ಶರದ್ ಪವಾರ್ ಭಾರತೀಯ ರಾಜಕಾರಣದ ಸೂಪರ್ ಸ್ಟಾರ್ ಆಗಿದ್ದು ಹೇಗೆ ಗೊತ್ತೇ ?

 ಹಿಂದೊಮ್ಮೆ ಹಿರಿಯ ಪತ್ರಕರ್ತ ವೀರ್ ಸಂಘ್ವಿ ಶಿವಸೇನೆಯ ಬಾಳಾಸಾಹೇಬ್ ಠಾಕ್ರೆ ಅವರನ್ನು ಉಲ್ಲೇಖಿಸುತ್ತಾ ಮುಂಬಯಿಯಲ್ಲೋಬ್ಬ ಸೂಪರ್ ಸ್ಟಾರ್ ಇದ್ದಾನೆ ಎಂದು ಹೇಳಿದ್ದರು. ಆದರೆ ಈಗ ಪ್ರಸಕ್ತ ರಾಜಕೀಯದಲ್ಲಿ ಶರದ್ ಪವಾರ್ ಭಾರತೀಯ ರಾಜಕಾರಣದ ನೂತನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

Last Updated : Nov 26, 2019, 08:25 PM IST
ಶರದ್ ಪವಾರ್ ಭಾರತೀಯ ರಾಜಕಾರಣದ ಸೂಪರ್ ಸ್ಟಾರ್ ಆಗಿದ್ದು ಹೇಗೆ ಗೊತ್ತೇ ? title=

ನವದೆಹಲಿ: ಹಿಂದೊಮ್ಮೆ ಹಿರಿಯ ಪತ್ರಕರ್ತ ವೀರ್ ಸಂಘ್ವಿ ಶಿವಸೇನೆಯ ಬಾಳಾಸಾಹೇಬ್ ಠಾಕ್ರೆ ಅವರನ್ನು ಉಲ್ಲೇಖಿಸುತ್ತಾ ಮುಂಬಯಿಯಲ್ಲೋಬ್ಬ ಸೂಪರ್ ಸ್ಟಾರ್ ಇದ್ದಾನೆ ಎಂದು ಹೇಳಿದ್ದರು. ಆದರೆ ಈಗ ಪ್ರಸಕ್ತ ರಾಜಕೀಯದಲ್ಲಿ ಶರದ್ ಪವಾರ್ ಭಾರತೀಯ ರಾಜಕಾರಣದ ನೂತನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಶರದ್ ಪವಾರ್ ಇತ್ತೀಚಿಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಸತಾರದ ಸಾರ್ವಜನಿಕ ಸಭೆಯಲ್ಲಿ ಧಾರಾಕಾರವಾಗಿ ಸುರಿವ ಮಳೆಯನ್ನು ಲೆಕ್ಕಿಸದೆ ಭಾಷಣ ಮಾಡುವ ಫೋಟೋ ಅವರ ಇಳಿವಯಸ್ಸಿನಲ್ಲಿಯೂ ಅವರಲ್ಲಿರುವ ರಾಜಕೀಯ ಉತ್ಸಾಹವನ್ನು ತೋರುತ್ತಿತ್ತು. ಆ ಮೂಲಕ ಮಹಾರಾಷ್ಟ್ರ ಚುನಾವಣೆಯುದ್ದಕ್ಕೂ ಶರದ್ ಪವಾರ್ ಕೇಂದ್ರ ವ್ಯಕ್ತಿಯಾಗಿ ಉಳಿದಿದ್ದರು. ಕಳೆದ ಎರಡು ವಾರಗಳಿಂದ ಪವಾರ್ ಅವರ ಉದ್ದೇಶಗಳನ್ನು ಸ್ನೇಹಿತರು ಮತ್ತು ವೈರಿಗಳು ಸಮಾನವಾಗಿ ಶಂಕಿಸಿದ್ದರು. ಆದರೆ ಕಾಲಾಂತರದಲ್ಲಿ ಶರದ್ ಪವಾರ್ ಇವುಗಳೆಲ್ಲವನ್ನು ಸುಳ್ಳು ಎಂದು ಸಾಬೀತುಪಡಿಸಿದರು. ಆ ಮೂಲಕ ದೆಹಲಿ ಶಕ್ತಿ ಕೇಂದ್ರವನ್ನು ಪರಿಣಾಮಕಾರಿಯಾಗಿ ಧಿಕ್ಕರಿಸಿದ ರಾಜಕಾರಣಿಗಳಾದ ವೈ.ಬಿ.ಚವಾಣ್, ಜಗಜೀವನ್ ರಾಮ್ ಅವರ ಸಾಲಿಗೆ ಸೇರ್ಪಡೆಯಾದರು.

