Shivamogga Lokasabha Election Result 20204 : ಶಿವಮೊಗ್ಗ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ.ದೆಹಲಿಯಲ್ಲಿ ಎನ್‌ಡಿಎ ಪವರ್ ಕಡಿಮೆಯಾದಂತೆ ಕಂಡುಬಂದಿದೆಯಾದರೂ ಶಿವಮೊಗ್ಗದಲ್ಲಿ ಬಿವೈ ರಾಘವೇಂದ್ರ ಮತ್ತೊಮ್ಮೆ ಗೆಲುವಿನ ಸಿಹಿ ಪಡೆದಿದ್ದಾರೆ.ನಾಲ್ಕನೇ ಬಾರಿಗೆ ಎಂಪಿಯಾಗಿ ಅಧಿಕಾರ ಪಡೆಯುತ್ತಿದ್ದಾರೆ.ವಿಶೇಷ ಅಂದರೆ ಬಂಗಾರಪ್ಪ ಬಿಎಸ್‌ವೈ ಫ್ಯಾಮಿಲಿ ನಡುವಿನ ಪ್ರತಿಷ್ಟೆಯ ಕದನವಾಗಿದ್ದ ಈ ಚುನಾವಣೆಯಲ್ಲಿ ಬಂಗಾರಪ್ಪನವರ ಪುತ್ರಿಯನ್ನ ಎರಡನೇ ಸಲ ಬಿವೈಆರ್ ಸೋಲಿಸಿದರೆ,ಅತ್ತ ಕೆಎಸ್ ಈಶ್ವರಪ್ಪ ಮುಖಭಂಗ ಅನುಭವಿಸಿದ್ದಾರೆ.ಇದೆಲ್ಲದಕ್ಕಿಂತಲೂ ಪವರ್ ಸೆಂಟರ್ ಶಿವಮೊಗ್ಗದ ಅಂಕಿ ಅಂಶಗಳು ಸಖತ್ ಇಂಟರ್‌ಸ್ಟಿಂಗ್ ಆಗಿದೆ.
ಶಿವಮೊಗ್ಗ ರಿಸಲ್ಟ್ ನಿರಿಕ್ಷೆಯಂತೆ ಬಿವೈ ರಾಘವೇಂದ್ರರ ಪರವಾಗಿ ಬಂದಿದೆ. ವಿಶೇಷ ಅಂದರೆ,ಕಳೆದ ಚುನಾವಣೆಗಿಂತಲೂ ಬಿವೈ ರಾಘವೇಂದ್ರ ಹೆಚ್ಚು ಮತ ಪಡೆದಿದ್ದಾರೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಇನ್ನೊಂದು ಇಂಟರ್‌ಸ್ಟಿಂಗ್ ಸಂಗತಿಯನ್ನು ಜನರ ಮುಂದಿಟ್ಟಿದೆ.ಕಳೆದ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಬಿವೈ ರಾಘವೇಂದ್ರ ಬರೋಬ್ಬರಿ 729,872 ಮತಗಳನ್ನು ಪಡೆದಿದ್ದರು.ಈ ಸಲ ಬಿವೈ ರಾಘವೇಂದ್ರರವರು ಕಳೆದ ಸಲ ಪಡೆದುಕೊಂಡ ಮತಕ್ಕಿಂತಲೂ ಹೆಚ್ಚು ಮತಗಳನ್ನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ಗೆಲುವಿನ ಕೇಕೆ : ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಕಾರ್ಯಕರ್ತರ ಸಂಭ್ರಮ
ಕಳೆದ ಸಲ ಬಿವೈಆರ್‌ಗೆ ಪ್ರತಿಸ್ಪರ್ಧಿಯಾಗಿದ್ದವರು ಈಗಿನ ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು 5,06,512 ಮತಗಳನ್ನು ಪಡೆದಿದ್ದರು. ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಹೋಲಿಸಿದರೆ, ಈ ಸಲದ ಫಲಿತಾಂಶದಲ್ಲಿ ಪ್ರತಿಸ್ಪರ್ಧಿ ಗೀತಾ ಶಿವರಾಜಕುಮಾರ್ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಸ್ಪರ್ಧಿಸಿದ್ದ 2014ರ ಚುನಾವಣೆಯಲ್ಲಿ 2,40,636 ಮತಗಳನ್ನ ಪಡೆದಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅವರು ಮೂರನೇ ಸ್ಥಾನಕ್ಕೆ ತೆರಳಿದ್ದರು.ಈ ಸಲ ಗೀತಾ ಶಿವರಾಜ್ ಕುಮಾರ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.ಗೀತಾ ಶಿವರಾಜಕುಮಾರ್,ಈ ಸಲ ಅವರು ಸಹೋದರ ಮಧು ಬಂಗಾರಪ್ಪರವರು ಪಡೆದ ಮತಕ್ಕಿಂತಲೂ ಹೆಚ್ಚು ಮತಗಳನ್ನ ಪಡೆದಿದ್ದಾರೆ ಎನ್ನುವುದು ವಿಶೇಷ.
