ಹವಾಮಾನ ಮುನ್ಸೂಚನೆ: ಈ ರಾಜ್ಯಗಳ ಕದತಟ್ಟಲಿದೆ ಮಾನ್ಸೂನ್‌ ಮಾರುತ!

ವೆಸ್ಟರ್ನ್ ಡಿಸ್ಟರ್ಬನ್ಸ್ ಪ್ರಭಾವದಿಂದ ಗುಡ್ಡಗಾಡು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ವಿಶೇಷವಾಗಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಮುಂಜಾಗೃತಾ ಕ್ರಮ ವಹಿಸುವಂತೆ ಸೂಚಿಸಿದೆ. 

Written by - Bhavishya Shetty | Last Updated : Jun 14, 2022, 10:31 AM IST
  • ರಾಷ್ಟ್ರ ರಾಜಧಾನಿಗೆ ಶೀಘ್ರವೇ ಮಳೆರಾಯ ಆಗಮಿಸಲಿದ್ದಾನೆ
  • ಮಾಹಿತಿ ನೀಡಿದ ಹವಾಮಾನ ಇಲಾಖೆ
  • ಜೂನ್ 16 ಅಥವಾ 17 ರಂದು ಮಳೆಯಾಗುವ ಸಾಧ್ಯತೆ
ಹವಾಮಾನ ಮುನ್ಸೂಚನೆ: ಈ ರಾಜ್ಯಗಳ ಕದತಟ್ಟಲಿದೆ ಮಾನ್ಸೂನ್‌ ಮಾರುತ! title=
India Meteorological Department

ಕಳೆದ ಕೆಲ ದಿನಗಳಿಂದ ಇಡೀ ದೇಶವು ಬಿಸಿಲಿನ ತಾಪಕ್ಕೆ ತತ್ತರಿಸಿದೆ. ಹೀಗಾಗಿ ನವದೆಹಲಿಯ ಜನರು ಮುಂಗಾರು ಮಳೆಯತ್ತ ದೃಷ್ಟಿಯಿಟ್ಟಿದ್ದಾರೆ. ಇನ್ನು ರಾಷ್ಟ್ರ ರಾಜಧಾನಿಗೆ ಶೀಘ್ರವೇ ಮಳೆರಾಯ ಆಗಮಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಜನರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. 

ಪಾಕಿಸ್ತಾನದ ಮೂಲಕ ಭಾರತಕ್ಕೆ ಹೊಸ ಪಾಶ್ಚಾತ್ಯ ಪ್ರಕ್ಷುಬ್ಧತೆ ಪ್ರವೇಶಿಸಿದೆ. ಹೀಗಾಗಿ ಜೂನ್ 16 ಅಥವಾ 17 ರಂದು ದೆಹಲಿ ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದಲ್ಲಿ ಗಾಳಿ-ಮಳೆಯಾಗಬಹುದು. ಈ ಮೂಲಕ ದಿನದ ಗರಿಷ್ಠ ತಾಪಮಾನವು 2-3 ಡಿಗ್ರಿಗಳಷ್ಟು ಕಡಿಮೆಯಾಗಲಿದೆ. ಇನ್ನು ದೆಹಲಿ-ಎನ್‌ಸಿಆರ್ ಹೊರತುಪಡಿಸಿ, ಚಂಡೀಗಢ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ಈ ಎರಡು ದಿನಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಇದನ್ನು ಓದಿ: Portable Matress AC: ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುವ ಬಜೆಟ್‌ ಎಸಿ

ವೆಸ್ಟರ್ನ್ ಡಿಸ್ಟರ್ಬನ್ಸ್ ಪ್ರಭಾವದಿಂದ ಗುಡ್ಡಗಾಡು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ವಿಶೇಷವಾಗಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಮುಂಜಾಗೃತಾ ಕ್ರಮ ವಹಿಸುವಂತೆ ಸೂಚಿಸಿದೆ. 

ಮುಂದಿನ ಮೂರು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ದೆಹಲಿಗೆ ಜೂನ್‌ 25ರ ಬಳಿಕ ಮಾನ್ಸೂನ್‌ ಪ್ರವೇಶಿಸುವ ಸಾಧ್ಯತೆಯಿದೆ. ಸದ್ಯ ನೈಋತ್ಯ ಮಾನ್ಸೂನ್ ಗುಜರಾತ್ ತಲುಪಿದ್ದು, ಎರಡು ದಿನ ಮುಂಚಿತವಾಗಿ ಮುಂಗಾರು ಆಗಮಿಸಿದೆ. ಈ ಕಾರಣದಿಂದ ಗುಜರಾತ್‌ನ ಹಲವು ಭಾಗಗಳಲ್ಲಿ ಭಾರೀ ಮಳೆ ಪ್ರಾರಂಭವಾಗಿದೆ.

ಇದನ್ನು ಓದಿ: ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಹ್ಯಾಕರ್‌ಗಳ ಈ ತಂತ್ರದಿಂದ ಜಾಗರೂಕರಾಗಿರಿ

ಹವಾಮಾನ ಇಲಾಖೆಯ ಪ್ರಕಾರ, ಮುಂಗಾರು ತನ್ನ ನಿಗದಿತ ವೇಗದ ಪ್ರಕಾರ ಸರಿಯಾದ ವೇಗದಲ್ಲಿ ಮುನ್ನಡೆಯುತ್ತಿದ್ದು, ಜೂನ್ 25 ರೊಳಗೆ ದೆಹಲಿಯ ಕದತಟ್ಟಲಿದೆ. ಜೊತೆಗೆ ಮುಂಗಾರು ತನ್ನ ನಿಗದಿತ ಸಮಯದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರವನ್ನು ತಲುಪುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News