ನವದೆಹಲಿ: ಇರಾನ್ ಕಚ್ಚಾ ತೈಲವನ್ನು ರೂಪಾಯಿಗಳಲ್ಲಿ ಖರೀದಿಸಲು ಭಾರತವು ಒಪ್ಪಂದ ಮಾಡಿಕೊಂಡಿದೆ. ಹೌದು, ಇರಾನ್ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಇನ್ನು ಮುಂದೆ ಭಾರತ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ ಮಾಡಲಿದೆ. ಇನ್ನು ಮುಂದೆ ಯುಕೋ ಬ್ಯಾಂಕ್ ಮೂಲಕವೇ ಭಾರತ ಇರಾನ್ಗೆ ತೈಲ ಆಮದಿನ ದರವನ್ನು ಪಾವತಿಸಲಿದೆ.
ಭಾರತೀಯ ಇಂಧನ ತೈಲ ಕಂಪೆನಿ (ಎನ್ಐಒಸಿ) ಯ ಯುಕೋ ಬ್ಯಾಂಕ್ ಖಾತೆಯಲ್ಲಿ ಭಾರತೀಯ ಸಂಸ್ಕರಣಾಗಾರ ಕಂಪನಿಗಳು ರೂಪಾಯಿಗಳಲ್ಲಿ ಹಣ ಪಾವತಿಸಲಿವೆ ಎಂದು ಮೂಲಗಳು ತಿಳಿಸಿವೆ. ಭಾರತದಿಂದ ತಯಾರಿಸಿದ ಸರಕುಗಳ ರಫ್ತುಗಾಗಿ ಇರಾನ್ಗೆ ಅರ್ಧದಷ್ಟು ಹಣವನ್ನು ಇಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಭಾರತವು ಅಮೆರಿಕದ ನಿರ್ಬಂಧಗಳ ಅಡಿಯಲ್ಲಿ ಆಹಾರ ಧಾನ್ಯಗಳು, ಔಷಧಿ ಮತ್ತು ವೈದ್ಯಕೀಯ ಸಾಧನಗಳನ್ನು ಇರಾನ್ಗೆ ರಫ್ತು ಮಾಡಬಹುದು. ಆಮದು ಮತ್ತು ಭರವಸೆಯ ಪಾವತಿಯನ್ನು ಕಡಿಮೆ ಮಾಡಿದ ನಂತರ ಅಮೇರಿಕಾದಿಂದ ಭಾರತಕ್ಕೆ ಈ ರಿಯಾಯಿತಿ ಭಾರತಕ್ಕೆ ದೊರೆತಿದೆ. ಈ 180 ದಿನಗಳ ವಿನಾಯಿತಿ ಸಮಯದಲ್ಲಿ, ಭಾರತವು ಇರಾನ್ನಿಂದ ದಿನಕ್ಕೆ ಮೂರು ದಶಲಕ್ಷ ಬ್ಯಾರೆಲ್ಗಳಿಗೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಚೀನಾ ನಂತರ ಭಾರತವು ಇರಾನ್ನ ಎರಡನೇ ಅತಿ ದೊಡ್ಡ ಖರೀದಿದಾರನೆಂದು ಮೂಲಗಳು ತಿಳಿಸಿವೆ. ಈಗ ಭಾರತವು ಇರಾನ್ನಿಂದ ಮಾಸಿಕ 12.5 ಲಕ್ಷ ಟನ್ ಅಥವಾ ವಾರ್ಷಿಕ 1.5 ಮಿಲಿಯನ್ ಟನ್ ಆಧಾರದ ಮೇಲೆ ದಿನಕ್ಕೆ ಮೂರು ಲಕ್ಷ ಬ್ಯಾರೆಲ್ಗಳ ಕಚ್ಚಾ ತೈಲವನ್ನು ಖರೀದಿಸಬಹುದು. 2017-18ರ ಹಣಕಾಸು ವರ್ಷದಲ್ಲಿ ಭಾರತವು ಇರಾನ್ನಿಂದ ದಿನಕ್ಕೆ 2.26 ಮಿಲಿಯನ್ ಟನ್ ಅಥವಾ 4,52,000 ಬ್ಯಾರಲ್ ತೈಲವನ್ನು ಖರೀದಿಸಿದೆ.
ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಗ್ರಾಹಕ. ಶೇ. 80 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತ ದೇಶದ ಅಗತ್ಯತೆಯನ್ನು ಪೂರ್ಣಗೊಳಿಸುತ್ತಿದೆ.
ಇದೇ ನವೆಂಬರ್ 4ರಿಂದ ಇರಾನ್ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ ಸಂಪೂರ್ಣವಾಗಿ ಜಾರಿಗೆ ಬಂದಿದೆ. ಆದರೆ ಇರಾನ್ನಿಂದ ತೈಲ ಆಮದು ಒಪ್ಪಂದದ ಮೇಲೆ ಯಾವುದೇ ಪರಿಣಾಮವಾಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಹಿಂದೆಯೇ ಜನತೆಗೆ ಭರವಸೆ ನೀಡಿತ್ತು. ಅದರಂತೆ ನಿರ್ಬಂಧದ ಹೊರತಾಗಿಯೂ ಇರಾನ್ನಿಂದ ತೈಲ ಆಮದು ಮಾಡಿಕೊಳ್ಳುವ ಕುರಿತು ಅಮೆರಿಕ ಮನವೋಲಿಸುವಲ್ಲಿ ಯಶಸ್ವಿಯಾಗಿತ್ತು.
ನಿರ್ಬಂಧದ ಹೊರತಾಗಿಯೂ ಭಾರತ ಸೇರಿದಂತೆ ಇತರ 8 ರಾಷ್ಟ್ರಗಳು ಇರಾನ್ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಬಹುದು ಎಂದು ಅಮೇರಿಕಾ ಘೋಷಿಸಿತ್ತು.
ಇದೀಗ ಈ ಒಪ್ಪಂದದಿಂದಾಗಿ ಭಾರತ ಇರಾನ್ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ ಮಾಡಲಿದೆ.