ಭಾರತದಲ್ಲಿ ಮೊದಲ ಬಾರಿಗೆ 4 ಲಕ್ಷ ಗಡಿ ದಾಟಿದ ಕೊರೊನಾ ಚೇತರಿಕೆ ಪ್ರಕರಣಗಳು

Last Updated : May 18, 2021, 08:22 PM IST
ಭಾರತದಲ್ಲಿ ಮೊದಲ ಬಾರಿಗೆ 4 ಲಕ್ಷ ಗಡಿ ದಾಟಿದ ಕೊರೊನಾ ಚೇತರಿಕೆ ಪ್ರಕರಣಗಳು

ನವದೆಹಲಿ: ಇದೇ ಮೊದಲ ಬಾರಿಗೆ ಭಾರತದಲ್ಲಿ ದೈನಂದಿನ ಕೊರೊನಾ ಚೇತರಿಕೆ ಪ್ರಕರಣಗಳು ನಾಲ್ಕು ಲಕ್ಷ ಗಡಿ ದಾಟಿದೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ (ಮೇ 18) ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 4,22,436 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದಲ್ಲದೆ, ಕಳೆದ 14 ದಿನಗಳಲ್ಲಿ ಸರಾಸರಿ 3,55,944 ಪ್ರಕರಣಗಳ ಚೇತರಿಕೆ ದಾಖಲಾಗಿದೆ.

ಇದನ್ನೂ ಓದಿ : Hair Care Tips: ನಿಮ್ಮ ಕೂದಲು ಬೇಗ ಉದ್ದವಾಗಬೇಕೆ? ಇದನ್ನು ಬಳಸಿ, ಕೆಲವೇ ದಿನಗಳಲ್ಲಿ ನೀವು ಪ್ರಯೋಜನ ನೋಡುತ್ತೀರಿ

ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತದಲ್ಲಿ, ಕಳೆದ 24 ಗಂಟೆಗಳಲ್ಲಿ 2,63,533 ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ಚೇತರಿಕೆ ದರವು 85.60% ಕ್ಕೆ ತಲುಪಿದೆ.ಭಾರತದಲ್ಲಿ ದೈನಂದಿನ ಹೊಸ COVID ಪ್ರಕರಣಗಳು ಈಗ ಎರಡನೇ ದಿನಕ್ಕೆ ಸತತವಾಗಿ 3 ಲಕ್ಷಕ್ಕಿಂತ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳಲ್ಲಿ 1,63,232 ಪ್ರಕರಣಗಳ ನಿವ್ವಳ ಕುಸಿತ ದಾಖಲಾಗಿದೆ.

ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 33,53,765 ಕ್ಕೆ ಇಳಿದಿದೆ. ಎಂಟು ರಾಜ್ಯಗಳು ಒಟ್ಟು 69.01% ರಷ್ಟು ಸಕ್ರಿಯ ಪ್ರಕರಣಗಳಿಗೆ ಕಾರಣವಾಗಿವೆ. ಇನ್ನೊಂದೆಡೆಗೆ ದೇಶದಲ್ಲಿ ಲಸಿಕೆ ಹಾಕಿಕೊಂಡವರ ಸಂಖ್ಯೆ 18.44 ಕೋಟಿಗೆ ತಲುಪಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News