ಇದು ಪ್ರಧಾನಿ ಮೋದಿ ಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಯ ಗೆಲುವು: ಕಂಗನಾ ರನೌತ್

Lok Sabha Election Result 2024: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದ್ದ ಬಾಲಿವುಡ್ ಖ್ಯಾತ ನಟಿ ಕಂಗನಾ ರನೌತ್  ಇಲ್ಲಿಯವರೆಗೆ ಕಂಗನಾ 5,25,691 ಮತಗಳನ್ನು ಪಡೆದಿದ್ದಾರೆ.  

Written by - Yashaswini V | Last Updated : Jun 4, 2024, 05:16 PM IST
  • ಈ ಬೆಂಬಲ, ಪ್ರೀತಿ ಮತ್ತು ವಿಶ್ವಾಸಕ್ಕಾಗಿ ಮಂಡಿಯ ಎಲ್ಲಾ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
  • ಇದು ನಿಮ್ಮೆಲ್ಲರ ಗೆಲುವು, ಇದು ಪ್ರಧಾನಿ ಮೋದಿ ಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಯ ಗೆಲುವು
  • ಇದು ಸನಾತನದ ಗೆಲುವು, ಇದು ಮಂಡಿಯ ಗೌರವದ ಗೆಲುವು- ಕಂಗನಾ ರನೌತ್
ಇದು ಪ್ರಧಾನಿ ಮೋದಿ ಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಯ ಗೆಲುವು: ಕಂಗನಾ ರನೌತ್  title=

Lok Sabha Election Result Kangana Ranaut: 2024 ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಿವುಡ್ ತಾರೆ ಕಂಗನಾ ರನೌತ್ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು ಅವರ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ. 

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಸ್ಪರ್ಧಿಸಿರುವ ಕಂಗನಾ ರನೌತ್ (Kangana Ranaut) 72696 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಮಂಡಿ ಕ್ಷೇತ್ರದಲ್ಲಿ ಫಲಿತಾಂಶಗಳು (Mandi Lok Sabha Constituency Result) ಹೊರಬೀಳುತ್ತಿದ್ದಂತೆ ಕಂಗನಾ ರನೌತ್ ತಮ್ಮ ಕುಲದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಆಶೀರ್ವಾದವನ್ನು ಪಡೆದರು. 

ಇದನ್ನೂ ಓದಿ- Shivamogga Lokasabha Election Result 20204:ಶಿವಮೊಗ್ಗದಲ್ಲಿ  ಯಾರಿಗೆ ಎಷ್ಟು ಮತ? ರಾಘವೇಂದ್ರ ಭಾರೀ ಗೆಲುವಿಗೆ ಕಾರಣವಾಗಿದ್ದ ಫ್ಯಾಕ್ಟರ್ ಯಾವುದು? 

ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್, "ಈ ಬೆಂಬಲ, ಪ್ರೀತಿ ಮತ್ತು ವಿಶ್ವಾಸಕ್ಕಾಗಿ ಮಂಡಿಯ ಎಲ್ಲಾ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಇದು ನಿಮ್ಮೆಲ್ಲರ ಗೆಲುವು, ಇದು ಪ್ರಧಾನಿ ಮೋದಿ ಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಯ ಗೆಲುವು, ಇದು ಸನಾತನದ ಗೆಲುವು, ಇದು ಮಂಡಿಯ ಗೌರವದ ಗೆಲುವು" ಎಂದು ಬರೆದಿದ್ದಾರೆ.

ಇದನ್ನೂ ಓದಿ- ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಂಘಟಿತ ಪರಿಶ್ರಮ, ಜನರ ಆಶೀರ್ವಾದದಿಂದ ಗೆದ್ದಿದ್ದೇವೆ: ಎಚ್‌ಡಿ‌ಕೆ

ಕಂಗನಾ ರಾಕ್‌ಸ್ಟಾರ್ ಎಂದ ಅನುಪಮ್ ಖೇರ್: 
ಲೋಕಸಭಾ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರಿಗೆ ಅಭಿನಂದನೆ ಸಲ್ಲಿಸಿರುವ ನಟ ಅನುಪಮ್ ಖೇರ್, " ಪ್ರಿಯ ಕಂಗನಾ ರನೌತ್ ಅವರ ವಿಜಯಕ್ಕಾಗಿ ಅಭಿನಂದನೆಗಳು. ನೀವು ರಾಕ್‌ಸ್ಟಾರ್. ನಿಮ್ಮ ಪ್ರಯಾಣವು ಸ್ಫೂರ್ತಿದಾಯಕವಾಗಿದೆ. ಒಬ್ಬ ವ್ಯಕ್ತಿ ಕೆಲಸವನ್ನು ಗಮನವಿಟ್ಟು ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು ಎಂಬುದನ್ನೂ ನೀವು ಸಾಬೀತುಪಡಿಸಿದ್ದೀರಿ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News