ನವದೆಹಲಿ: ಹೊಸ ಆರ್ಥಿಕ ವರ್ಷ ಆರಂಭಗೊಂಡು 20 ದಿನಗಳು ಕಳೆದಿವೆ ಹಾಗೂ ಬಹುತೇಕ ನೌಕರರು ತಮ್ಮ ನೌಕರಿದಾತರಿಗೆ ತಾವು ಹೊಸ ತೆರಿಗೆ ಸಿಸ್ಟಮ್ ನಲ್ಲಿ ಹೋಗಲು ಬಯಸುತ್ತಿದ್ದೆವೆಯೋ ಅಥವಾ ಹಳೆ ಟ್ಯಾಕ್ಸ್ ಸಿಸ್ಟಮ್ ನಲ್ಲಿಯೇ ಉಳಿಯಲು ಬಯಸುತ್ತಿವೆಯೋ ಎಂಬುದಾಗಿ ಮಾಹಿತಿಯನ್ನು ಈಗಾಗಲೇ ನೀಡಿರಬಹುದು. ಈ ಬಾರಿಯ ಬಜೆಟ್ ಮಂಡನೆಯ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಎರಡು ರೀತಿಯ ಟ್ಯಾಕ್ಸ್ ವ್ಯವಸ್ಥೆಗಳಿರಲಿದ್ದು, ವೇತನ ಪಡೆಯುವ ನೌಕರರು ನೂತನ ಅಥವಾ ಹಳೆಯ ಟ್ಯಾಕ್ಸ್ ಸಿಸ್ಟಮ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬಹುದು ಎಂದು ಮಾಹಿತಿ ನೀಡಿದ್ದರು.
ಒಂದು ವೇಳೆ ನೀವು ಈಗಾಗಲೇ ನಿಮ್ಮ ನೌಕರಿದಾತರಿಗೆ ನೀವು ಹಳೆ ಟ್ಯಾಕ್ಸ್ ಸಿಸ್ಟಮ್ ಅನ್ನು ಆಯ್ಕೆ ಮಾಡುವುದಾಗಿ ಹೇಳಿದ್ದು, ಇದೀಗ ಹೊಸ ಟ್ಯಾಕ್ಸ್ ಸಿಸ್ಟಮ್ ಗೆ ಬದಲಾಗಲು ಬಯಸಿದ್ದರೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಇನ್ನೂ ನಿಮ್ಮ ಬಳಿ ಕಾಲಾವಕಾಶ ಇದೆ. ಈ ಬದಲಾವಣೆಯನ್ನು ಹೇಗೆ ಮಾಡಬೇಕು ಎಂಬುದಕ್ಕೆ ಇಲ್ಲಿದೆ ವಿಧಾನ
ಆದಾಯ ತೆರಿಗೆ ರಿಟರ್ನ್ ಪಾವತಿಸುವ ವೇಳೆ ನೀವು ಈ ಬದಲಾವಣೆ ಮಾಡಬಹುದು
ಒಂದು ವೇಳೆ ನೀವು ಹಳೆ ಸಿಸ್ಟಮ್ ಅನ್ನು ಆಯ್ಕೆ ಮಾಡಿದ್ದು, ಹೊಸ ಸಿಸ್ಟಮ್ ಗೆ ಮೈಗ್ರೆಟ್ ಆಗಲು ಬಯಸುತ್ತಿದ್ದರೆ. ಈ ಕೆಲಸವನ್ನು ನೀವು ಆದಾಯ ತೆರಿಗೆ ರಿಟರ್ನ್ ಪಾವತಿಸುವ ವೇಳೆ ಬದಲಾವಣೆ ಮಾಡಬಹುದು. ಆದರೆ, ITR ಪಾವತಿಸುವ ಮೊದಲು ನೀವು ಈ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇನ್ನೊಂದೆಡೆ ಒಂದು ವೇಳೆ ನೀವು ನೂತನ ಸಿಸ್ಟಮ್ ಆಯ್ಕೆ ಮಾಡಿದ್ದು, ಹಳೆ ಸಿಸ್ಟಮ್ ಗೆ ಮೈಗ್ರೆಟ್ ಆಗಲು ಬಯಸಿದ್ದರೆ, ITR ಪಾವತಿಸುವ ವೇಳೆಯೂ ಕೂಡ ನೀವು ನಿಮ್ಮ ಆಯ್ಕೆಯನ್ನು ಬದಲಾಯಿಸಬಹುದು.
ನೂತನ ಹಾಗೂ ಹಳೆ ಟ್ಯಾಕ್ಸ್ ಸಿಸ್ಟಮ್ ನಲ್ಲಿ ಅಂತರವೇನು?
ನೂತನ ಟ್ಯಾಕ್ಸ್ ಸಿಸ್ಟಮ್ ನಲ್ಲಿ ತೆರಿಗೆ ದರ ಕಮ್ಮಿಯಾಗಿದೆ ಆದರೆ, ಅದರ ಅಡಿ ಸಿಗುವ ಎಕ್ಷಮ್ಶೇನ್ ಹಾಗೂ ಡಿಡಕ್ಷನ್ ಸೌಲಭ್ಯ ಮುಕ್ತಾಯಗೊಳ್ಳಲಿದೆ. ಹಳೆ ಸಿಸ್ಟಮ್ ನಲ್ಲಿ ಕಳೆದ ಆರ್ಥಿಕ ವರ್ಷದಲ್ಲಿದ್ದ ತೆರಿಗೆ ದರ ಅನ್ವಯಿಸಲಿದ್ದು, ಎಕ್ಷಮ್ಶೇನ್ ಹಾಗೂ ಡಿಡಕ್ಷನ್ ಸೌಲಭ್ಯದ ಅವಕಾಶ ಇರಲಿದೆ.