Child Sexual Pornography: ಮಕ್ಕಳ ಲೈಂಗಿಕ ಅಶ್ಲೀಲತೆಯ ಪ್ರಕರಣದಲ್ಲಿ ಸಿಬಿಐ ದೊಡ್ಡ ಕ್ರಮ ಜರುಗಿಸಿದೆ. 20 ರಾಜ್ಯಗಳ 56 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸುತ್ತಿದೆ. ಸಿಬಿಐ ಈ ಕ್ರಮಕ್ಕೆ ‘ಆಪರೇಷನ್ ಮೇಘದೂತ್’ ಎಂದು ಹೆಸರಿಸಲಾಗಿದೆ.
CBI searches are underway at 56 locations in 20 states and UTs in online child sexual exploitation material (CSEM) case. The searches are based on the inputs shared by Interpol unit of New Zealand through Singapore: CBI Sources
— ANI (@ANI) September 24, 2022
ಇದನ್ನೂ ಓದಿ-Amit Shah ಹೇಳಿಕೆಗೆ ತೇಜಸ್ವಿ ಯಾದವ್ ತಿರುಗೇಟು, 'ರಾಜಕೀಯ ಮುಖಂಡರೂ ಅಲ್ಲ, ಗೃಹ ಸಚಿವರು ಅಲ್ಲ'
ಸಿಬಿಐ ಪ್ರಕಾರ, ಇಂತಹ ಅನೇಕ ಗ್ಯಾಂಗ್‌ಗಳನ್ನು ಗುರುತಿಸಲಾಗಿದ್ದು, ಅವು ಮಕ್ಕಳ ಲೈಂಗಿಕ ಪ್ರೋನೋಗ್ರಫಿಗೆ ಸಂಬಂಧಿಸಿದ ವಸ್ತುಗಳನ್ನು ಬಳಸುವುದಲ್ಲದೆ ಮಕ್ಕಳನ್ನು ದೈಹಿಕವಾಗಿ ಬ್ಲ್ಯಾಕ್‌ಮೇಲ್ ಮಾಡಿ ಅವುಗಳನ್ನು ಬಳಸುತ್ತಿವೆ. ಈ ಗ್ಯಾಂಗ್‌ಗಳು ಗುಂಪು ಕಟ್ಟಿಕೊಂಡು ಪ್ರತ್ಯೇಕವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ-Rajasthan Politics: ರಾಜಸ್ಥಾನದಲ್ಲಿ ತೀವ್ರಗೊಂಡ ರಾಜಕೀಯ ಹಲ್ಚಲ್, ಪಕ್ಷದ ಶಾಸಕರನ್ನು ಭೇಟಿ ಮಾಡಿದ ಸಚಿನ್ ಪೈಲಟ್
ಇನ್ಪುಟ್ ನೀಡಿದ ಇಂಟರ್ ಪೋಲ್
ಸಿಬಿಐಗೆ ಇಂಟರ್ಪೋಲ್ ಮುಖಾಂತರ ಸಿಂಗಾಪುರದಿಂದ ಈ ಕುರಿತು ಇನ್ಪುಟ್ ದೊರೆತಿವೆ ಎನ್ನಲಾಗಿದೆ. ಬಳಿಕ ಕ್ರಮಕ್ಕೆ ಮುಂದಾಗಿರುವ ಸಿಬಿಐ, ದೆಹಲಿ, ಮುಂಬೈ, ಬೆಂಗಳೂರು, ಪಟ್ನಾ ಸೇರಿದಂತೆ ಒಟ್ಟು 20 ರಾಜ್ಯಗಳಲ್ಲಿ ದಾಳಿ ನಡೆಸಿದೆ. ಕಳೆದ ವರ್ಷವೂ ಕೂಡ ಇಂತಹುದೇ ದಾಳಿ ನಡೆದಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಆಗ ಆ ಕಾರ್ಯಾಚರಣೆಗೆ ಆಪರೇಶನ್ ಕಾರ್ಬನ್ ಎಂಬ ಹೆಸರನ್ನು ಇಡಲಾಗಿತ್ತು.
ಆತಂಕ ಹೊರಹಾಕಿದ್ದ ಸುಪ್ರೀಂ ಕೋರ್ಟ್
ದೇಶದಲ್ಲಿ ಚೈಲ್ಡ್ ಪೋರ್ನೋಗ್ರಫಿಯ ಇದು ಮೊದಲ ಪ್ರಕರಣವಲ್ಲ. ದೇಶದಲ್ಲಿ ಚೈಲ್ಡ್ ಪೋರ್ನೋಗ್ರಫಿ ಒಂದು ಆತಂಕದ ವಿಷಯವಾಗಿದೆ. ಸಾಮಾಜಿಕ ಮಾಧ್ಯಮಗಳ ಮೇಲೆ ಸತತ ಹಂಚಿಕೆಯಾಗುತ್ತಿರುವ ಚೈಲ್ಡ್ ಪೋರ್ನೋಗ್ರಫಿ ವಿಡಿಯೋಗಳ ಕುರಿತು ಸುಪ್ರೀಂ ಕೋರ್ಟ್ ಕೂಡ ತನ್ನ ಆತಂಕವನ್ನು ವ್ಯಕ್ತಪಡಿಸಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.