ನವದೆಹಲಿ: ಕಾಶ್ಮೀರದ ಬಗ್ಗೆ ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿ ಭಾರತದೊಂದಿಗೆ ದ್ವೀಪಕ್ಷೀಯ ಹಾಗೂ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸಲು ಘೋಷಿಸುವ ನಿರ್ಧಾರದ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ ' ಪಾಕ್ ನಂತಹ ನೆರೆಯ ದೇಶ ಯಾರಿಗೂ ಇರಬಾರದು ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಹೇಳಿದ್ದಾರೆ.
"ನಮ್ಮ ನೆರೆಹೊರೆಯವರ ಬಗ್ಗೆ ನಮಗೆ ಅತ್ಯಂತ ಆತಂಕವಿದೆ. ಸಮಸ್ಯೆಯೆಂದರೆ ನೀವು ಸ್ನೇಹಿತರನ್ನು ಬದಲಾಯಿಸಬಹುದು ಆದರೆ ನಿಮ್ಮ ನೆರೆಹೊರೆಯವರನ್ನು ಆಯ್ಕೆ ಮಾಡುವುದು ನಿಮ್ಮ ಕೈಯಲ್ಲಿಲ್ಲ. ಮತ್ತು ನಮ್ಮ ಪಕ್ಕದಲ್ಲಿರುವ ನೆರೆಹೊರೆಯವರಂತಹವರನ್ನು ಯಾರೂ ಹೊಂದಬಾರದು ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ರಾಜ್ ನಾಥ್ ಸಿಂಗ್ ಅವರು ದೆಹಲಿಯಲ್ಲಿ ಸೇನಾ ಯೋಧರನ್ನು ಉದ್ದೇಶಿಸಿ ಮಾತನಾಡಿದರು.
Defence Min Rajnath Singh:Sabse badi ashanka toh hume hamare padosi ke bare mein rehti hai.Samasya yeh hai aap dost badal sakte hain magar padosi ka chunav aapke haath mein nahi hota hai. Aur jaisa padosi hamare bagal mein baitha hai,paramatma kare ki aise padosi kisi ko na mile. pic.twitter.com/22PQ9aeIec
— ANI (@ANI) August 8, 2019
ಎರಡು ನೆರೆಹೊರೆಯವರ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಆತಂಕಕಾರಿಯಾದ ಚಿತ್ರವನ್ನು ಜಗತ್ತಿಗೆ ಪ್ರಸ್ತುತಪಡಿಸುವ ಪ್ರಯತ್ನವನ್ನು ಪಾಕಿಸ್ತಾನ ಮಾಡುತ್ತಿದೆ. ಈಗ ಪಾಕ್ ತನ್ನ ನಿರ್ಧಾರವನ್ನು ಪರಿಶೀಲಿಸುವಂತೆ ಭಾರತ ಹೇಳಿದೆ. ಬುಧವಾರದಂದು ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿಯನ್ನು ಹೊರಹಾಕಿ ಐದು ಅಂಶಗಳ ಯೋಜನೆಯನ್ನು ಘೋಷಿಸಿತ್ತು, ಇದರಲ್ಲಿ ಭಾರತದೊಂದಿಗಿನ ಸಂಬಂಧವನ್ನು ಕಡಿತಗೊಳಿಸುವುದು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದು ಸೇರಿದೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೇಂದ್ರ ಸರ್ಕಾರ ಘೋಷಿಸಿದ ನಂತರ ಪಾಕ್ ದೇಶದ ಈ ಕ್ರಮ ಬಂದಿದೆ. ಕಾಶ್ಮೀರ ಕ್ರಮವು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಸಿದ್ದರು.
ಸಂವಿಧಾನದ 370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ನಿರ್ಣಯವನ್ನು ಸಂಸತ್ತು ಮಂಗಳವಾರ ಅಂಗೀಕರಿಸಿತು. ರಾಜ್ಯದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಗಳನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮಸೂದೆಯನ್ನು ಅಂಗೀಕರಿಸಿತು.