Popular Front Of India: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ವನ್ನು ನಿಷೇಧಿಸಬೇಕೆಂಬ ಬೇಡಿಕೆ ಮತ್ತೊಮ್ಮೆ ತೀವ್ರಗೊಂಡಿವೆ. ಅಖಿಲ ಭಾರತ ಹಿಂದೂ ಮಹಾಸಭಾ ಮತ್ತು ಅಖಿಲ ಭಾರತ ವಕೀಲರ ಸಂಘ ರಾಷ್ಟ್ರವಿರೋಧಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಅದನ್ನು ನಿಷೇಧಿಸುವಂತೆ ಆಗ್ರಹಿಸಿವೆ. ಅಷ್ಟೇ ಅಲ್ಲ ತನ್ನ ಬೇಡಿಕೆಗಳ ಈಡೇರಿಕೆಗೆ ಹಿಂದೂ ಮಹಾಸಭಾ ಸೆಪ್ಟೆಂಬರ್ 26 ಸೋಮವಾರ ಸಂಜೆ 5 ಗಂಟೆಗೆ ಬೀದಿಗಿಳಿಯುವುದಾಗಿ ಹೇಳಿದೆ.
ಇದಲ್ಲದೆ ಈ ಕುರಿತು ಆಡಳಿತಕ್ಕೂ ಕೂಡ ವಿಜ್ನಪ್ತಿಯನ್ನು ಸಲ್ಲಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿದೆ. ಲಖನೌನ ಕೆ.ಡಿ.ಸಿಂಗ್ ಬಾಬು ಕ್ರೀಡಾಂಗಣದ ಹಿಂಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಬಳಿ ಮೆರವಣಿಗೆ ನಡೆಯಲಿದ್ದು, ಅಟಲ್ ಚೌರಾಹ ಹಜರತ್ ಗಂಜ್ ವರೆಗೆ ಈ ಮೆರವಣಿಗೆ ಸಾಗಲಿದೆ. ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರೀಯ ವಕ್ತಾರ ಶಿಶಿರ ಚತುರ್ವೇದಿ ಈ ಪ್ರದರ್ಶನದ ನೇತೃತ್ವವನ್ನು ವಹಿಸಲಿದ್ದಾರೆ.
ಪ್ರಕರಣದಲ್ಲಿ ಇನ್ನೂ ಬಂಧನಗಳು ಮುಂದುವರೆದಿವೆ
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೆ ಸಂಬಂಧ ಹೊಂದಿರುವ ಪದಾಧಿಕಾರಿಗಳ ವಿರುದ್ಧ ಭಯೋತ್ಪಾದಕ ನಿಧಿಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿದೆ. ಈ ಪ್ರಕರಣದಲ್ಲಿ ಇನ್ನೂ ಬಂಧನಗಳು ನಡೆಯುತ್ತಲೇ ಇವೆ. ಇಂದು ಮೀರತ್ ಮತ್ತು ವಾರಣಾಸಿಯಿಂದ ಪಿಎಫ್‌ಐನ ಆರು ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ-Big Action: ಚೈಲ್ಡ್ ಪೋರ್ನೋಗ್ರಫಿಗೆ ಸಂಬಂಧಿಸಿದಂತೆ ದೇಶದ 20 ರಾಜ್ಯಗಳ 56 ಸ್ಥಳಗಳಲ್ಲಿ ಸಿಬಿಐ ದಾಳಿ
ಹಲವು ಬಾರಿ ನಿಷೇಧದ ಒತ್ತಾಯಗಳು ಕೇಳಿಬಂದಿದೆ
ಈ ಹಿಂದೆ ಸೂಫಿ ಖಾನ್ಖಾ ಅಸೋಸಿಯೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಕೌಸರ್ ಹಸನ್ ಮಜಿದಿ ಕೂಡ ಪಿಎಫ್‌ಐ ನಿಷೇಧಕ್ಕೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಪಿಎಫ್‌ಐ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು, ಇದನ್ನು ನಿಷೇಧಿಸಬೇಕು ಎಂದು ಅವರು ಹೇಳಿದ್ದಾರೆ. ಪಿಎಫ್ಐವನ್ನು ನಿಷೇಧಿಸಬೇಕು ಎಂಬ ಆಗ್ರಹ ಈ ಹಿಂದೆಯೂ ಹಲವು ಬಾರಿ ಕೇಳಿಬಂದಿತ್ತು.
ಇದನ್ನೂ ಓದಿ-NRI News: ಕೆನಡಾ ತೆರಳ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ ಸರ್ಕಾರ
2012ರಲ್ಲಿಯೂ ಪಿಎಫ್‌ಐ ಉಗ್ರರ ನಂಟು ಬಯಲಿಗೆ ಬಂದ ನಂತರ ಈ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಇದಾದ ಬಳಿಕ 2017ರಲ್ಲಿ ಎನ್‌ಐಎ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ ಪಿಎಫ್‌ಐ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವುದು ಬಹಿರಂಗವಾಗಿದೆ. ಇದಾದ ನಂತರವೂ ಅದನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.