India Post Recruitment 2021: 580 ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿ ಪಾಸಾದವರಿಗೆ ಅವಕಾಶ

ಉತ್ತರಾಖಂಡ ಪೋಸ್ಟಲ್ ಸರ್ಕಲ್ ಅಡಿಯಲ್ಲಿ ಗ್ರಾಮೀಣ ಪೋಸ್ಟ್ ಸೇವಕ್ (GDS) ಹುದ್ದೆಗೆ ಇಂಡಿಯಾ ಪೋಸ್ಟ್ ಅರ್ಜಿಗಳನ್ನು ಆಹ್ವಾನಿಸಿದೆ.

Written by - Puttaraj K Alur | Last Updated : Sep 4, 2021, 12:48 PM IST
  • ಉತ್ತರಾಖಂಡ ಪೋಸ್ಟಲ್ ಸರ್ಕಲ್ ಅಡಿ GDS ಹುದ್ದೆಗೆ ಇಂಡಿಯಾ ಪೋಸ್ಟ್ ಅರ್ಜಿ ಆಹ್ವಾನ
  • 581ಕ್ಕಿಂತ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಇಂಡಿಯಾ ಪೋಸ್ಟ್ ಅಧಿಸೂಚನೆ
  • SSLC ಪಾಸಾದ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
India Post Recruitment 2021: 580 ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿ ಪಾಸಾದವರಿಗೆ ಅವಕಾಶ title=
SSLC ಪಾಸಾದ ಅಭ್ಯರ್ಥಿಗಳಿಗೆ ಸುರ್ವಣಾವಕಾಶ (Photo Courtesy: @Zee News)

ನವದೆಹಲಿ: ಉತ್ತರಾಖಂಡ ಪೋಸ್ಟಲ್ ಸರ್ಕಲ್ ಅಡಿಯಲ್ಲಿ ಗ್ರಾಮೀಣ ಪೋಸ್ಟ್ ಸೇವಕ್ (GDS) ಹುದ್ದೆಗೆ ಇಂಡಿಯಾ ಪೋಸ್ಟ್ ಅರ್ಜಿಗಳನ್ನು ಆಹ್ವಾನಿಸಿದೆ. ಸೈಕಲ್ 3(Cycle 3)ಗಾಗಿ GDS ಪೋಸ್ಟ್ ನ 581ಕ್ಕಿಂತ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಇಂಡಿಯಾ ಪೋಸ್ಟ್ ಅಧಿಸೂಚನೆ ಹೊರಡಿಸಿದೆ. ಆಯ್ದ ಅಭ್ಯರ್ಥಿಗಳನ್ನು ಶಾಖೆಯ ಪೋಸ್ಟ್ ಮಾಸ್ಟರ್, ಸಹಾಯಕ ಶಾಖೆಯ ಪೋಸ್ಟ್ ಮಾಸ್ಟರ್ ಮತ್ತು ಡಾಕ್ ಸೇವಕ್ ಹುದ್ದೆ(Gramin Dak Sevak)ಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಅರ್ಜಿದಾರರು ಗಮನಿಸಬೇಕಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತ ಪೋಸ್ಟ್ ನ appost.in. ಅಧಿಕೃತ ವೆಬ್‌ಸೈಟ್‌ನಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 22, 2021 ಆಗಿರುತ್ತದೆ.

ಇಂಡಿಯಾ ಪೋಸ್ಟ್ GDS ನೇಮಕಾತಿ ಪ್ರಮುಖ ದಿನಾಂಕ

ನೋಂದಣಿ ಮತ್ತು ಶುಲ್ಕ ಪಾವತಿಯ ಆರಂಭದ ದಿನಾಂಕ - ಆಗಸ್ಟ್ 23, 2021

ನೋಂದಣಿ ಮತ್ತು ಶುಲ್ಕ ಪಾವತಿಯ ಕೊನೆ ದಿನಾಂಕ: ಸೆಪ್ಟೆಂಬರ್ 22, 2021

ಇದನ್ನೂ ಓದಿ: LPG ಬೆಲೆಗಳಿಂದ ಆಧಾರ್-ಪ್ಯಾನ್ ಕಾರ್ಡ್ ಲಿಂಕ್‌ವರೆಗೆ: ಸರ್ಕಾರವು ಈ ತಿಂಗಳು ಜಾರಿಗೆ ತರಲಿರುವ ಬದಲಾವಣೆಗಳ ಪಟ್ಟಿ ಇಲ್ಲಿದೆ

ಇಂಡಿಯಾ ಪೋಸ್ಟ್ GDS ನೇಮಕಾತಿ ಹುದ್ದೆಯ ವಿವರ

1) GDS - 581 ಪೋಸ್ಟ್‌ ಗಳು

2) UR – 317

3) EWS – 57

4) OBC – 78

5) PWD-B – 6

6) PWD-C – 7

7) PWD-DE – 2

8) SC – 99

9) ST – 15

ಇಂಡಿಯಾ ಪೋಸ್ಟ್ GDS ನೇಮಕಾತಿ ಸ್ಥಳಗಳು

ಅಲ್ಮೋರಾ (Almora)

