಸ್ಥಗಿತಗೊಳಿಸಲಿದೆ ಎಂದು ಹೇಳಿ, ಷರತ್ತು ಒಪ್ಪಿಕೊಳ್ಳಲು ಫೆಬ್ರುವರಿ 8 ರವರೆಗೆ ಕಾಲಾವಕಾಶ ನೀಡಿತ್ತು. ಆದರೆ, ಬಳಿಕ ತೀವ್ರಗೊಂಡ ವಿರೋಧದ ಹಿನ್ನೆಲೆ ವಾಟ್ಸ್ ಆಪ್ ಈ ಗಡುವನ್ನು ಮೇ 15ರವರೆಗೆ ವಿಸ್ತರಿಸಿದೆ.
ವಾಟ್ಸ್ ಆಪ್ ನ ಈ ಸೂಚನೆಯಬಲಿಕ ಭಾರತದಲ್ಲಿ ವಾಟ್ಸ್ ಆಪ್ ಡೌನ್ಲೋಡ್ ಶೇ.35 ರಷ್ಟು ಇಳಿಕೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸೆನ್ಸರ್ ಟವರ್, ಜನವರಿ 1 ರಿಂದ ಜನವರಿ 5ರ ಅವಧಿಯಲ್ಲಿ ವಾಟ್ಸ್ ಆಪ್ ಡೌನ್ಲೋಡ್ ಪ್ರಮಾಣ 20 ಲಕ್ಷದಿಂದ 13 ಲಕ್ಷಕ್ಕೆ ಕುಸಿದಿದೆ ಎಂದು ಹೇಳಿದೆ.
ದೆಹಲಿ ಹೈಕೋರ್ಟ್ ಹೇಳಿದ್ದೇನು?
ಇನ್ನೊಂದೆಡೆ ಇಂದು ದೆಹಲಿ ಹೈ ಕೋರ್ಟ್ ನಲ್ಲಿ ವಾಟ್ಸ್ ಆಪ್ ನ ನೂತನ ಗೌಪ್ಯತಾ ನೀತಿಯ (WhatsApp Privacy Policy Update) ಕುರಿತು ವಿಚಾರಣೆ ನಡೆದಿದೆ. ಈ ವಿಚಾರಣೆಯ ವೇಳೆ ವಾದ ಮಂಡಿಸಿರುವ ಅರ್ಜಿದಾರು, ಯುರೋಪ್ ಹಾಗೂ ಅಮೇರಿಕಾ ರಾಷ್ಟ್ರಗಳಲ್ಲಿ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನೀತಿಯನ್ನು ಒಪ್ಪಿಕೊಳ್ಳುವ ಹಾಗೂ ತಿರಸ್ಕರಿಸುವ ಎರಡೂ ಆಯ್ಕೆಗಳನ್ನು ನೀಡುತ್ತದೆ. ಆದರೆ, ಭಾರತದಲ್ಲಿ ವಾಟ್ಸ್ ಆಪ್ ಇಂತಹ ಯಾವುದೇ ಆಯ್ಕೆಯನ್ನು ನೀಡಿಲ್ಲ. ಇದಕ್ಕೆ ಉತ್ತರಿಸಿರುವ ನ್ಯಾಯಪೀಠ, ಒಂದು ವೇಳೆ ನಿಮ್ಮ ಬಳಿ ಆಯ್ಕೆ ಇದ್ದರೆ ನೀವು ವಾಟ್ಸ್ ಆಪ್ ಬಳಕೆ ಸ್ಥಗಿತಗೊಳಿಸಬಹುದು ಎಂದು ಹೇಳಿದೆ.
The Delhi High Court begins hearing Chaitanya Rohilla's petition challenging Whatsapp's updated privacy policy. pic.twitter.com/HmJu64lROF
— Live Law (@LiveLawIndia) January 18, 2021
ಈ ವಿಚಾರಣೆಯ ವೇಳೆ ನ್ಯಾಯಾಲಯ ಅರ್ಜಿದಾರರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದೆ. ನಿಮ್ಮ ದೂರು ಏನು? ಇದೊಂದು ಖಾಸಗಿ ಆಪ್ ಆಗಿದೆ, ನೀವು ಅದರಲ್ಲಿ ಶಾಮೀಲಾಗಬೇಡಿ, ನಿಮ್ಮ ದತ್ತಾಂಶಗಳ ದುರ್ಬಳಕೆಯಾಗಲಿದೆ ಎಂದು ನಿಮಗನ್ನಿಸುತ್ತದೆಯೇ? ಎಂದು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿರುವ ಅರ್ಜಿದಾರರ ಪರ ವಕೀಲರು 'ವಾಟ್ಸ್ ಆಪ್ ವಿಶ್ವ ಮಟ್ಟದಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ. ನಮ್ಮಿಂದ ಪಡೆಯಲಾಗಿರುವ ಎಲ್ಲ ಮಾಹಿತಿ ಅದು ಹಂಚಿಕೊಳ್ಳುತ್ತದೆ' ಎಂದು ಹೇಳಿದೆ.
