ಆಧುನಿಕ ಜಗತ್ತಿನಲ್ಲಿ ಶಸ್ತ್ರಾಸ್ತ್ರ ಬೇಡ ಎನ್ನುವ ರಾಷ್ಟ್ರವೇ ಇಲ್ಲ. ಏಕೆಂದರೆ ತನ್ನ ದೇಶವನ್ನು ಕಾಪಾಡಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಕೊಂಡುಕೊಳ್ಳುವ ಅನಿವಾರ್ಯತೆ ಪ್ರತಿಯೊಂದು ರಾಷ್ಟ್ರಕ್ಕೂ ಇರುತ್ತದೆ. ಬಹುತೇಕ ದೇಶಗಳು ತಮಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುತ್ತವೆ. ಆದರೆ ಈ ಜಗತ್ತಿನಲ್ಲಿ ಕೆಲವೇ ಕೆಲವು ರಾಷ್ಟ್ರಗಳು ಯುದ್ಧ ಸಾಮಗ್ರಿಗಳನ್ನ ರಫ್ತು ಮಾಡುತ್ತವೆ. ಈ ಸಾಲಿನಲ್ಲಿ ಭಾರತದ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಅತ್ಯದ್ಭುತವಾಗಿದೆ.
ರಕ್ಷಣಾ ಸಾಮಗ್ರಿ ಅಥವಾ ಶಸ್ತ್ರಾಸ್ತ್ರಗಳ ಬೇಡಿಕೆ ಹೆಚ್ಚಾದಂತೆ ಶಸ್ತ್ರಾಸ್ತ್ರ ರಫ್ತು ಮಾಡುವ ದೇಶಕ್ಕೆ ಊಹೆಗೂ ಮೀರಿದ ಲಾಭ ಬರುತ್ತದೆ. ಆದರೆ ಭಾರತವನ್ನ ಈ ಹಿಂದಿನ ಅಂಕಿ-ಅಂಶ ಆಧಾರದಿ ಗಮನಿಸುವುದಾದರೆ ರಕ್ಷಣಾ ಉತ್ಪನ್ನ ರಫ್ತಿನಲ್ಲಿ ಹಿಂದುಳಿದಿತ್ತು. ಆದರೆ ಸದ್ಯ ಭಾರತ ಈವರೆಗೂ ಮಾಡದ ಸಾಧನೆ ಮಾಡುತ್ತಿದೆ. ಅದರಲ್ಲೂ ಸ್ವದೇಶಿ ಯುದ್ಧ ವಿಮಾನ ಅಂದ್ರೆ ಭಾರತ ನೆಲದ ಯುದ್ಧ ವಿಮಾನಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಇದು ಭಾರತದ ರಕ್ಷಣಾ ಸಾಮಗ್ರಿ ರಫ್ತು ಮೊತ್ತವನ್ನು ಹೆಚ್ಚಿಸುವ ಜೊತೆಗೆ, ಭಾರಿ ಪ್ರಮಾಣದ ಆದಾಯ ತಂದುಕೊಡುತ್ತಿದೆ.
ಇದನ್ನೂ ಓದಿ: ಗುರುಗ್ರಹ ಹೋಲುವ ಮತ್ತೊಂದು ಗ್ರಹ ಸೌರಮಂಡಲದ ಹೊರಗೆ ಪತ್ತೆ
'ತೇಜಸ್'ಗೆ ಡಿಮ್ಯಾಂಡ್
ಭಾರತದ ಲಘು ಯುದ್ಧ ವಿಮಾನ 'ತೇಜಸ್' ಜಗತ್ತಿನಾದ್ಯಂತ ಸಖತ್ ಸೌಂಡ್ ಮಾಡುತ್ತಿದೆ. ನಮ್ಮ ಬೆಂಗಳೂರಿನ ಹೆಮ್ಮೆ 'ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್' ಭಾರತೀಯರಿಗೆ ಹೆಮ್ಮೆ ತರುವಂತಹ ಕೆಲಸ ಮಾಡಿದೆ. 'ತೇಜಸ್' ಸೃಷ್ಟಿಕರ್ತ 'ಎಚ್ಎಎಲ್' ಭಾರತೀಯ ಸೇನೆಗೆ ಎಂದೂ ಮರೆಯಲಾಗದಂಥ ಗಿಫ್ಟ್ ಕೊಟ್ಟಿದೆ. 'ತೇಜಸ್' ಅಬ್ಬರ ನೋಡಿದ ವಿವಿಧ ದೇಶಗಳು ಖರೀದಿಗಾಗಿ ಮುಗಿಬಿದ್ದಿವೆ. ಇದು ಭಾರತದ ಭೊಕ್ಕಸಕ್ಕೆ ಮತ್ತಷ್ಟು ಲಾಭ ತಂದುಕೊಡುವ ಲಕ್ಷಣವಾಗಿದೆ. ಏಕೆಂದರೆ ಕಳೆದ ಸಾಲಿನಲ್ಲಿ ಭಾರತ ₹13 ಸಾವಿರ ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿ ರಫ್ತು ಮಾಡಿತ್ತು. ಇದೀಗ ಈ ಮೊತ್ತವು ಡಬಲ್ ಆಗುವ ನಿರೀಕ್ಷೆ ಇದೆ.
ಭಾರತಕ್ಕೆ ಬೇಡಿಕೆ..!
