Indian Chinese troops face off: ತವಾಂಗ್ ಸೆಕ್ಟರ್ ಪ್ರವೇಶಿಸಿದ ಚೀನಾ; ಬೆನ್ನಟ್ಟಿದ್ದ ಭಾರತ: ಅಷ್ಟಕ್ಕೂ ಡಿ.9ರಂದು ನಡೆದಿದ್ದೇನು?

Indian Chinese troops face off in Tawang sector : ಈ ಮುಖಾಮುಖಿ ಕಾಳಗದಲ್ಲಿ ಎರಡೂ ಕಡೆಯ ಯೋಧರು ಗಾಯಗೊಂಡಿದ್ದಾರೆ. ತಕ್ಷಣವೇ ಎರಡೂ ದೇಶಗಳ ಸೈನಿಕರನ್ನು ಹಿಂದಕ್ಕೆ ಬರುವಂತೆ ಸೂಚಿಸಲಾಯಿತು. ಇದಾದ ನಂತರ ಎರಡೂ ದೇಶಗಳ ಸೇನಾ ಕಮಾಂಡರ್‌ಗಳು ಶಾಂತಿ ಮರುಸ್ಥಾಪನೆಗಾಗಿ ಧ್ವಜ ಸಭೆಯಲ್ಲಿ ಚರ್ಚಿಸಿದರು. ಈ ಚಕಮಕಿಯಲ್ಲಿ ಭಾರತದ 6 ಯೋಧರು ಗಾಯಗೊಂಡಿದ್ದು, ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಚೀನಾದ 9 ಸೈನಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.  

Written by - Bhavishya Shetty | Last Updated : Dec 13, 2022, 05:36 AM IST
    • ಭಾರತೀಯ ಸೈನಿಕರು ಚೀನಾ ಸೈನಿಕರ ವಿರುದ್ಧ ತೀವ್ರ ಹೋರಾಟ
    • 2022ರ ಡಿಸೆಂಬರ್ 9 ರಂದು ತವಾಂಗ್ ಸೆಕ್ಟರ್‌ನ LAC ಬಳಿ ಚೀನೀ ಸೈನಿಕರು ಎಂಟ್ರಿ
    • ಕೋಪಗೊಂಡ ಭಾರತೀಯ ಸೈನಿಕರಿಂದ ತಕ್ಕ ಪ್ರತ್ಯುತ್ತರ
Indian Chinese troops face off: ತವಾಂಗ್ ಸೆಕ್ಟರ್ ಪ್ರವೇಶಿಸಿದ ಚೀನಾ; ಬೆನ್ನಟ್ಟಿದ್ದ ಭಾರತ: ಅಷ್ಟಕ್ಕೂ ಡಿ.9ರಂದು ನಡೆದಿದ್ದೇನು?  title=
Indian Army

Indian Chinese troops face off in Tawang sector : ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ LAC ಉದ್ದಕ್ಕೂ ಇರುವ ಪ್ರದೇಶವು ಸೂಕ್ಷ್ಮ ವಲಯವಾಗಿದ್ದು, 2006ರಿಂದ ಭಾರತ ಮತ್ತು ಚೀನಾ ಸೇನೆ ಗಸ್ತು ತಿರುಗುತ್ತಲೇ ಇವೆ. ಆದರೆ 2022ರ ಡಿಸೆಂಬರ್ 9 ರಂದು ಚೀನೀ ಸೈನಿಕರು ತವಾಂಗ್ ಸೆಕ್ಟರ್‌ನಲ್ಲಿ LAC ಬಳಿ ಪ್ರವೇಶಿಸಿದ್ದಾರೆ. ಇದರಿಂದ ಕೋಪಗೊಂಡ ಭಾರತೀಯ ಸೈನಿಕರು ಮುನ್ನುಗ್ಗಿದ್ದಾರೆ. ಈ ವೇಳೆ ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ಉಂಟಾಗಿದೆ. ಭಾರತೀಯ ಸೈನಿಕರು ಚೀನಾ ಸೈನಿಕರ ವಿರುದ್ಧ ತೀವ್ರವಾಗಿ ಹೋರಾಟ ನಡೆಸಿದ್ದಾರೆ.

ಮುಖಾಮುಖಿ ಕಾಳಗದಲ್ಲಿ ಎರಡೂ ಕಡೆಯ ಯೋಧರು ಗಾಯಗೊಂಡಿದ್ದಾರೆ. ತಕ್ಷಣವೇ ಎರಡೂ ದೇಶಗಳ ಸೈನಿಕರನ್ನು ಹಿಂದಕ್ಕೆ ಬರುವಂತೆ ಸೂಚಿಸಲಾಯಿತು. ಇದಾದ ನಂತರ ಎರಡೂ ದೇಶಗಳ ಸೇನಾ ಕಮಾಂಡರ್‌ಗಳು ಶಾಂತಿ ಮರುಸ್ಥಾಪನೆಗಾಗಿ ಧ್ವಜ ಸಭೆಯಲ್ಲಿ ಚರ್ಚಿಸಿದರು. ಈ ಚಕಮಕಿಯಲ್ಲಿ ಭಾರತದ 6 ಯೋಧರು ಗಾಯಗೊಂಡಿದ್ದು, ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಚೀನಾದ 9 ಸೈನಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.  