ಇದನ್ನು ಓದಿ-WhatsApp Privacy Policy: ಯಾರು ಸೇಫ್ ಮತ್ತು ಯಾರು Unsafe?
ಈ ವೇಳೆ ಹೇಳಿಕೆ ನೀಡಿರುವ ನ್ಯಾಯಾಲಯ, ಇಲ್ಲಿ ಒಟ್ಟು ಎರಡು ಸಂಗತಿಗಳಿವೆ. ಮೊದಲನೆಯದಾಗಿ ನಿಮ್ಮ ವೈಯಕ್ತಿಕ ಸಂದೇಶಗಳನ್ನು ಪಡೆದು ಹಂಚಿಕೊಳ್ಳುವುದು ಹಾಗೂ ಎರಡನೆಯದಾಗಿ ನಿಮ್ಮ ಬ್ರೌಸಿಂಗ್ ಹಿಸ್ಟರಿ ಹಂಚಿಕೊಳ್ಳಲಾಗುತ್ತದೆ ಎಂದಿದೆ. ಇದಕ್ಕೆ ಉತ್ತರಿಸಿರುವ ವಕೀಲರು, ಬ್ರೌಸಿಂಗ್ ಹಿಸ್ಟರಿಯ ವಿಶ್ಲೇಷಣೆ ನಡೆಸಿ ಗ್ರಾಹಕರ ಬಗ್ಗೆ ಒಂದು ತೀರ್ಮಾನ ಕೈಗೊಂಡು ಅದನ್ನು ಹಂಚಿಕೊಳ್ಳಲಾಗುತ್ತದೆ ಎಂದಿದ್ದಾರೆ. ಆದರೆ, ಈ ಕೆಲಸದಲ್ಲಿ ಎಲ್ಲಾ ಆಪ್ ಗಳು ತೊಡಗಿವೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನು ಓದಿ- ಸಂಸದೀಯ ಸಮಿತಿಯಿಂದ Facebook,Twitter ಗೆ ಸಮನ್ಸ್ ಜಾರಿ
ವಿಚಾರಣೆಯ ವೇಳೆ ವಾಟ್ಸ್ ಆಪ್ ಪರ ವಾದ ಮಂಡಿಸಿರುವ ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ, ವಾಟ್ಸ್ ಆಪ್ ಬಳಕೆ ಸಂಪೂರ್ಣ ಸುರಕ್ಷಿತವಾಗಿದ್ದು, ವಾಟ್ಸ್ ಆಪ್ ನಲ್ಲಿ ಬಳಕೆದಾರರು ತಮ್ಮ ಬಂಧು-ಮಿತ್ರರ ಜೊತೆಗೆ ನಡೆಸುವ ಸಂವಹನ ಸಂಪೂರ್ಣ ಎನ್ಕ್ರಿಪ್ಟ್ ಹಾಗೂ ಸುರಕ್ಷಿತವಾಗಿದೆ ಎಂಬುದನ್ನು ಅರ್ಜಿದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ನ್ಯಾಯಪೀಠವನ್ನು ಕೋರಿದ್ದಾರೆ. ಇಂದಿನ ವಿಚಾರಣೆ ಇಲ್ಲಿಯೇ ಮುಕ್ತಾಯಗೊಂಡಿದ್ದು, ಈ ಕುರಿತಾದ ಮುಂದಿನ ವಿಚಾರಣೆ ಜನವರಿ 25ಕ್ಕೆ ನಡೆಯಲಿದೆ.
ಇದನ್ನು ಓದಿ- Whatsapp Privacy Policy: ಕೆಟ್ಟ ಮೇಲೆ ಬುದ್ದಿ ಕಲಿತ ವಾಟ್ಸ್ ಆಪ್, ಸದ್ಯಕ್ಕಿಲ್ಲ ಗೌಪ್ಯತಾ ನೀತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.