ನವದೆಹಲಿ: ಭಾರತದಲ್ಲಿ ಇದೆ ಮೊದಲ ಭಾರಿ ಕೆಳೆದ 24 ಗಂಟೆಗಳಲ್ಲಿ 4,01,993 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರಸ್ತುತ ದೇಶದಲ್ಲಿ ಒಟ್ಟು ಕೊರೋನಾ(Corona) ಪ್ರಕರಣಗಳ ಒಟ್ಟು ಸಂಖ್ಯೆ 1.91 ಕೋಟಿಗೆ (1,91,64,969) ಹೆಚ್ಚಾಗಿದೆ, ಅದರಲ್ಲಿ 32.68 ಲಕ್ಷ (32,68,710) ಸಕ್ರಿಯ ಪ್ರಕರಣಗಳಾಗಿವೆ. 2.11 ಲಕ್ಷ (2,11,853) ಜನ ಕರೋನವೈರಸ್ ನಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : Mohammad Shahabuddin : ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಕೊರೋನಾಗೆ ಬಲಿ..!
ಅತೀ ಹೆಚ್ಚು ಸಕ್ರಿಯ ಪ್ರಕರಣಗಳು ಕಂಡು ಬಂದ ಕಾರಣಕ್ಕೆ ಆರೋಗ್ಯ ಸಚಿವಾಲಯವು ಹತ್ತು ರಾಜ್ಯಗಳಿಗೆ ರೆಡ್-ಫ್ಲ್ಯಾಗ್(Red-Flagged) ನೀಡಿದೆ. ಹತ್ತು ರಾಜ್ಯಗಳು ಇಂತಿವೆ ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಕೇರಳ, ರಾಜಸ್ಥಾನ, ಗುಜರಾತ್, ಛತ್ತೀಸಗಡ್ ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಎಂದು ಹೆಸರಿಸಲಾಗಿದೆ.
India reports 4,01,993 new #COVID19 cases, 3523 deaths and 2,99,988 discharges in the last 24 hours, as per Union Health Ministry
Total cases: 1,91,64,969
Total recoveries: 1,56,84,406
Death toll: 2,11,853
Active cases: 32,68,710Total vaccination: 15,49,89,635 pic.twitter.com/S56SPyLZtq
— ANI (@ANI) May 1, 2021
ಇದನ್ನೂ ಓದಿ : Corona Vaccine: ಇಂದಿನಿಂದ ಈ 6 ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕರೋನಾ ಲಸಿಕೆ
ಅತೀ ಹೆಚ್ಚು ಕೊರೋನಾ ಪ್ರಕರಣಗಳು ಕಂಡು ಬಂದ ಕಾರಣ ಮಹಾರಾಷ್ಟ್ರ(Maharashtra)ವು ಮೊದಲ ಸ್ಥಾನದಲ್ಲಿದೆ. ಶುಕ್ರವಾರ ಮಹಾರಾಷ್ಟ್ರದಲ್ಲಿ 62,919 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ 828 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : Fire in Hospital: ಕೋವಿಡ್ ಆರೈಕೆ ಕೇಂದ್ರದಲ್ಲಿ ಅಗ್ನಿ ಅನಾಹುತ, 16 ಮಂದಿ ಸಜೀವ ದಹನ
ಡೆನ್ಮಾರ್ಕ್, ಯುಕೆ, ಜರ್ಮನಿ, ನೆದರ್ ಲ್ಯಾಂಡ್ ಮತ್ತು ಸ್ಪೇನ್ ಸೇರಿದಂತೆ ಹಲವಾರು ಯುರೋಪಿಯನ್ ರಾಷ್ಟ್ರಗಳು(European countries) ಈಗಾಗಲೇ ಭಾರತದ ಪ್ರಯಾಣನಿರ್ಬಂಧಿಸಿವೆ. ಅಮೇರಿಕ ಅಧ್ಯಕ್ಷ ಜೋ ಬಿಡನ್ ಶುಕ್ರವಾರ ಕೊರೋನಾ ನಿಯಂತ್ರಣಕ್ಕೆ ಬರುವವರೆಗೆ ಭಾರತದ ಪ್ರಯಾಣ ಬಂದ್ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮತ ಎಣಿಕೆಗೂ ಮೊದಲು ಅಭ್ಯರ್ಥಿಗಳಿಗೆ ಮಮತಾ ಬ್ಯಾನರ್ಜೀಯಿಂದ Virtual crash course
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.