ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ 2047 ರಲ್ಲಿ ದೇಶದಲ್ಲಿ ಮತ್ತೊಂದು ವಿಭಜನೆಯನ್ನು ನಿರೀಕ್ಷಿಸಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.1947 ರಲ್ಲಿ ಧರ್ಮದ ಆಧಾರದ ಮೇಲೆ ಭಾರತವು ವಿಭಜನೆಯನ್ನು ಕಂಡಿದೆ ಮತ್ತು 72 ವರ್ಷಗಳಲ್ಲಿ 33 ಕೋಟಿಗಳಿಂದ 135.7 ಕೋಟಿಗೆ ದೇಶದ ಜನಸಂಖ್ಯೆ ಏರಿಕೆಯಾಗಿದೆ ಎಂದು ಸಚಿವರು ಹೇಳಿದರು.
ಯಾವುದೇ ಸಮುದಾಯವನ್ನು ಹೆಸರಿಸದೆ ಪ್ರಸ್ತಾಪಿಸಿದ ಕೇಂದ್ರ ಸಚಿವರು "ವಿಭಜಿತ ಶಕ್ತಿಗಳ ಜನಸಂಖ್ಯಾ ಸ್ಫೋಟವು ಘೋರವಾಗಿದೆ" ಎಂದು ಹೇಳಿದರು. ಈ ಕುರಿತಾಗಿ ಟ್ವಿಟ್ ಮಾಡಿರುವ ಗಿರಿರಾಜ್ ಸಿಂಗ್ ಮುಂಬರುವ ದಿನಗಳಲ್ಲಿ ಭಾರತವನ್ನು ಕುರಿತು ಸಹ ಪ್ರಸ್ತಾಪಿಸುವುದು ಕಷ್ಟ ಎಂದು ಸಿಂಗ್ ಹೇಳಿದರು.
1947 में धर्म के आधार पर ही देश का विभाजन हुआ वैसी ही परिस्थिति पुनः2047 तक होगी।
72 साल में जनसंख्या 33cr से बढ़कर 135.7cr हो गया है।
विभाजनकारी ताक़तों का जनसंख्या विस्फोट भयावह है ।
अभी तो 35A के बहस पर हंगामा हो रहा है।आने वाले वक़्त में तो एक भारत का ज़िक्र करना असंभव होगा। pic.twitter.com/5RbWk3nEws— Giriraj Singh (@girirajsinghbjp) September 16, 2018
ಭಾರತೀಯ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 35 ಎ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು. "ಧರ್ಮವನ್ನು ಆಧರಿಸಿ 1947 ರಲ್ಲಿ ದೇಶವನ್ನು ವಿಭಜಿಸಲಾಗಿತ್ತು. ಇದೇ ರೀತಿಯ ಪರಿಸ್ಥಿತಿ 2047 ರಲ್ಲಿ ಸಂಭವಿಸಲಿದೆ. ಅಲ್ಲದೆ 72 ವರ್ಷಗಳಲ್ಲಿ, ಭಾರತದ ಜನಸಂಖ್ಯೆಯು 33 ಕೋಟಿಗಳಿಂದ 135.7 ಕೋಟಿಗಳಿಗೆ ಏರಿಕೆಯಾಗಿದೆ. ಇದರಿಂದ ವಿಭಜಿತ ಶಕ್ತಿಗಳ ಜನಸಂಖ್ಯೆಯ ಸ್ಫೋಟವು ಘೋರವಾಗಿದೆ. ಪ್ರಸ್ತುತ 35 ಎ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಮುಂಬರುವ ದಿನಗಳಲ್ಲಿ ಭಾರತದ ಕುರಿತು ಪ್ರಸ್ತಾಪಿಸುವುದು ಸಹ ಕಷ್ಟವೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.