ಬಾಬ್ರಿ ಮಸೀದಿ ವಿಚಾರಣೆಯನ್ನು ಏಪ್ರಿಲ್ ಒಳಗೆ ಹೇಗೆ ಮುಗಿಸುತ್ತೀರಿ?-ಸುಪ್ರೀಂ ಪ್ರಶ್ನೆ

ವಿಶೇಷ ಸಿಬಿಐ ನ್ಯಾಯಾಲಯದ ಜಡ್ಜ್ ಎಸ್.ಕೆ.ಯಾದವ್ ಅವರು ಬಾಬ್ರಿ ಕೇಸ್ ನಿಂದಾಗಿ ತಮಗೆ ಬಡ್ತಿಯಾಗಿಲ್ಲವೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್  ಅದೇಗೆ 2019 ಏಪ್ರಿಲ್ ರ ಒಳಗೆ ಬಾಬ್ರಿ ಮಸೀದಿ ವಿಚಾರಣೆ ನಡೆಸುತ್ತಿರಿ? ಎಂದು ಸಿಬಿಐ ನ್ಯಾಯಾಧೀಶರು ಸಲಿಸಿದ್ದ ಅರ್ಜಿಯ ವಿಚಾರವಾಗಿ ಪ್ರಶ್ನಿಸಿದೆ.

Last Updated : Sep 11, 2018, 05:32 PM IST
ಬಾಬ್ರಿ ಮಸೀದಿ ವಿಚಾರಣೆಯನ್ನು ಏಪ್ರಿಲ್ ಒಳಗೆ ಹೇಗೆ ಮುಗಿಸುತ್ತೀರಿ?-ಸುಪ್ರೀಂ ಪ್ರಶ್ನೆ title=

ನವದೆಹಲಿ: ವಿಶೇಷ ಸಿಬಿಐ ನ್ಯಾಯಾಲಯದ ಜಡ್ಜ್ ಎಸ್.ಕೆ.ಯಾದವ್ ಅವರು ಬಾಬ್ರಿ ಕೇಸ್ ನಿಂದಾಗಿ ತಮಗೆ ಬಡ್ತಿಯಾಗಿಲ್ಲವೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್  ಅದೇಗೆ 2019 ಏಪ್ರಿಲ್ ರ ಒಳಗೆ ಬಾಬ್ರಿ ಮಸೀದಿ ವಿಚಾರಣೆ ನಡೆಸುತ್ತಿರಿ? ಎಂದು ಸಿಬಿಐ ನ್ಯಾಯಾಧೀಶರು ಸಲಿಸಿದ್ದ ಅರ್ಜಿಯ ವಿಚಾರವಾಗಿ ಪ್ರಶ್ನಿಸಿದೆ.

ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಮತ್ತು ಇಂದು ಮಲ್ಹೊತ್ರಾ ಅವರನ್ನು ಒಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿ ಸಿಬಿಐ ನ್ಯಾಯಾಧೀಶರಿಗೆ ಡೆಡ್ ಲೈನ್ ನನ್ನು ಕೇಳಿದೆ.ಯಾದವ್ ಅವರು ತಮ್ಮ ಬಡ್ತಿ ಬಾಬ್ರಿ ಮಸೀದಿ ಪ್ರಕರಣದಿಂದಾಗಿ ಸ್ಥಗಿತಗೊಂಡಿದೆ ಎಂದು ವಾದಿಸಿದ್ದಾರೆ. 

ಈಗ ಡಿಸೆಂಬರ್ 6 1992 ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಿಂದಾಗಿ ತಮ್ಮ ಬಡ್ತಿ ವಿಳಂಬವಾಗಿದೆ ಎಂದು ವಾದಿಸಿದ್ದ ಸಿಬಿಐ ನ್ಯಾಯಾಧೀಶರು ಅವರಿಗೆ ಈಗ ಸುಪ್ರೀಂ ಅದೇಗೆ ಬಾಬ್ರಿ ಮಸೀದಿ ವಿಚಾರಣೆಯನ್ನು 2019 ಎಪ್ರಿಲ್ ಒಳಗೆ ಮುಗಿಸಬೇಕು ಅಥವಾ ಹೇಗೆ ವಿಚಾರಣೆಯನ್ನು ನಡೆಸಬೇಕು ಎನ್ನುವುದರ ಕುರಿತಾಗಿ ಸಂಪೂರ್ಣ ವರದಿಯನ್ನು ಸಲ್ಲಿಸಿ ಎಂದು ಸುಪ್ರೀಂ ಸಿಬಿಐ ನ್ಯಾಯಾಧೀಶರಿಗೆ ಕೇಳಿದೆ.

 

Trending News