ಚಮೋಲಿ (Chamoli)

ಡೆಹ್ರಾಡೂನ್ (Dehradun)

ನೈನಿತಾಲ್ (Nainital)

ಪೌರಿ (Pauri)

ಪಿಥೋರಗಢ (Pithoragarh)

ಆರ್‌ಎಂಎಸ್ ಡಿಎನ್ ವಿಭಾಗ (RMS DN DIVISION)

ತೆಹ್ರಿ (Tehri)

ಇದನ್ನೂ ಓದಿ: Weekend forecast: ಈ ರಾಜ್ಯಗಳಲ್ಲಿ ಮುಂದಿನ ಕೆಲವು ದಿನ ಭಾರೀ ಮಳೆಯಾಗುವ ಎಚ್ಚರಿಕೆ

ಇಂಡಿಯಾ ಪೋಸ್ಟ್ GDS ನೇಮಕಾತಿ ಅರ್ಹತಾ ಮಾನದಂಡ

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉರ್ತೀರ್ಣರಾಗಿರಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ನಿರರ್ಗಳವಾಗಿರಬೇಕು. ಅರ್ಜಿದಾರರು ಕಂಪ್ಯೂಟರ್‌ ಮೂಲ ಜ್ಞಾನ ಮತ್ತು ಸೈಕ್ಲಿಂಗ್ ಜ್ಞಾನವನ್ನು ಹೊಂದಿರಬೇಕು.

ಇಂಡಿಯಾ ಪೋಸ್ಟ್ GDS ನೇಮಕಾತಿ ವಯಸ್ಸಿನ ಮಿತಿ

ಅಭ್ಯರ್ಥಿಗಳು ಆಗಸ್ಟ್ 23, 2021ಕ್ಕೆ 18 ರಿಂದ 40 ವರ್ಷದೊಳಗಿರಬೇಕು.

ಇಂಡಿಯಾ ಪೋಸ್ಟ್ GDS ನೇಮಕಾತಿ ಸಂಬಳ

ಆಯ್ಕೆಯಾದ ಅಭ್ಯರ್ಥಿಗಳಿಗೆ ತಮ್ಮ ಹುದ್ದೆಗೆ ಅನುಗುಣವಾಗಿ ಮಾಸಿಕ 10 ಸಾವಿರ ರೂ.ನಿಂದ 14,500 ರೂ.ವರೆಗೆ ಸಂಬಳವಿರುತ್ತದೆ

ಬಿಪಿಎಂ (BPM) – 12 ಸಾವಿರ ರೂ.

ಎಬಿಪಿಎಂ/ಡಾಕ್ ಸೇವಕ್ (ABPM/Dak Sevak) - 10 ಸಾವಿರ ರೂ.

ಬಿಪಿಎಂ (BPM) - 14,500 ರೂ.

ಎಬಿಪಿಎಂ/ಡಾಕ್ ಸೇವಕ್ (ABPM/Dak Sevak) – 12 ಸಾವಿರ ರೂ.

ಇಂಡಿಯಾ ಪೋಸ್ಟ್ GDS ನೇಮಕಾತಿಗೆ ಹೇಗೆ ಅರ್ಜಿ ಸಲ್ಲಿಸಬೇಕು..?

ಆಸಕ್ತ ಅಭ್ಯರ್ಥಿಗಳು ಮೇಲೆ ತಿಳಿಸಿದ ಮಾನದಂಡಗಳನ್ನು ಭರ್ತಿ ಮಾಡುವ ಅಧಿಕೃತ ವೆಬ್‌ಸೈಟ್ https://indiapost.gov.in  ಅಥವಾ https://appost.in/gdsonline ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಇಂಡಿಯಾ ಪೋಸ್ಟ್ GDS ನೇಮಕಾತಿ ಅರ್ಜಿ ಶುಲ್ಕ

UR/OBC/EWS ಪುರುಷ/Trans-Man -  100 ರೂ.

ಮಹಿಳಾ/Trans- Woman ಅಭ್ಯರ್ಥಿಗಳಿಗೆ, SC/ST ಮತ್ತು PwD - ಯಾವುದೇ ಶುಲ್ಕ ಅನ್ವಯಿಸುವುದಿಲ್ಲ.

ಇದನ್ನೂ ಓದಿ: Good News: ಕಾಯಿಲೆಯಿಂದ ಬಳಲುತ್ತಿರುವವರಿಗೆ ಭಾರಿ ನೆಮ್ಮದಿ, 39 ಅತ್ಯಾವಶ್ಯಕ ಔಷಧಿಗಳ ಬೆಲೆ ಇಳಿಕೆಗೆ ಮೋದಿ ಸರ್ಕಾರದ ಸಿದ್ಧತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News