CDS General Bipin Rawat : CDS ಜನರಲ್ ಬಿಪಿನ್ ರಾವತ್ ಕುಟುಂಬದ ಹಿನ್ನೆಲೆ ಏನು?

ಈ ಹೆಲಿಕಾಪ್ಟರ್‌ ದುರ್ಘಟನೆಯಲ್ಲಿ 14 ಜನರಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿ 13 ಜನರು ಸಾವನ್ನಪ್ಪಿದ್ದಾರೆ.

Written by - Channabasava A Kashinakunti | Last Updated : Dec 8, 2021, 08:07 PM IST
  • ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದ ಮಧುಲಿಕಾ ರಾವತ್
  • ರಾವತ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ
  • ಮಧುಲಿಕಾ ಅವರು ಸೇನಾ ಮಹಿಳಾ ಕಲ್ಯಾಣ ಸಂಘದ (AWWA) ಅಧ್ಯಕ್ಷ ಸ್ಥಾನ ವಹಿಸಿದ್ದರು
CDS General Bipin Rawat : CDS ಜನರಲ್ ಬಿಪಿನ್ ರಾವತ್ ಕುಟುಂಬದ ಹಿನ್ನೆಲೆ ಏನು? title=

ನವದೆಹಲಿ : ತಮಿಳುನಾಡಿನ ಕುನ್ನೂರಿನಲ್ಲಿ ಕೆಟ್ಟ ಹವಾಮಾನ ಪರಸ್ಥಿತಿಯಿಂದಾಗಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದೆ. ANI ಸುದ್ದಿ ಸಂಸ್ಥೆ ಪ್ರಕಾರ, ಈ ಹೆಲಿಕಾಪ್ಟರ್‌ ದುರ್ಘಟನೆಯಲ್ಲಿ 14 ಜನರಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿ 13 ಜನರು ಸಾವನ್ನಪ್ಪಿದ್ದಾರೆ.

ಪತ್ನಿ ಮಧುಲಿಕಾ DU ನಲ್ಲಿ ಓದಿದ್ದು

ಈ ಹೆಲಿಕಾಪ್ಟರ್‌ನಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್(Bipin Rawat) ಜೊತೆಗೆ ಅವರ ಪತ್ನಿ ಮಧುಲಿಕಾ ರಾವತ್ ಕೂಡ ಇದ್ದರು. ಮಧುಲಿಕಾ ರಾವತ್ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿದ್ದಾರೆ. 2016 ರಲ್ಲಿ, ಜನರಲ್ ರಾವತ್ ಸೇನಾ ಮುಖ್ಯಸ್ಥರಾದಾಗ, ಮಧುಲಿಕಾ ಅವರು ಸೇನಾ ಮಹಿಳಾ ಕಲ್ಯಾಣ ಸಂಘದ (AWWA) ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಅವಕಾಶವನ್ನು ಪಡೆದರು. ಆ ಸಮಯದಲ್ಲಿ ಅವರು ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡುವುದು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಜನರಲ್ ಬಿಪಿನ್ ರಾವತ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದರಲ್ಲಿ ಒಬ್ಬ ಮಗಳ ಹೆಸರು ಕೃತಿಕಾ ರಾವತ್ ಮತ್ತು ಇನ್ನೊಬ್ಬಳು ತಾರಿಣಿ.

ಇದನ್ನೂ ಓದಿ : ಸೇನಾ ಹೆಲಿಕಾಪ್ಟರ್ ಅಪಘಾತ : CDS ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಇನ್ನಿಲ್ಲ 

ಮೈಕಾ ಶಹದೋಲ್‌ನಲ್ಲಿದೆ

ಸಿಡಿಎಸ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್(Madhulika Rawat) ಅವರ ತಾಯಿಯ ಚಿಕ್ಕಪ್ಪ ಮಧ್ಯಪ್ರದೇಶದ ಶಾಹದೋಲ್‌ನ ಸೊಹಾಗ್‌ಪುರದಲ್ಲಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ ಅವರ ಕುಟುಂಬವು ಆಘಾತಕ್ಕೊಳಗಾಗಿದೆ. ಮಧುಲಿಕಾ ರಾವತ್ ಕೊನೆಯ ಬಾರಿಗೆ 2012 ರಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಸೊಹಗ್‌ಪುರ ಮನೆಗೆ ಭೇಟಿ ನೀಡಿದ್ದರು.

ಮಧುಲಿಕಾ ರಾವತ್ ಅವರ ಸೋದರ ಸಂಬಂಧಿ ವಿಶ್ವವರ್ಧನ್ ಸಿಂಗ್ ಅವರು ಮಾಧ್ಯಮಗಳ ಮೂಲಕ ಅಪಘಾತದ ಬಗ್ಗೆ ಸುದ್ದಿ ಪಡೆದರು. ಘಟನೆಯ ಬಗ್ಗೆ ತಿಳಿದ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಇದ್ದಕ್ಕಿದ್ದಂತೆ ಎಲ್ಲವೂ ಮುಗಿಯುತ್ತದೆ ಎಂದು ಭಾವಿಸಿರಲಿಲ್ಲ.

ಸಮಾಜಕಾರ್ಯದಲ್ಲಿ ಪ್ರವರ್ತಕ

ಮಧುಲಿಕಾ ರಾವತ್ ಅವರು ಸೈನಿಕರ ಪತ್ನಿಯರನ್ನು ಸಬಲೀಕರಣಗೊಳಿಸುವ, ಹೊಲಿಗೆ, ನೇಯ್ಗೆ ಮತ್ತು ಬ್ಯಾಗ್‌ಗಳನ್ನು ತಯಾರಿಸುವ ಜೊತೆಗೆ ಬ್ಯೂಟಿಷಿಯನ್ ಕೋರ್ಸ್‌ಗಳನ್ನು ತೆಗೆದುಕೊಂಡು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದರು. ಅವರು ಬುಧವಾರ ತಮ್ಮ ಪತಿ ಸಿಡಿಎಸ್ ಜನರಲ್ ಬಿಪಿನ್ ರಾವತ್(CDS General Bipin Rawat) ಅವರೊಂದಿಗೆ ಕುನ್ನೂರಿನ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ಹೋಗುತ್ತಿದ್ದರು. ಆಗ ಅವರ ಹೆಲಿಕಾಪ್ಟರ್ ಪತನವಾಯಿತು. ಜನರಲ್ ಬಿಪಿನ್ ರಾವತ್ ಅವರನ್ನು 31 ಡಿಸೆಂಬರ್ 2019 ರಂದು ದೇಶದ ಮೊದಲ ಸಿಡಿಎಸ್ ಆಗಿ ನೇಮಿಸಲಾಯಿತು.

ಇದನ್ನೂ ಓದಿ : Bank Rules : ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದರೆ, ಜಾಗರೂಕರಾಗಿರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News