ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ COVID-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ತನ್ನ ಶೇ.50ರಷ್ಟು ನೌಕರರಿಗೆ ವರ್ಕ್-ಫ್ರಮ್ ಹೋಮ್ (WFH) ಆದೇಶ ಹೊರಡಿಸಿದೆ.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಶೇ. 50 ರಷ್ಟು ಮಟ್ಟದ ಅಧಿಕಾರಿಗಳು ಶೇ 100ರಷ್ಟು ಸಾಮರ್ಥ್ಯ ದ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸಬೇಕು. ಉಳಿದ ಸಿಬ್ಬಂದಿ ಡಿಸೆಂಬರ್ 31ರವರೆಗೆ ಅಥವಾ ಮುಂದಿನ ಆದೇಶದವರೆಗೆ ಶೇ.50ರಷ್ಟು ಹಾಜರಾತಿ ಇರಲಿವೆ. ಖಾಸಗಿ ಕಚೇರಿಗಳು ಸಮಯ ಮತ್ತು ಸಿಬ್ಬಂದಿ ಹಾಜರಿಗೆ ಸೂಚಿಸಲಾಗಿದೆ' ಎಂದು ದೆಹಲಿ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಕಾರ್ಯಕಾರಿ ಸಮಿತಿ ಅಧ್ಯಕ್ಷ ವಿಜಯ್ ದೇವ್ ಶನಿವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 1 ರಿಂದಾಗಲಿವೆ ಈ 5 ಪ್ರಮುಖ ಬದಲಾವಣೆ, ಜನಸಾಮಾನ್ಯರ ಮೇಲೆ ನೇರ ಪ್ರಭಾವ
ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಕಂದಾಯ ಸಚಿವ ಕೈಲಾಶ್ ಗಹ್ಲೋಟ್, 'ಡಿಡಿಎಂಎ ಒಂದೇ ಸಮಯದಲ್ಲಿ ಕಚೇರಿಗೆ ಬರುವ ಸರ್ಕಾರಿ ನೌಕರರ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ, ಗ್ರೇಡ್ 1 ಕ್ಕಿಂತ ಕಡಿಮೆ ಇರುವ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಕೇವಲ ಶೇ.50ರಷ್ಟು ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಬೇಕೆಂದು ನಿರ್ಧರಿಸಲಾಗಿದೆ. ಖಾಸಗಿ ಕಚೇರಿಗಳಿಗೂ ಸಮಯ ಮತ್ತು ಸಿಬ್ಬಂದಿ ಹಾಜರಿ ಗೆ ಸೂಚಿಸಲಾಗಿದೆ' ಎಂದು ಹೇಳಿದರು.
ಹೈದರಾಬಾದ್ ನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲು ಯೋಗಿ ಆದಿತ್ಯನಾಥ್ ಆಗ್ರಹ