ಒಗ್ಗೂಡಿ ದುರ್ಗಾ ಮಾತಾ ದೇವಾಲಯ ರಕ್ಷಿಸಿದ ಹಿಂದೂ-ಮುಸ್ಲಿಂ ಯುವಕರು

'ಅನೇಕ ಜನರು ನಮ್ಮ ಬಳಿಗೆ ಬಂದು ಕಲ್ಲು ತೂರಲು ಪ್ರಾರಂಭಿಸಿದರು, ಅದಾಗ್ಯೂ ನಾವು ಅವರನ್ನು ಮುಂದೆ ಬರಲು ಬಿಡಲಿಲ.  ಏಕೆಂದರೆ ಅದು ಕೇವಲ ದೇವಾಲಯವಲ್ಲ, ಇದು ನಮ್ಮ ಖ್ಯಾತಿಯ ಸಂಕೇತವಾಗಿದೆ.

Last Updated : Feb 28, 2020, 05:55 AM IST
ಒಗ್ಗೂಡಿ ದುರ್ಗಾ ಮಾತಾ ದೇವಾಲಯ ರಕ್ಷಿಸಿದ ಹಿಂದೂ-ಮುಸ್ಲಿಂ ಯುವಕರು  title=
Photo : ANI

ನವದೆಹಲಿ: ಈಶಾನ್ಯ ದೆಹಲಿಯ ಚಂದ್‌ಬಾಗ್ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯ ಉದಾಹರಣೆ ಕಂಡುಬಂದಿದೆ, ಇದರಲ್ಲಿ ದುಷ್ಕರ್ಮಿಗಳು ಮೂರು ದಿನಗಳ ಕಾಲ ಕೋಮು ಹಿಂಸಾಚಾರ ನಡೆಸಿದರು. ಗಲಭೆಕೋರರು ಚಂದ್‌ಬಾಗ್ ಪ್ರದೇಶದ ದುರ್ಗಾ ಫಕಿರಿ ದೇವಾಲಯದ ಮೇಲೆ ದಾಳಿ ಮಾಡಲು ಬಂದಾಗ, ಆ ಪ್ರದೇಶದ ಹಿಂದೂ-ಮುಸ್ಲಿಂ ಯುವಕರು ಮಾನವ ಸರಪಳಿ ಮಾಡಿ ಅವರನ್ನು ತಡೆದು ಗಲಭೆಕೋರರಿಗೆ ದೇವಾಲಯ ತಲುಪಲು ಅವಕಾಶ ನೀಡಲಿಲ್ಲ.

ದುರ್ಗಾ ಫಕಿರಿ ದೇವಾಲಯದ ಅರ್ಚಕ ಓಂ ಪ್ರಕಾಶ್ ಮಾಧ್ಯಮಗಳಿಗೆ ಮಾತನಾಡುತ್ತಾ, 'ನಮ್ಮ ಸ್ಥಳೀಯ ಹಿಂದೂ-ಮುಸ್ಲಿಂ ಯುವಕರ ಜಾಗರೂಕತೆಯಿಂದಾಗಿ ದುಷ್ಕರ್ಮಿಗಳು ದೇವಾಲಯದ ಒಳ ನುಸುಳಲೂ ಅವಕಾಶ ನೀಡಲಿಲ್ಲ. ಹೊರಗಿನವರು ಯಾರೂ ಇಲ್ಲಿಗೆ ಬರದಂತೆ ನೋಡಿಕೊಂಡರು' ಎಂದು ಸಂತಸ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ಆಸಿಫ್, 'ನಾವು ಮಾನವ ಸರಪಳಿ(Human Chain)ಯನ್ನು ರಚಿಸಿ ಗಲಭೆಕೋರರು ಮುಂದೆ ಬರಲು ಬಿಡಲಿಲ್ಲ. ಈ ಸಂದರ್ಭದಲ್ಲಿ ನಮ್ಮಲ್ಲಿ ಹಲವರು ಗಾಯಗೊಂಡರು. ನಮ್ಮ ಮೇಲೆ  ಕಲ್ಲುಗಳನ್ನು ಸಹ ತೂರಲಾಯಿತು. ಆದರೆ ನಾವು ಅವರನ್ನು ಮುಂದೆ ಬರಲು ಬಿಡಲಿಲ್ಲ. ಏಕೆಂದರೆ ಅದು ಕೇವಲ ದೇವಾಲಯವಲ್ಲ, ಇದು ನಮ್ಮ ಖ್ಯಾತಿಯ ಸಂಕೇತವಾಗಿದೆ. ಇಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ದೇವಾಲಯವನ್ನು ರಕ್ಷಿಸಲಾಯಿತು ಎಂದು ಹೇಳಿದರು.

ಒಟ್ಟಿನಲ್ಲಿ ಎಲ್ಲೇ ಯಾವುದೇ ರೀತಿಯ ಹಿಂಸಾಚಾರ ಭುಗಿಲೆದ್ದರೂ ಅದು ಹಿಂದೂ-ಮುಸ್ಲಿಂ ಗಲಾಟೆ ಎಂದು ಬಣ್ಣ ಹಚ್ಚುವವರ ನಡುವೆ ಹಿಂದೂ ಅಥವಾ ಮುಸಲ್ಮಾನ ಎನ್ನದೇ ಈ ಯುವಕರು ಒಗ್ಗೂಡಿ ದೇವಾಲಯದ ರಕ್ಷಣೆಗೆ ಮಾಡಿದ ಪ್ರಯತ್ನ ಶ್ಲಾಘನೀಯ ಮತ್ತು ದೇಶದ ಜನತೆಗೆ ಒಂದು ಮಾದರಿ ಎಂದರೆ ತಪ್ಪಾಗಲಾರದು.

Trending News