ನನಗೆ ಬದುಕುವ ಯಾವ ಆಸೆಯೂ ಇಲ್ಲ-ಶಶಿ ತರೂರ್ ಗೆ ಸುನಂದಾ ಪುಷ್ಕರ್ ಇ-ಮೇಲ್

    

Last Updated : May 28, 2018, 07:40 PM IST
ನನಗೆ ಬದುಕುವ ಯಾವ ಆಸೆಯೂ ಇಲ್ಲ-ಶಶಿ ತರೂರ್ ಗೆ ಸುನಂದಾ ಪುಷ್ಕರ್ ಇ-ಮೇಲ್ title=

ನವದೆಹಲಿ: ಸುನಂದಾ ಪುಷ್ಕರ್ ಸಾವಿಗೆ ಹೊಸ ಟ್ವಿಸ್ಟ್ ದೊರಕಿದ್ದು, ಸಾವಿಗೂ ಒಂದು ವಾರಕ್ಕೂ ಮೊದಲು  "ತನಗೆ ಯಾವುದೇ ರೀತಿಯ ಬದುಕುವ ಆಸೆ ಇಲ್ಲ" ಎಂದು ಪತಿ ಶಶಿ ತರೂರ್ ಗೆ ಕಳುಹಿಸಿದ ಇ-ಮೇಲ್ ನಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.
  
ಇಂದು ಕೋರ್ಟ್ ನಲ್ಲಿ  ಸುಮಾರು 3000 ಪುಟಗಳ ಚಾರ್ಚ್ ಶೀಟ್ ನಲ್ಲಿ  ದೆಹಲಿ ಪೊಲೀಸರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಜನವರಿ 8 2014 ರಲ್ಲಿ ಅನುಮಾನಸ್ಪಾದವಾಗಿ ದೆಹಲಿಯ ಲಕ್ಸುರಿ ಹೋಟೆಲ್ ವೊಂದರಲ್ಲಿ ಸಾವನ್ನಪ್ಪಿದ್ದ ಸುನಂದಾ ಪುಷ್ಕರ್  ಪತಿಗೆ ಕಳುಹಿಸಿದ ಇಮೇಲ್ ನಲ್ಲಿ " ನನಗೆ ಬದುಕುವ ಯಾವ ಆಸೆಯೂ ಇಲ್ಲ  ನಾನು ಸಾವಿಗಷ್ಟೇ ಪ್ರಾರ್ಥಿಸಿಕೊಳ್ಳುತ್ತೇನೆ" ಎಂದು ಬರೆಯಲಾಗಿದೆ.

ಅಲ್ಲದೆ ಅವರು ಸಾವನ್ನಪ್ಪುವ ಮೊದಲು ಹಲವಾರು ಬಾರಿ ಪತಿಗೆ ಕರೆ ಮಾಡಿದ್ದರು ಎನ್ನಲಾಗಿದೆ ಆದರೆ ಅವರು ಕರೆಗಳನ್ನು ಸ್ವೀಕರಿಸಿರಲಿಲ್ಲ, ಮೆಸೇಜ್ ಮೂಲಕ ಶಶಿ ತರೂರ್ ನ್ನು ತಲುಪುವ ಪ್ರಯತ್ನ ಪಟ್ಟರು ಸಹಿತ ಅದನ್ನು ತಿರಸ್ಕರಿಸಲಾಗಿತ್ತು ಎಂದು  ಪೊಲೀಸರು ತಿಳಿಸಿದ್ದಾರೆ.

Trending News