Karnataka Rain: ತೇಜ್ ಮತ್ತು ಹಮೂನ್ ಅವಳಿ ಚಂಡಮಾರುತಗಳು ಸದ್ಯ ಭಾರತದ ಮುಖ್ಯ ಭೂಭಾಗದ ಎರಡೂ ಬದಿಗಳಲ್ಲಿ ಚದುರಿಹೋಗಿದೆ. ಈ ಬಳಿಕ ದಕ್ಷಿಣ ಭಾರತದ ಮೇಲೆ ಮಳೆ ಪ್ರಭಾವ ವೇಗವನ್ನು ಪಡೆದುಕೊಳ್ಳಲು ಸಾಧ್ಯತೆ ಇದೆ.
ಇದನ್ನೂ ಓದಿ: ಭಾರತದ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ: ಸಿರಾಜ್ ಸ್ಥಾನದಲ್ಲಿ ಈ ಸ್ಪಿನ್ನರ್’ಗೆ ಅವಕಾಶ
ಮುಂದಿನ 3 ದಿನಗಳ ಕಾಲ (ಅಕ್ಟೋಬರ್ 29-31) ತಮಿಳುನಾಡು ಮತ್ತು ಕೇರಳದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ವ್ಯಾಪಕವಾಗಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಭಾನುವಾರ ಮತ್ತು ಸೋಮವಾರ (ಅಕ್ಟೋಬರ್ 29-30) ಕರಾವಳಿ ಮತ್ತು ದಕ್ಷಿಣ ಒಳನಾಡು ಕರ್ನಾಟಕಕ್ಕೂ ಮಳೆ ಭೀತಿ ಹರಡುವ ಸಾಧ್ಯತೆಯಿದೆ.
ಭಾನುವಾರ ಮತ್ತು ಸೋಮವಾರ (ಅಕ್ಟೋಬರ್ 29-30) ತಮಿಳುನಾಡು, ಪುದುಚೇರಿ, ಕಾರೈಕಾಲ್, ದಕ್ಷಿಣ ಆಂತರಿಕ ಕರ್ನಾಟಕ ಮತ್ತು ಕೇರಳದ ಪ್ರತ್ಯೇಕ ಭಾಗಗಳಲ್ಲಿ (64.5 ಮಿಮೀ-115.5 ಮಿಮೀ) ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಈ ಮುನ್ಸೂಚನೆಗಳ ಜೊತೆಗೆ ಈ ಪ್ರದೇಶಗಳ ಮೇಲೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡಿನ ವಿಲ್ಲುಪುರಂ, ಕಲ್ಲಕ್ಕುರಿಚಿ, ಕಡಲೂರು, ಸೇಲಂ, ಪೆರಂಬಲೂರು, ತಿರುವರೂರ್, ಪುದುಕೊಟ್ಟೈ, ತಿರುಚಿರಾಪಳ್ಳಿ, ತಂಜಾವೂರು, ದಿಂಡಿಗಲ್, ಮಧುರೈ, ವಿರುಧುನಗರ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಭಾನುವಾರ ಮತ್ತು ಸೋಮವಾರದಂದು ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: 2025ರವರೆಗೆ ಈ ರಾಶಿಗೆ ಸೋಲೆಂಬುದೇ ಇಲ್ಲ: ಅಪಾರ ಧನಸಂಪತ್ತಿನ ಜೊತೆ ಅದೃಷ್ಟ ಬೆಳಗಿ ಯಶಸ್ಸನ್ನೇ ನೀಡುವನು ಮಾಯಾವಿ ಕೇತು
ಇನ್ನು ಕೇರಳದ ಕಣ್ಣೂರು, ವಯನಾಡ್, ಕೋಯಿಕ್ಕೋಡ್, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಇಡುಕ್ಕಿ ಹಾಗೂ ಕರ್ನಾಟಕದ ಚಿಕ್ಕಮಗಳೂರು ಮತ್ತು ಹಾಸನಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