E Sreedharan : ರಾಜಕೀಯಕ್ಕೆ ಗುಡ್ ಬೈ ಹೇಳಿದ ಮೆಟ್ರೋಮ್ಯಾನ್ ಇ ಶ್ರೀಧರನ್!

'ಹಲವರಿಗೆ ಗೊತ್ತಿಲ್ಲ, ನನಗೆ ಈಗ 90 ವರ್ಷ ವಯಸ್ಸಾಗಿದೆ ಮತ್ತು ನನ್ನ ವಯಸ್ಸಿಗೆ ತಕ್ಕಂತೆ ನಾನು ಮುಂದುವರಿದ ಹಂತದಲ್ಲಿದ್ದೇನೆ, ನಾನು ಸಕ್ರಿಯ ರಾಜಕೀಯವನ್ನು ತೊರೆಯುತ್ತಿದ್ದೇನೆ

Written by - Channabasava A Kashinakunti | Last Updated : Dec 16, 2021, 08:19 PM IST
  • ಮೆಟ್ರೋಮ್ಯಾನ್ ಎಂದೆ ಪ್ರಸಿದ್ದಿ ಪಡೆದಿರುವ ಇ ಶ್ರೀಧರನ್
  • ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುವುದಾಗಿ ಹೇಳಿದ ಇ ಶ್ರೀಧರನ್
  • ನಾನು ಅಧಿಕಾರಿಯಾಗಿರುವುದರಿಂದ ನಾನು ಎಂದಿಗೂ ರಾಜಕಾರಣಿಯಾಗಿರಲಿಲ್ಲ
E Sreedharan : ರಾಜಕೀಯಕ್ಕೆ ಗುಡ್ ಬೈ ಹೇಳಿದ ಮೆಟ್ರೋಮ್ಯಾನ್ ಇ ಶ್ರೀಧರನ್! title=

ತಿರುವನಂತಪುರಂ : ಮೆಟ್ರೋಮ್ಯಾನ್ ಎಂದೆ ಪ್ರಸಿದ್ದಿ ಪಡೆದಿರುವ ಇ ಶ್ರೀಧರನ್ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.

ಮಲಪ್ಪುರಂನಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇ ಶ್ರೀಧರನ್(E Sreedharan), ''ಹಲವರಿಗೆ ಗೊತ್ತಿಲ್ಲ, ನನಗೆ ಈಗ 90 ವರ್ಷ ವಯಸ್ಸಾಗಿದೆ ಮತ್ತು ನನ್ನ ವಯಸ್ಸಿಗೆ ತಕ್ಕಂತೆ ನಾನು ಮುಂದುವರಿದ ಹಂತದಲ್ಲಿದ್ದೇನೆ, ನಾನು ಸಕ್ರಿಯ ರಾಜಕೀಯವನ್ನು ತೊರೆಯುತ್ತಿದ್ದೇನೆ ಎಂದು ಹೇಳಿದಾಗ, ನಾನು ರಾಜಕೀಯ ತೊರೆಯುತ್ತಿದ್ದೇನೆ ಎಂದಲ್ಲ, ನಾನು ಚುನಾವಣೆಯಲ್ಲಿ ಸೋತಾಗ ನನಗೆ ದುಃಖವಾಯಿತು, ಆದರೆ ಈಗ ನನಗೆ ದುಃಖವಿಲ್ಲ ಏಕೆಂದರೆ ಒಬ್ಬ ಶಾಸಕನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ : Voter ID ಯೊಂದಿಗೆ ಆಧಾರ್‌ ಲಿಂಕ್ ಮಾಡಿ, ಇದರಿಂದ ನಿಮಗೆ ಸಿಗಲಿದೆ ಈ ಅದ್ಭುತ ಪ್ರಯೋಜನಗಳು 

ಬಿಜೆಪಿ(BJP)ಯ ರಾಜ್ಯ ಘಟಕ ಶೇ.16ರಿಂದ 17ರಷ್ಟು ಮತ ಪಡೆದಿದ್ದು, ಈಗ ಕಡಿಮೆಯಾಗಿದೆ ಎಂದರು.

"ನಾನು ಅಧಿಕಾರಿಯಾಗಿರುವುದರಿಂದ ನಾನು ಎಂದಿಗೂ ರಾಜಕಾರಣಿಯಾಗಿರಲಿಲ್ಲ ಮತ್ತು ನಾನು ರಾಜಕೀಯ(politics)ದಲ್ಲಿ ಸಕ್ರಿಯವಾಗಿರಲು ಹೋಗದಿದ್ದರೂ, ನಾನು ಯಾವಾಗಲೂ ಇತರ ರೀತಿಯಲ್ಲಿ ಜನರಿಗೆ ಸೇವೆ ಸಲ್ಲಿಸಬಲ್ಲೆ. ನನಗೆ ಮೂರು ಟ್ರಸ್ಟ್‌ಗಳಿವೆ ಮತ್ತು ನಾನು ಮಾಡಬೇಕಾದ ಕೆಲಸವಿದೆ" ಎಂದರು.

ಫೆಬ್ರವರಿಯಲ್ಲಿ ಕೇರಳದಲ್ಲಿ ವಿಧಾನಸಭಾ ಚುನಾವಣೆ(Kerala Assembly Polls 2021)ಗೆ ಮುನ್ನ ಅವರು ಬಿಜೆಪಿಗೆ ಸೇರಿದ್ದರು. ಶ್ರೀಧರನ್ ಅವರನ್ನು ಕೇರಳ ಬಿಜೆಪಿ ಘಟಕದ ಒಂದು ವಿಭಾಗವು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿತ್ತು ಮತ್ತು ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಏಪ್ರಿಲ್ 6 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಯುವ ಕಾಂಗ್ರೆಸ್ ಶಾಸಕ ಶಾಫಿ ಪರಂಬಿಲ್ ವಿರುದ್ಧ 3,859 ಮತಗಳ ಅಂತರದಿಂದ ಸೋತಿದ್ದರು.

ಇದನ್ನೂ ಓದಿ : ಭಾರತದಲ್ಲಿ COVID-19 ಮೂರನೇ ಅಲೆ ಬರಲಿದೆ ಎಂದ ತಜ್ಞರು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News