ಒಂದಾನೊಂದು ಕಾಲದಲ್ಲಿ ಯುದ್ಧ ವಿಮಾನ ಕೊಡಿ ಎಂದು ಭಾರತ ಬೇರೆ ರಾಷ್ಟ್ರಗಳ ಮೊರೆ ಹೋಗುತ್ತಿತ್ತು. ಆದರೆ ಈಗ ಜಗತ್ತಿನ ಹತ್ತಾರು ರಾಷ್ಟ್ರಗಳು ಭಾರತ ತಯಾರಿಸಿರುವ ಯುದ್ಧ ವಿಮಾನಕ್ಕೆ ಬೇಡಿಕೆ ಇಡುತ್ತಿವೆ. ಅದರಲ್ಲೂ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ 'ತೇಜಸ್' ಯುದ್ಧ ವಿಮಾನಕ್ಕೆ ಬೇಡಿಕೆ ಸಲ್ಲಿಸುತ್ತಿದೆ. ಆಸ್ಪ್ರೇಲಿಯಾ, ಅರ್ಜೆಂಟೀನಾ, ಮಲೇಷ್ಯಾ, ಇಂಡೋನೇಷ್ಯಾ, ಈಜಿಪ್ಟ್ ಹಾಗೂ ಫಿಲಿಪ್ಪೀನ್ಸ್ ಸೇರಿದಂತೆ ಜಗತ್ತಿನಾದ್ಯಂತ ಹತ್ತಾರು ದೇಶಗಳು ತೇಜಸ್ ಯುದ್ಧ ವಿಮಾನಕ್ಕೆ ಬೇಡಿಕೆ ಸಲ್ಲಿಸಿವೆ.
ಈಗಾಗಲೇ ಮಲೇಷ್ಯಾ 18 ತೇಜಸ್ ಲಘು ಯುದ್ಧ ವಿಮಾನ ಖರೀದಿ ಮಾಡಿದೆ. ಸದ್ಯಕ್ಕೆ ಅರ್ಜೆಂಟೀನಾ ಕೂಡ ತೇಜಸ್ ಖರೀದಿಗೆ ಸಾಕಷ್ಟು ಮನವಿ ಮಾಡಿದೆ. ಇನ್ನುಳಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ 'ತೇಜಸ್' ಇಷ್ಟವಾಗಿಬಿಟ್ಟಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ 'ಎಚ್ಎಎಲ್'. ಹೇಗೆಂದರೆ ಇಷ್ಟು ಕಡಿಮೆ ವೆಚ್ಚ ಮಾಡಿ, ಅತ್ಯದ್ಭುತ ಫೀಚರ್ಸ್ ಇರುವ ವಿಮಾನ ನೀಡಿದೆ 'ಎಚ್ಎಎಲ್'. ಇದೇ ಕಾರಣಕ್ಕೆ 'ತೇಜಸ್' ವಿಮಾನ ಖರೀದಿ ಲಾಭ ಕೊಡುತ್ತದೆ ಎಂಬ ಚಿಂತನೆ ಇಡೀ ಜಗತ್ತನ್ನೇ ಆವರಿಸಿದೆ.
ಇದನ್ನೂ ಓದಿ: History of Ganesh Chaturthi: ದೇಶದೆಲ್ಲೆಡೆ ಗಣೇಶ ಚತುರ್ಥಿ ಬೆಳೆದು ಬಂದ ಬಗೆ...
ಹೊಸ ಇತಿಹಾಸ..!
ಹೌದು, ಈಗ 'ತೇಜಸ್' ಯುದ್ಧ ವಿಮಾನ ಖರೀದಿಗೆ ಮುಗಿಬಿದ್ದಂತೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಯುದ್ಧ ವಿಮಾನ ಹಾಗೂ ರಕ್ಷಣಾ ಸಾಮಗ್ರಿಗೆ ಜಗತ್ತು ಭಾರತದ ಬಳಿ ಬರಬಹುದು. ಕಡಿಮೆ ಖರ್ಚಲ್ಲಿ ಇಷ್ಟು ಉತ್ತಮ ವೆಪನ್ಸ್ಗಳು ಸಿಕ್ಕರೆ ಜಗತ್ತಿನ ಬಡ ದೇಶಗಳು ಹಾಗೂ ಅಭಿವೃದ್ಧಿ ಹೊಂದುತ್ತಿರುವ ಇತರ ದೇಶಗಳು ಭಾರತಕ್ಕೆ ಬೇಡಿಕೆ ಇಡಬಹುದು. ಹೀಗಾಗಿ ಭಾರತ ರಕ್ಷಣಾ ಸಾಮಗ್ರಿ ರಫ್ತು ವಿಚಾರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಬಹುದು.
ಒಟ್ಟಾರೆ ದೂರದೃಷ್ಟಿ ಹಾಗೂ ವಿಚಾರವಂತಿಕೆ ಪರಿಣಾಮ ಭಾರತ ಇದೀಗ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿದೆ. ಇದಕ್ಕೂ ಮೊದಲು ಬಲಾಢ್ಯ ರಾಷ್ಟ್ರಗಳ ಎದುರು ಬೇಡಿಕೆ ಇಡಬೇಕಿತ್ತು. ಆದ್ರೆ ಈಗ ಪರಿಸ್ಥಿತಿ ಬದಲಾಗಿದ್ದು ನಮ್ಮ ಬಳಿ ಬಲಾಢ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ, ಯುದ್ಧ ಸಾಮಗ್ರಿಗಳ ಖರೀದಿಗೆ ಬರುತ್ತಿವೆ. ಮುಂದೊಂದು ದಿನ ರಕ್ಷಣಾ ಸಾಮಗ್ರಿ ರಫ್ತಿನಲ್ಲಿ ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಎದುರು ತೊಡೆತಟ್ಟುವುದು ಗ್ಯಾರಂಟಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.