ಜಮ್ಮು-ಕಾಶ್ಮೀರದ ಬಡಗಾಂನಲ್ಲಿ ಭಾರತೀಯ ವಾಯುಪಡೆಯ MiG 21 ಪತನ

ಈ ಅಪಘಾತದಲ್ಲಿ ಪೈಲಟ್ ಸಾವಿಗೀಡಾಗಿದ್ದಾರೆ.

Last Updated : Feb 27, 2019, 12:12 PM IST
ಜಮ್ಮು-ಕಾಶ್ಮೀರದ ಬಡಗಾಂನಲ್ಲಿ ಭಾರತೀಯ ವಾಯುಪಡೆಯ MiG 21 ಪತನ title=

ಶ್ರೀನಗರ: ಜಮ್ಮು-ಕಾಶ್ಮೀರದ ಬಡಗಾಂ ಜಿಲ್ಲೆಯಲ್ಲಿ ಬುಧವಾರ ಭಾರತೀಯ ವಾಯುಪಡೆಯ MiG 21 ವಿಮಾನ ಪತನಗೊಂಡಿದ್ದು, ಪೈಲಟ್ ಸಾವನ್ನಪ್ಪಿದ್ದಾರೆ. 

ಸ್ಥಳೀಯ ನಿವಾಸಿಗಳ ಪ್ರಕಾರ ಬಡಗಾಂನ ಗರೆಂಡ್ ಕಲಾನ್ ಗ್ರಾಮದ ಬಳಿ ಮೈದಾನದಲ್ಲಿ ಬೆಳಿಗ್ಗೆ 10.05 ರ ಸುಮಾರಿಗೆ ವಿಮಾನ ಪತನಗೊಂಡಿದ್ದು, ತಕ್ಷಣ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಸದ್ಯ ಈ ಪ್ರದೇಶದಲ್ಲಿನ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿದೆ.

Trending News