ಝಿಂದ್ (ಹರಿಯಾಣ): ಕರೋನಾ ಟೆನ್ಶನ್ ನಡುವೆ ಒಂದು ರಸಪ್ರಸಂಗ ನಡೆದಿದೆ. ಬುಧವಾರ ರಾತ್ರಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ 1710 ಕರೊನಾ ವ್ಯಾಕ್ಸಿನ್ ಗಳ (Corona vaccine) ಕಳ್ಳತನ ನಡೆದಿತ್ತು. ಕಳ್ಳತನದ ಪ್ರಕರಣ ಬಯಲಿಗೆ ಬರುತ್ತಿರುವಂತೆಯೇ ಸ್ಥಳದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳ ಜೌಷಧಿ ಮಳಿಗೆಗಳಲ್ಲಿ ರೆಮಿಡಿಸಿವರ್ (Remdesivir) ಔಷಧಿ ಕಳ್ಳತನವಾಗುವುದು ತೀರಾ ಸಹಜ ಎನ್ನುವಷ್ಟರ ಮಟ್ಟಿಗೆ ಪ್ರಕರಣಗಳು ಹೆಚ್ಚಾಗಿವೆ. ಹೀಗಿರುವಾಗ ಕರೋನಾ (coronavirus) ಮಹಾಮಾರಿಗೆ ನೀಡುವ ವ್ಯಾಕ್ಸಿನ್ ಕಳ್ಳತನದ ಹಿಂದಿನ ಉದ್ದೇಶ ಏನು ಎಂದು ಪೊಲೀಸರು ತಲೆ ಚಚ್ಚಿ ಕೊಳ್ಳುತ್ತಿದ್ದರು.
ಸಂಜೆ ಕರೋನಾ ಡೋಸ್ ಹಿಂದಿರುಗಿಸಿದ ಕಳ್ಳ :
ಮರುದಿನ ಸಂಜೆ ಝಿಂದ್ ಪೊಲೀಸ್ ಠಾಣೆ ಪಕ್ಕ ಇದ್ದ ಒಂದು ಸಣ್ಣ ಟೀ ಸ್ಟಾಲ್ (tea stall) ಬಳಿ ಅಚ್ಚರಿಯ ಘಟನೆ ನಡೆದು ಹೋಯಿತು. ಧಢಬಢ ಎಂದು ಬೈಕಿನಲ್ಲಿ ಧಾವಿಸಿ ಬಂದ ಯುವಕನೊಬ್ಬ ಅಲ್ಲಿ ಕುಳಿತಿದ್ದ ತಾತನ ಕೈಗೆ ಒಂದು ಬ್ಯಾಗ್ ಒಪ್ಪಿಸಿ, ಅದನ್ನು ಕೂಡಲೇ ಠಾಣೆಗೆ ತಲುಪಿಸಿ ಅಂತ ಕೇಳಿಕೊಂಡು ಬಂದಷ್ಟೇ ವೇಗದಲ್ಲಿ ಮಾಯವಾಗಿ ಹೋದ. ಬ್ಯಾಗ್ ಓಪನ್ ಮಾಡಿದವರಿಗೆ ಶಾಕ್. ನೋಡಿದ್ರೆ ಅದರಲ್ಲಿ ರಾತ್ರಿ ಕಳ್ಳತನವಾದ ಕರೋನಾ ವ್ಯಾಕ್ಸಿನ್ ಗಳ (Corona vaccine) ಬಾಕ್ಸ್ ಇದೆ. ಜನರೆಲ್ಲಾ ಸೇರಿ ಆ ಬ್ಯಾಗ್ ಪೊಲೀಸರಿಗೆ ಒಪ್ಪಿಸಿದರು.
ಇದನ್ನೂ ಓದಿ : ಕರೋನಾ ಬಿಕ್ಕಟ್ಟಿನ ಮಧ್ಯೆ Covid ಸೆಂಟರ್ನ ಐಸಿಯು ವಾರ್ಡ್ನಲ್ಲಿ ಬೆಂಕಿ; 13 ರೋಗಿಗಳ ಸಜೀವ ದಹನ
ಸಾರಿ..! ಅದರಲ್ಲಿ ಕರೋನಾ ವ್ಯಾಕ್ಸಿನ್ ಇತ್ತು ಅಂತ ಗೊತ್ತಿರಲಿಲ್ಲ :
ಪೊಲೀಸರು (police) ವ್ಯಾಕ್ಸಿನ್ ಬ್ಯಾಗ್ ಚೆಕ್ ಮಾಡುವಾಗ,ಅದರಲ್ಲೊಂದು ನೋಟ್ ಸಿಕ್ಕಿದೆ. ಆ ನೋಟ್ ನಲ್ಲಿ ಏನು ಬರೆದಿತ್ತು ಗೊತ್ತಾ..? ಕ್ಷಮೆ ಪತ್ರ ಬರದಿದ್ದ ಕಳ್ಳ, `` ಕ್ಷಮಿಸಿಬಿಡಿ, ಅದರಲ್ಲಿ ಕರೋನಾ ವ್ಯಾಕ್ಸಿನ್ ಇದೆ ಎಂದು ಗೊತ್ತಿರಲಿಲ್ಲ’’ ಎಂದು ಬರೆದಿದ್ದ. ಆ ಪತ್ರ ನೋಡಿದ ಪೊಲೀಸರಿಗೆ ನಗಬೇಕೋ, ಅಳಬೇಕೋ ಒಂದೂ ಗೊತ್ತಾಗದೆ ಕೈಕಟ್ಟಿ ಕುಳಿತುಬಿಟ್ಟಿದ್ದರು
ಪೊಲೀಸ್ ಅಧಿಕಾರಿ ಹೇಳಿದ್ದೇನು ಗೊತ್ತಾ..?
ಝಿಂದ್ ಪೊಲೀಸ್ ಅಧಿಕಾರಿಗಳ ಪ್ರಕಾರ ಬಹುಶಃ ರೆಮಿಡಿಸಿವರ್ (Remdesivir) ಕದಿಯೋದು ಕಳ್ಳನ ಉದ್ದೇಶವಾಗಿತ್ತು. ಕಳ್ಳನಿಗೆ ರೆಮಿಡಿಸಿವರ್ ಮತ್ತು ಕರೋನಾ ವ್ಯಾಕ್ಸಿನ್ ನಡುವಣ ವ್ಯತ್ಯಾಸ ಕಳ್ಳತನದ ವೇಳೆ ಗೊತ್ತಾಗಲಿಲ್ಲ. ಕೊನೆಗೆ ಆತನಿಗೆ ಗೊತ್ತಾಗಿರಬೇಕು ತಾನು ಕದ್ದಿದ್ದು ರೆಮಿಡಿಸಿವರ್ ಅಲ್ಲ ಕರೋನಾ ವ್ಯಾಕ್ಸಿನ್ ಎಂಬುದು. ಕೂಡಲೇ ತಪ್ಪಿನ ಅರಿವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಒಂದೇ ದಿನದಲ್ಲಿ ದೆಹಲಿಯಲ್ಲಿ 306 ಕೊರೊನಾ ಸಾವು, 26 ಸಾವಿರ ಪ್ರಕರಣ ದಾಖಲು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.