ಶರದ್ ಪವಾರ್ ಅವರ ರಾಜಕೀಯ ಜೀವನದ ಬಹುತೇಕ ಸಮಯವನ್ನು ದೆಹಲಿ ಪ್ರಭುತ್ವವನ್ನು ಧಿಕ್ಕರಿಸಲು ವ್ಯಯ ಮಾಡಲಾಗಿದೆ. ಈ ಹಿಂದೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಈಗ ನರೇಂದ್ರ ಮೋದಿ ಮತ್ತು ಅಮಿತ್ ಶಾ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.ಪ್ರಸ್ತುತ ರಾಜಕೀಯದಲ್ಲಿ ಪಂಜಾಬಿನ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಹೊರತುಪಡಿಸಿ 1970 ಅಥವಾ 1980 ರ ದಶಕದ ರಾಜಕಾರಣಿಯ ವೈಭವನ್ನು ಇಂದಿಗೂ ಉಳಿಸಿಕೊಂಡಿರುವ ರಾಜಕಾರಣಿಗಳಲ್ಲಿ ಶರದ್ ಪವಾರ್ ಕೂಡ ಒಬ್ಬರಾಗಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಪೈಲ್ವಾನ್ ನಂತೆ ತಮ್ಮದೇ ಪಟ್ಟುಗಳ ಮೂಲಕ ಬಿಜೆಪಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಆ ಮೂಲಕ ತಾವು ಮರಾಠಾ ಮಣ್ಣಿನ ಮಗ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಶರದ್ ಪವಾರ್ ಅವರನ್ನು ಸದಾ ಅಪ್ರತಿಮ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಶರದ್ ಪವಾರ್ ಈಗ ಕಾಂಗ್ರೆಸ್ ಪಕ್ಷದ ಭಾಗವಾಗಿಲ್ಲದಿದ್ದರೂ ಅವರ ಅಭಿಪ್ರಾಯ ಮತ್ತು ಅಭಿಪ್ರಾಯವನ್ನು ಬಹಳವಾಗಿ ಗೌರವಿಸುವ ಕಾಂಗ್ರೆಸ್ ನಾಯಕರಿಗೆ ಕೊರತೆಯಿಲ್ಲ. ಸೋನಿಯಾ ಗಾಂಧಿಯವರೊಂದಿಗಿನ ಅವರ ಸಮೀಕರಣವು ಪರಸ್ಪರ ಗೌರವ ಮತ್ತು ನಂಬಿಕೆಯದ್ದಾಗಿದೆ.

2019 ರ ಲೋಕಸಭಾ ಚುನಾವಣೆಯ ನಂತರ, ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕತ್ವವು ವಿಲೀನದ ಸಾಧ್ಯತೆಯ ಬಗ್ಗೆ ಚರ್ಚಿಸಿತ್ತು, ಆದರೆ ರಾಹುಲ್ ಗಾಂಧಿಯವರ ಹಠಾತ್ ರಾಜೀನಾಮೆಯಿಂದಾಗಿ ಈ ಕ್ರಮವನ್ನು ಕೈಬಿಡಲಾಯಿತು.ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಮಾತುಕತೆ ನಡೆದಾಗ, ಸೋನಿಯಾ ತನ್ನ ಪಕ್ಷದ ಶಾಸಕರು, ಸಿಡಬ್ಲ್ಯುಸಿ ಸದಸ್ಯರು ಮತ್ತು ಉಳಿದವರಿಗೆ ಪವಾರ್ ಒಪ್ಪಿಗೆಯಿಲ್ಲದೆ ತಾವು  ಏನನ್ನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಶಿವಸೇನೆ ಬಿಜೆಪಿಯೊಂದಿಗಿನ ಚುನಾವಣಾ ಪೂರ್ವದ ಮೈತ್ರಿಯಿಂದ ಹೊರಬರಲು ನಿರ್ಧರಿಸಿದಾಗ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸುಲಭವಾದ ಮಾರ್ಗವನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಪವಾರ್ ಹೊಂದಿದ್ದರು. ಆದರೆ ಪವಾರ್ ಅವರು ಮಹಾರಾಷ್ಟ್ರದಲ್ಲಿ ಮರಾಠರಲ್ಲಿರುವ ಬಿಜೆಪಿ ವಿರೋಧಿ ಮನಸ್ಥಿತಿಯನ್ನು ಸ್ಪಷ್ಟವಾಗಿ ಗ್ರಹಿಸಿದ್ದರು. ಇದು ಅಜಿತ್ ಪವಾರ್ ಸೇರಿದಂತೆ ಅನೇಕ ಅಭ್ಯರ್ಥಿಗಳ ಬೃಹತ್ ಗೆಲುವಿನ ಅಂತರದಿಂದ ಇದು ಸ್ಪಷ್ಟವಾಗಿ ಕಾಣುತ್ತದೆ.

ಶರದ್ ಪವಾರ್ ಅವರ ರಾಜಕೀಯ ಜೀವನವನ್ನು ನೋಡಿದಾಗ ಹಲವು ಏರಿಳಿತಗಳಿಂದ ಕೂಡಿರುವುದನ್ನು ನಾವು ಇತಿಹಾಸದ ಮೂಲಕ ಕಾಣಬಹುದು. ರಾಜೀವ್ ಗಾಂಧಿ ಹತ್ಯೆ ನಂತರ 1991 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪವಾರ್ ಪ್ರಧಾನಿಯಾಗುವ ಕನಸು ನನಸಾಗಲಿಕ್ಕೆ ಬಂದಿತ್ತು, ಆದರೆ ದುರಾದೃಷ್ಟವಶಾತ್ ಅದು ಆಗ ಈಡೇರಿರಲಿಲ್ಲ. ಆಗ ಕೇವಲ 54 ಸಂಸದರ ಬೆಂಬಲವನ್ನು ಅಷ್ಟೇ ಹೊಂದಿದ್ದರಿಂದಾಗಿ ಪ್ರಧಾನಿ ಹುದ್ದೆ ಅವರ ಕೈತಪ್ಪಿಹೋಗಿತ್ತು. ಆದರೆ ಈಗ 54 ಶಾಸಕರ ನೆರವಿನಿಂದಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿಯ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವಲ್ಲಿ ಶರದ್ ಪವಾರ್ ಯಶಸ್ವಿಯಾಗಿದ್ದಾರೆ. ಆ ಮೂಲಕ ದೆಹಲಿ ರಾಜಕಾರಣದ ಪ್ರಭುತ್ವಕ್ಕೆ ಮತ್ತೊಮ್ಮೆ ಬಲವಾದ ಉಳಿಪೆಟ್ಟನ್ನು ನೀಡಿದ್ದಾರೆ. 

Trending News