2019 ರಲ್ಲಿ ಬಿಜೆಪಿಯನ್ನು ಸೋಲಿಸುವುದು ಹೇಗೆ? ಯಶವಂತ ಸಿನ್ಹಾ ನಾಲ್ಕು ಸೂತ್ರಗಳು!

        

Last Updated : Jul 16, 2018, 02:01 PM IST
2019 ರಲ್ಲಿ ಬಿಜೆಪಿಯನ್ನು ಸೋಲಿಸುವುದು ಹೇಗೆ? ಯಶವಂತ ಸಿನ್ಹಾ ನಾಲ್ಕು ಸೂತ್ರಗಳು! title=

ನವದೆಹಲಿ: 2019 ರ ಸಾರ್ವತ್ರಿಕ ಚುನಾವಣೆಗೆ ಈಗಿಂದಲೇ ಎಲ್ಲ ಪಕ್ಷಗಳು ತಯಾರಿ ನಡೆಸುತ್ತಿವೆ ಅದು ಮೈತ್ರಿ ಅಥವಾ ರಣತಂತ್ರದ ರೂಪದಲ್ಲಿರಬಹುದು ಈ ವಿಚಾರವಾಗಿ ಬಿಜೆಪಿಯಿಂದ ಬಂಡಾಯವೆದ್ದಿರುವ ಹಿರಿಯ ನಾಯಕ ಯಶವಂತ್ ಸಿನ್ಹಾ ಈಗ ನಾಲ್ಕು ಸೂತ್ರಗಳನ್ನು ಕಂಡುಹಿಡಿದಿದ್ದಾರೆ.

ಎನ್ಡಿಟಿವಿ ಬರೆದ ಲೇಖನವೊಂದರಲ್ಲಿ ಪ್ರಸ್ತಾಪಿಸಿದಂತೆ ಈ ನಾಲ್ಕು ಅಂಶಗಳು ಬಿಜೆಪಿಯನ್ನು  ಮುಂಬರುವ ಚುನಾವಣೆಯಲ್ಲಿ ಸೋಲಿಸಲಿವೆ ಎಂದು ಅವರು ವಿಶ್ಲೇಷಣೆ ಮಾಡಿದ್ದಾರೆ.

* ಮುಂಬರುವ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿಂದಾಗಿ ಪ್ರಸಕ್ತ ಸರ್ಕಾರವನ್ನು ಕೆಳಗಿಳಿಸಲಿದ್ದು ಇದು  ಪ್ರತಿಪಕ್ಷಗಳಿಗೆ ಉತ್ತಮ ಅವಕಾಶ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

* ಕಾಂಗ್ರೆಸ್ ಸಹಿತ ಸೇರಿ ಚುನಾವಣಾ ಪೂರ್ವ ಮಹಾಮೈತ್ರಿಯನ್ನು ರಚನೆ ಮಾಡಿ ಆ ಮೂಲಕ ಎನ್ಡಿಎಯನ್ನು ಚುನಾವಣೆಯಲ್ಲಿ ಎದುರಿಸುವುದು.

* ಎಲ್ಲ ಪ್ರಾದೇಶಿಕ ಪಕ್ಷಗಳು ಒಂದು ಗೂಡಿ ಫೆಡರಲ್ ಫ್ರಂಟ್ ನ್ನು ರಚನೆ ಮಾಡುವುದು.ಸಾಧ್ಯವಾದರೆ ಇದರಲ್ಲಿ ಕಾಂಗ್ರೆಸ್ ಪಕ್ಷವನ್ನು ತನ್ನ ಬುನಾಧಿಗೆ ಬಳಸಿಕೊಳ್ಳುವುದು.

* ಪ್ರಬಲ ಪಕ್ಷದ ಜೊತೆಗಿನ ಮೈತ್ರಿಯನ್ನು ಕಡಿತಗೊಳಿಸಿ ಉಳಿದೆಲ್ಲ ಪಕ್ಷಗಳು ಮೈತ್ರಿಯನ್ನು ಮಾಡಿಕೊಳ್ಳುವುದು.ಉದಾ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಿಎಸ್ಪಿ, ಲೋಕದಳ ಮೈತ್ರಿ ಮೂಲಕ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು. 

Trending News