ಗೆಲುವು ಸೋಲಿಗೆ ಕಾರಣ :
ಬಿವೈಆರ್ ಗೆಲುವಿಗೆ ಕಾರಣಗಳನ್ನು ಅರಸುವುದಾದರೆ,ಮೋದಿ ಪ್ಯಾಕ್ಟರ್ ಹಾಗೂ ವಿಮಾನ ನಿಲ್ದಾಣ, ಪ್ಲೈ ಓವರ್,ಸಿಗಂದೂರು ಸೇತುವೆಯಂತೆ ಅಭಿವೃದ್ಧಿ ಕೆಲಸಗಳು ಅವರ ಕೈ ಹಿಡಿದಿವೆ.ಸಮುದಾಯ ಬಲವಾಗಿ ಅವರ ಬೆನ್ನಿಗೆ ನಿಂತರೆ, ಜೆಡಿಎಸ್ ಬೆಂಬಲದಿಂದಾಗಿ ಒಕ್ಕಲಿಗ ಮತಗಳು ಸಾಲಿಡ್ ಆದಂತಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಪರಸ್ಪರ ಸ್ಪರ್ಧಿಯಾಗಿದ್ದ ಬಿಜೆಪಿ ಜೆಡಿಎಸ್ ಒಟ್ಟಾಗಿ ಕೆಲಸ ಮಾಡಿ ದೊಡ್ಡ ಮಟ್ಟದ ಲೀಡ್ ರಾಘವೇಂದ್ರರಿಗೆ ನೀಡಿದೆ.ಭದ್ರಾವತಿ ಹೊರತುಪಡಿಸಿದರೆ ಉಳಿದೆಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರಾಘವೇಂದ್ರ ಹೆಚ್ಚೆಚ್ಚು ಲೀಡ್ ಪಡೆದಿದ್ದಾರೆ.ಶಿವಮೊಗ್ಗ ನಗರದಲ್ಲಿಯು ಹೆಚ್ಚು ಲೀಡ್ ಸಿಕ್ಕಿರುವುದು ಈಶ್ವರಪ್ಪನವರ ವಿರೋಧ ವರ್ಕ್ ಆಗಿಲ್ಲ ಎನ್ನುವುದನ್ನ ಸಾಬೀತು ಮಾಡಿದೆ.
ಇದನ್ನೂ ಓದಿ :ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆಲುವು: ಪ್ರಜ್ವಲ್ ಸೋಲನ್ನ ಸಂಭ್ರಮಿಸಿದ ಪ್ರೀತಂ ಗೌಡ ಬೆಂಬಲಿಗರು
ಸಮುದಾಯ, ಅಭಿವೃದ್ಧಿ ,ಮೋದಿ,ಕಟ್ಟರ್ ಬಿಜೆಪಿ ಮತಗಳು ರಾಘವೇಂದ್ರರರನ್ನ ಗೆಲ್ಲಿಸಿದರೆ, ಇತ್ತ ಗೀತಾ ಶಿವರಾಜ್ ಕುಮಾರ್‌ರವರಿಗೆ ಇದೇ ವಿಚಾರಗಳು ಮುಳುವಾಗಿದೆ.ಅದನ್ನ ಹೊರತುಪಡಿಸಿದರೆ,ಮಧು ಬಂಗಾರಪ್ಪರನವರ ಬಳಗದಲ್ಲಿನ ವೈಫಲ್ಯ ಹಾಗೂ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರದಲ್ಲಿ ಲೀಡ್ ತಂದುಕೊಡುವಲ್ಲಿ ವಿಫಲವಾಗಿರುವುದು ಗೀತಾ ಹಿನ್ನಡೆಗೆ ಕಾರಣವಾಗಿದೆ.ಅಲ್ಲದೆ ಗೀತಾ ಚುನಾವಣೆಗಷ್ಟೆ ಬಂದು ಹೋಗುವ ರಾಜಕಾರಣಿ ಎಂಬಂತೆ ಅವರ ಹಿರಿಯ ಸಹೋದರ ಕುಮಾರ್ ಬಂಗಾರಪ್ಪರಾದಿಯಾಗಿ ಹಲವರು ಬಿಂಬಿಸಿದರು.ಇದು ಸಹ ಗೀತಾರಿಗೆ ಮೈನಸ್ ಆಗಿರುವ ಸಾಧ್ಯತೆ ಇದೆ.
