ಮಾಯಾವತಿ ಜಿ ಮೇಲೆ ಇಂದಿಗೂ ಅದೇ ಗೌರವವಿದೆ -ಅಖಿಲೇಶ್ ಯಾದವ್

ಎಸ್ಪಿ-ಬಿಎಸ್ಪಿ ಮೈತ್ರಿಕೂಟವನ್ನು ಯಶಸ್ವಿಯಾಗದೆ ಇರಬಹುದು ಆದ್ರೆ ಮಾಯಾವತಿ ಅವರ ಮೇಲಿರುವ ಗೌರವ ಎಂದಿಗೂ ಕಡಿಮೆಯಾವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

Last Updated : Jun 5, 2019, 05:13 PM IST
ಮಾಯಾವತಿ ಜಿ ಮೇಲೆ ಇಂದಿಗೂ ಅದೇ ಗೌರವವಿದೆ -ಅಖಿಲೇಶ್ ಯಾದವ್   title=

ನವದೆಹಲಿ: ಎಸ್ಪಿ-ಬಿಎಸ್ಪಿ ಮೈತ್ರಿಕೂಟವನ್ನು ಯಶಸ್ವಿಯಾಗದೆ ಇರಬಹುದು ಆದ್ರೆ ಮಾಯಾವತಿ ಅವರ ಮೇಲಿರುವ ಗೌರವ ಎಂದಿಗೂ ಕಡಿಮೆಯಾವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

"ನಾನು ಮೈಸೂರುನಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದೇನೆ, ವಿಜ್ಞಾನದ ವಿದ್ಯಾರ್ಥಿಯಾಗಿ, ಎಲ್ಲಾ ಪ್ರಯೋಗಗಳು ಯಾವಾಗಲೂ ಯಶಸ್ವಿಯಾಗುವುದಿಲ್ಲವೆಂಬುದು ನನಗೆ ತಿಳಿದಿದೆ ಆದರೆ ಇನ್ನೂ ನಾವು ಅದನ್ನು ಪ್ರಯೋಗಕ್ಕೆ ಒಳಪಡಿಸುತ್ತೇವೆ ಮತ್ತು ಅದರ  ಹಿಂದಿರುವ ಕೊರತೆಯಿಂದ ಕಲಿಯುತ್ತೇವೆ" ಎಂದು ಅಖಿಲೇಶ್ ಲಖನೌನಲ್ಲಿ ಸುದ್ದಿರೊಂದಿಗೆ ಮಾತನಾಡುತ್ತಾ ಹೇಳಿದರು.

ಇನ್ನು ಮಾಯಾವತಿ ಕುರಿತಾಗಿ ಮಾತನಾಡಿದ ಅಖಿಲೇಶ್ ಯಾದವ್ " ಮೊದಲ ಪತ್ರಿಕಾಗೋಷ್ಠಿಯಲ್ಲಿ ನನ್ನ ಗೌರವ ಹೇಗಿತ್ತೋ ಇಂದಿಗೂ ಕೂಡ ಮಾಯಾವತಿ ಜಿ ಅವರ ಮೇಲೆ ಅದೇ ಗೌರವವಿದೆ.ಆ ಹೇಳಿಕೆಗೆ ನಾನು ಈಗಲೂ ಬದ್ದನಾಗಿದ್ದೇನೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ಲೋಕಸಭೆಯಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ  ಕಳಪೆ ಪ್ರದರ್ಶನ ನೀಡಿದ ನಂತರ ಮಾಯಾವತಿ ರಾಜ್ಯದಲ್ಲಿನ 11 ವಿಧಾನಸಭಾ ಉಪಚುನಾವಣೆಗಳಲ್ಲಿ ಏಕಾಂಗಿಯಾಗಿ ಪಕ್ಷವು ಸ್ಪರ್ಧಿಸಲಿದೆ ಎಂದು ಮಂಗಳವಾರ ಘೋಷಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು 5 ಸ್ಥಾನಗಳನ್ನು ಪಡೆದಿತ್ತು. ಬಿಎಸ್ಪಿ 10 ಸ್ಥಾನಗಳನ್ನು ಪಡೆಯಲಷ್ಟೇ ಸಾಧ್ಯವಾಗಿತ್ತು. 

 

Trending News