ನವದೆಹಲಿ: ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರ್ ಪ್ರದೇಶದಲ್ಲಿ ಪತನಗೊಂಡಿದ್ದು, ಅದರಲ್ಲಿದ್ದ ಮೊದಲ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ (Madhulika Rawat) ಮತ್ತು ಇತರ 11 ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಇದೀಗ ಜನರಲ್ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಅಪಘಾತಕ್ಕೂ ಮುನ್ನ ಏನಾಯ್ತು ಎಂಬ ವಿಡಿಯೋ ಹೊರಬಿದ್ದಿದೆ. ಈ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವೀಡಿಯೊದಲ್ಲಿ, ಜನರಲ್ ಬಿಪಿನ್ ರಾವತ್ (Bipin Rawat) ಅವರ ಹೆಲಿಕಾಪ್ಟರ್ ಅಪಘಾತಕ್ಕೂ ಮುನ್ನ ಮಂಜಿನೊಳಗೆ ಹೋಗುತ್ತಿರುವುದನ್ನು ಕಾಣಬಹುದು. ಇದರೊಂದಿಗೆ, ವೀಡಿಯೊದಲ್ಲಿದ್ದ ಜನರು 'ಏನಾಯಿತು, ಕ್ರ್ಯಾಶ್ ಆಗಿದೆಯೇ?' ಎಂದು ಹೇಳುತ್ತಿರುವುದು ಕೂಡ ಕೇಳಿಬರುತ್ತಿದೆ. ಇದು ಜನರಲ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್‌ನ ವೀಡಿಯೋ ಎಂದು ವೀಡಿಯೋ ಬಗ್ಗೆ ಹೇಳಲಾಗುತ್ತಿದ್ದು, ಝೀ ನ್ಯೂಸ್ ಇದನ್ನು ಖಚಿತಪಡಿಸಿಲ್ಲ.
सामने आया कुन्नूर में हेलीकॉप्टर हादसे से पहले का वीडियो#GenBipinRawat | #ViralVideo | #HelicopterCrash | @Nidhijourno
अन्य Videos यहां देखें - https://t.co/ZoADfwSi4S pic.twitter.com/Y62ds9mRAI
— Zee News (@ZeeNews) December 9, 2021
ಇದನ್ನೂ ಓದಿ- CDS General Bipin Rawat: ಭಾರತದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಅಪರೂಪದ ಚಿತ್ರಗಳು
2015ರಲ್ಲಿಯೂ ಜನರಲ್ ರಾವತ್ ಅಪಘಾತಕ್ಕೆ ಬಲಿಯಾಗಿದ್ದರು:
2015 ರಲ್ಲಿಯೂ ಸಹ ಜನರಲ್ ಬಿಪಿನ್ ರಾವತ್ (General Bipin Rawat) ಅವರು ಇದೇ ರೀತಿಯ ಅಪಘಾತಕ್ಕೆ ಬಲಿಯಾಗಿದ್ದರು ಎಂಬುದು ಕೆಲವೇ ಜನರಿಗೆ ತಿಳಿದಿದೆ. ಆ ಸಮಯದಲ್ಲಿ ಅವರನ್ನು ನಾಗಾಲ್ಯಾಂಡ್‌ನಲ್ಲಿ ನಿಯೋಜಿಸಲಾಗಿತ್ತು ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಅವರ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಈ ಹೆಲಿಕಾಪ್ಟರ್‌ನ ಹೆಸರು ಚೀತಾ ಮತ್ತು ಇದನ್ನು ಸಾಕಷ್ಟು ಆಧುನಿಕವೆಂದು ಪರಿಗಣಿಸಲಾಗಿದೆ. ಈ ಅಪಘಾತದ ನಂತರ, ಜನರಲ್ ಬಿಪಿನ್ ರಾವತ್ ಇದರಲ್ಲಿ ಸುರಕ್ಷಿತವಾಗಿರುವುದಿಲ್ಲ ಎಂದು ಹಲವರು ಭಾವಿಸಿದ್ದರು, ಆದರೆ ರಕ್ಷಣಾ ಕಾರ್ಯಾಚರಣೆಯ ನಂತರ, ಈ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ- CDS General Bipin Rawat : CDS ಜನರಲ್ ಬಿಪಿನ್ ರಾವತ್ ಕುಟುಂಬದ ಹಿನ್ನೆಲೆ ಏನು?
ಡಿಸೆಂಬರ್ 10 ರಂದು ಅಂತ್ಯಕ್ರಿಯೆ:
ಭಾರತದ ಮೊದಲ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (CDS General Bipin Rawat) ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಪಾರ್ಥಿವ ಶರೀರ ಇಂದು (ಡಿಸೆಂಬರ್ 9) ಸೇನಾ ವಿಮಾನದ ಮೂಲಕ ದೆಹಲಿ ತಲುಪಲಿದ್ದು, ಜನರಲ್ ರಾವತ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಅವರ ನಿವಾಸದಲ್ಲಿ ಇರಿಸಲಾಗುವುದು. ಸಾರ್ವಜನಿಕರು ನಾಳೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಅಂತಿಮ ನಮನ ಸಲ್ಲಿಸಲು ಸಾಧ್ಯವಾಗುತ್ತದೆ. ಜನರಲ್ ರಾವತ್ ಮತ್ತು ಅವರ ಪತ್ನಿಯ ಅಂತ್ಯಕ್ರಿಯೆ ನಾಳೆ ದೆಹಲಿಯಲ್ಲಿ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