ಕೆಎಸ್ ಈಶ್ವರಪ್ಪನವರು ಸಾರಿದ ಬಂಡಾಯ, ಅವರೊಂದಿಗೆ ಸೇರಿದ ರಾಷ್ಟ್ರಭಕ್ತ ಬಳಗ ಮತ್ತು ಪ್ರಚಾರಕ್ಕೆಂದು ಹೋದಲ್ಲಿ ಬಂದಲ್ಲಿ ಸೇರಿದ್ದ ಜನಸಮುದಾಯ ಈಶ್ವರಪ್ಪನವರ ಸ್ಪರ್ಧೆಯನ್ನು ತ್ರಿಕೋನ ಸ್ಪರ್ಧೆಯನ್ನಾಗಿಸಿತ್ತು. ನಾನು ಗೆದ್ಧಾಗಿದೆ, ಎರಡನೇ ಮತ್ತು ಮೂರನೇ ಪ್ಲೇಸ್‌ಗೆ ಕಾಂಪಿಟೇಶನ್ ನಡೆಯುತ್ತಿದೆ ಎಂದಿದ್ದ ಕೆಎಸ್ ಈಶ್ವರಪ್ಪನವರು ತಮಗೆ ವ್ಯಕ್ತವಾದ ಭಾರೀ ಬೆಂಬಲ ಮತವಾಗುತ್ತದೆ ಎಂದೇ ಭಾವಿಸಿದ್ದರು. ಆದರೆ ಫಲಿಶಾಂಶ ಅವರಿಗೆ ವ್ಯತಿರಿಕ್ತವಾಗಿದೆ.
ಇದನ್ನೂ ಓದಿ :ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬೊಮ್ಮಾಯಿ ಜಯ
ಈ ನಡುವೆ, ಮತ್ತೊಬ್ಬ ಅಭ್ಯರ್ಥಿ ಫಲಿತಾಂಶದಲ್ಲಿ ಗಮನಾರ್ಹವಾಗಿ ಕಾಣಿಸುತ್ತಿದ್ದಾರೆ. ಜೊಮ್ಯೋಟೋದಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ತುಮಕೂರಿನ Zomoto ಪುಡ್ ಡೆಲಿವರಿ ಬಾಯ್ ಬಂಡಿ ರಂಗನಾಥ ಕಣಕ್ಕಿಳಿದಿದ್ದರು. ಚುನಾವಣೆ ವೇಳೆ ಅವರ ಬಳಿ ಸುಮಾರು ಐವತ್ತು ಸಾವಿರ ರೂಪಾಯಿಗಳು ನಗದಿದ್ದು, ಆಸ್ತಿ ಕಾಲಂನಲ್ಲಿ ಇವರು ಏನೂ ಇಲ್ಲ ಎಂದು ಬರೆದುಕೊಂಡಿದ್ದರು. ಮತ ಎಣಿಕೆಯಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದು, 7176 (-757245) ಮತಗಳನ್ನು ಪಡೆದಿದ್ದಾರೆ. ರಾಘವೇಂದ್ರ , ಗೀತಾ ಶಿವರಾಜ್ ಕುಮಾರ್ ಹಾಗೂ ಈಶ್ವರಪ್ಪನವರು ಬಿಟ್ಟರೆ ಇದುವರೆಗಿನ ಮತ ಎಣಿಕೆಯಲ್ಲಿ ಬಂಡಿ ರಂಗನಾಥ್ ಉಳಿದವರಿಗಿಂತಲೂ ಮುನ್ನಡೆ ಸಾಧಿಸಿದ್ದಾರೆ.ಈ ಮೂಲಕ ಅವರು ಗಮನ ಸೆಳೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.