ಇದನ್ನೂ ಓದಿ: Arunachal Pradesh: ಗಡಿರೇಖೆಯಲ್ಲಿ ಸಂಘರ್ಷ; ಭಾರತ-ಚೀನಾ ಸೈನಿಕರಿಗೆ ಗಾಯ!

ಜೂನ್ 15, 2020ರ ಘಟನೆಯ ನಂತರ ಮೊದಲ ಬಾರಿಗೆ ನಡೆದ ಘರ್ಷಣೆ ಇದಾಗಿದೆ. 2020 ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ PLA ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದರು.

ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ತವಾಂಗ್‌ನ ಮುಖಾಮುಖಿ ಪ್ರದೇಶದಲ್ಲಿ ಭಾರತೀಯ ಸೈನಿಕರು ಚೀನಾ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಗಾಯಗೊಂಡಿರುವ ಚೀನಾ ಸೈನಿಕರ ಸಂಖ್ಯೆ ಭಾರತೀಯ ಸೈನಿಕರಿಗಿಂತ ಹೆಚ್ಚಿದೆ.

ಭಾರತದ ಕಡೆಯಿಂದ ಚೀನಾ ಸೈನಿಕರು ಇಷ್ಟೊಂದು ಪ್ರಬಲ ವಿರೋಧ ಏರ್ಪಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಈ ಹೋರಾಟದಲ್ಲಿ ಭಾರತೀಯ ಚೀನೀ ಸೈನಿಕರನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದಾತೆ. ಈ ಚಕಮಕಿಯಲ್ಲಿ ಚೀನಾ ಸೈನಿಕರು ಭಾರೀ ನಷ್ಟ ಅನುಭವಿಸಿದ್ದಾರೆ.

ಅರುಣಾಚಲ ಪ್ರದೇಶದ LAC ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಯಾಗುತ್ತಿರುವುದು ಇದೇ ಮೊದಲಲ್ಲ. ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವಾಗ ಭಾರತ ಮತ್ತು ಚೀನಾದ ಸೈನಿಕರು ಆಗಾಗ್ಗ ಕಿತ್ತಾಡಿಕೊಳ್ಳುವುದುಂಟು. ಅಕ್ಟೋಬರ್ 2021ರಲ್ಲಿ, ಯಾಂಗ್ಟ್ಸೆ ಬಳಿ ಘರ್ಷಣೆ ಉಂಟಾದ ಬಳಿಕ ಭಾರತೀಯ ಸೇನೆಯು ಕೆಲವು ಗಂಟೆಗಳ ಕಾಲ ದೊಡ್ಡ ಗಸ್ತಿನ ಕೆಲವು ಚೀನೀ ಸೈನಿಕರನ್ನು ಬಂಧಿಸಿತ್ತು.

ಭಾರತ-ಚೀನಾ ಗಡಿಯಲ್ಲಿನ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಎರಡೂ ದೇಶಗಳ ಸೈನಿಕರು ಮುಖಾಮುಖಿಯಾದರೂ ಸಹ ಅವರು ಶಸ್ತ್ರಾಸ್ತ್ರಗಳನ್ನು ಬಳಸುವಂತಿಲ್ಲ ಜೊತೆಗೆ ಜಗಳವಾಡುವಂತಿಲ್ಲ. ಆದರೆ ಒಂದು ವೇಳೆ ನಿಯಮ ಮೀರಿ ಜಗಳ ನಡೆದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಹಲವು ರೀತಿಯಲ್ಲಿ ಎದುರಾಗುವುದು ಖಂಡಿತ.

ಈ ಘಟನೆ ನಡೆದ ಕೂಡಲೇ ಎರಡೂ ಕಡೆಯ ಕಮಾಂಡರ್‌ಗಳು ಸಭೆ ನಡೆಸಿ ಸಮಾಧಾನಪಡಿಸಿದರು ಎಂದು ಸೇನೆಯ ಕಡೆಯಿಂದ ಹೇಳಲಾಗಿದೆ. ಈ ಘಟನೆ ನಡೆದ ಕಡೆ ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಆದರೆ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು.

ಇದನ್ನೂ ಓದಿ:  RS 2000 Note: ‘3 ವರ್ಷಗಳ ಹಿಂದೆಯೇ 2 ಸಾವಿರ ರೂ. ನೋಟುಗಳ ಪ್ರಿಂಟಿಂಗ್ ಸ್ಥಗಿತ’!

ಸಾಮಾನ್ಯವಾಗಿ ಇಂತಹ ಘಟನೆಗಳು ಹಿಮ ಕರಗಿದ ನಂತರ ಅಂದರೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕಂಡುಬರುತ್ತವೆ. ಆದರೆ ಡಿಸೆಂಬರ್‌ನಲ್ಲಿ ಇಂತಹ ಘಟನೆ ನಡೆದಿರುವುದು ಸೇನೆಯ ಮುಖ್ಯಸ್ಥರಿಗೆ ಊಹಿಸಲು ಕಷ್ಟವಾದಂತಾಗಿದೆ. ಚೀನಾ ಏನು ಯೋಚಿಸುತ್ತಿದೆ? ಅವರ ಯೋಜನೆ ಏನು? ಇದು ಯಾವುದಾದರೂ ಪಿತೂರಿಯ ಭಾಗವೇ? ಈ ಎಲ್ಲಾ ಪ್ರಶ್ನೆಗಳು ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಉದ್ಭವಿಸಲು ಪ್ರಾರಂಭಿಸಿವೆ. ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News