ಅಕ್ಟೋಬರ್ 24ಕ್ಕೆ ಭಾರತ ಮತ್ತು ಪಾಕಿಸ್ತಾನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ

ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ಕರ್ತಾರ್‌ಪುರ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಲಿವೆ.

Last Updated : Oct 22, 2019, 04:53 PM IST
ಅಕ್ಟೋಬರ್ 24ಕ್ಕೆ ಭಾರತ ಮತ್ತು ಪಾಕಿಸ್ತಾನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ title=

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ಕರ್ತಾರ್‌ಪುರ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಲಿವೆ.

ಪ್ರತಿ ಯಾತ್ರಿಕರ ಮೇಲೆ 20 ಡಾಲರ್ (ಸುಮಾರು 1,500 ರೂ.) ಸೇವಾ ಶುಲ್ಕವನ್ನು ಹಿಂಪಡೆಯಲು ಇಸ್ಲಾಮಾಬಾದ್ ಹಿಂದೇಟು ಹಾಕಿದ ಹೊರತಾಗಿಯೂ, ಅಕ್ಟೋಬರ್ 23 ರಂದು ಭಾರತ ಪಾಕಿಸ್ತಾನದೊಂದಿಗೆ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ವಿದೇಶಾಂಗ ಸಚಿವಾಲಯ (ಇಎಎಂ) ಹೇಳಿಕೆಯಲ್ಲಿ ತಿಳಿಸಿತ್ತು.

ಗುರುದ್ವಾರ ಕರ್ತಾರ್‌ಪುರಕ್ಕೆ ವೀಸಾ ಮುಕ್ತ ಪ್ರವೇಶವನ್ನು ಹೊಂದಬೇಕೆಂದು ಯಾತ್ರಾರ್ಥಿಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 12 ರ ಮೊದಲು ಕರ್ತಾರ್‌ಪುರ ಕಾರಿಡಾರ್ ಅನ್ನು ಕಾರ್ಯಗತಗೊಳಿಸುವ ಸಲುವಾಗಿ ಮೋದಿ ನೇತೃತ್ವದ ಸರ್ಕಾರ ಅಕ್ಟೋಬರ್ 23 ರಂದು ಒಪ್ಪಂದವನ್ನು ಅಂತಿಮಗೊಳಿಸಲು ಬಯಸಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಯಾತ್ರಿಕರ ಮೇಲೆ 20 ಡಾಲರ್ ಸೇವಾ ಶುಲ್ಕ ವಿಧಿಸುವ ಒತ್ತಾಯವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಮತ್ತೊಮ್ಮೆ ಒತ್ತಾಯಿಸಲಾಗಿದೆ. ಯಾವುದೇ ಸಮಯದಲ್ಲಿ ಒಪ್ಪಂದವನ್ನು ತಿದ್ದುಪಡಿ ಮಾಡಲು ಭಾರತ ಸಿದ್ಧವಾಗಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಈ ಕಾರಿಡಾರ್ ಕರ್ತಾರ್‌ಪುರದಲ್ಲಿರುವ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇವಾಲಯದೊಂದಿಗೆ ಸಂಪರ್ಕಿಸುತ್ತದೆ. ಇದು ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದ್ದು, ಆ ಮೂಲಕ ಈ ಕಾರಿಡಾರ್ ಎರಡು ದೇಶಗಳ ನಡುವಿನ ಮೊದಲ ವೀಸಾ ಮುಕ್ತ ಕಾರಿಡಾರ್ ಆಗಲಿದೆ ಎಂದು ವರದಿಗಳು ತಿಳಿಸಿವೆ.

Trending News