ಹೈದರಾಬಾದ್ನಲ್ಲಿ ಬಾರಿ ಮಳೆ- 3 ಜನರನ್ನು ಬಲಿ ತೆಗೆದುಕೊಂಡ ವರುಣ

ಬಿಡುವಿಲ್ಲದ ಮಳೆಯಿಂದಾಗಿ ಹೈದರಾಬಾದ್ನ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ. 

Last Updated : Oct 3, 2017, 12:10 PM IST
ಹೈದರಾಬಾದ್ನಲ್ಲಿ ಬಾರಿ ಮಳೆ- 3 ಜನರನ್ನು ಬಲಿ ತೆಗೆದುಕೊಂಡ ವರುಣ title=

ಹೈದರಾಬಾದ್: ಹೈದರಾಬಾದ್ನಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ಇದುವರೆಗೂ ಮೂರು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಳೆಯ ಕಾರಣದಿಂದಾಗಿ ಹೈದರಾಬಾದ್ನ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. 

ಮೃತಪಟ್ಟವರಲ್ಲಿ ಎಂಟು ತಿಂಗಳ ಹಸುಗೂಸು ಸೇರಿದ್ದು, ಮಗು ಮತ್ತು ಮಗುವಿನ ತಂದೆ ಗೋಡೆ ಕುಸಿತದಿಂದ ಮೃತಪಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿ ವಿದ್ಯುತ್ ಶಾಕ್ ನಿಂದಾಗಿ ಮೃತಪಟ್ಟಿದ್ದಾನೆ.

ಇದಲ್ಲದೆ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆ ಸಂಚಾರದಲ್ಲಿ ತೊಂದರೆಯುಂಟಾಗಿದೆ. ಕೆಲವು ಪ್ರದೇಶಗಳಲ್ಲಿ ಮರಗಳು ಧರೆಗುರುಳಿದ್ದು ತೆರವಿನ ಕಾರ್ಯ ನಡೆಯುತ್ತಿದೆ. 

ಭಾರಿ ಮಳೆಯಿಂದಾಗಿ ಹೈದರಾಬಾದ್ ಸಿಟಿ ಪೋಲೀಸ್ ಪಡೆ, L&O ಪೋಲೀಸ್ ಸ್ಟೇಷನ್, ಟ್ರಾಫಿಕ್ ಪೋಲೀಸ್ ಸ್ಟೇಷನ್, ಟಾಸ್ಕ್ ಫೋರ್ಸ್, ಅರ್ಮೆದ್ ರಿಸರ್ವ್, ಹೋಂ ಗಾರ್ಡ್ಸ್, ಸ್ಪೆಷಲ್ ಬ್ರಾಂಚ್, ಸಿಸಿಎಸ್, ಭದ್ರತಾ ಪಡೆಗಳಿಗೆ ಪ್ರವಾಹ ಸಂಬಂಧಿತ ತುರ್ತು ಸ್ಥಿತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸೂಚಿಸಲಾಗಿದೆ.  

ಇದಲ್ಲದೆ ರಾತ್ರಿಯವರೆಗೂ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಇತರೆ ಸರ್ಕಾರಿ ಇಲಾಖೆಗಳೊಂದಿಗೆ ಸಹಕಾರದಲ್ಲಿ ಎಲ್ಲ ತುರ್ತುಪರಿಸ್ಥಿತಿಗಳನ್ನು ನಿಭಾಯಿಸುವಂತೆ ನಿರ್ದೇಶನ ನೀಡಲಾಗಿದೆ.

Trending News