ನವದೆಹಲಿ : ಆಫ್ಘಾನ್ ದೇಶದ ಸುಮಾರು 20 ಮಹಿಳಾ ಅಧಿಕಾರಿಗಳಿಗೆ ಕಂಪ್ಯೂಟರ ಆಧಾರಿತ ಎಕೆ-47 ಗನ್ ಬಳಸುವ ವಿಧಾನಕ್ಕೆ ಸಂಬಂಧಿಸಿದಂತೆ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತಿದೆ.
ಈ ಮಹಿಳೆಯರು ಮೊದಲ ಭಾರಿಗೆ ತಮಿಳುನಾಡಿನ ಚೆನ್ನೈನಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಇಲ್ಲಿ ಹಲವು ಯುದ್ದ ತಂತ್ರ ಹಾಗೂ ಬಂದೂಕಗಳ ಬಳಕೆ ಮತ್ತು ದಿಕ್ಕುಗಳ ಕೌಶಲ್ಯಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಪುರುಷರಿಗೆ ತರಬೇತಿ ನೀಡಲಾಗುತ್ತಿದೆ.
ಈ ವಾರದಲ್ಲಿ ಅವರಿಗೆ ಎಕೆ 47 ನ್ನು ಬಳಸುವ ಬಗೆಯ ಕುರಿತು ತರಬೇತಿ ನೀಡಲಾಯಿತು.ಇದು ಒಟ್ಟಾರೆ ಮೂರು ವಾರಗಳ ತರಬೇತಿಯಾಗಿದ್ದು ಡಿಸೆಂಬರ್ 24 ರವರರೆಗೆ ಈ ತರಬೇತಿ ನಿರಂತರವಾಗಿ ನಡೆಯಲಿದೆ. ಮುಂದಿನ ವರ್ಷದಿಂದ ಈ ತರಬೇತಿಯು ವರ್ಷ ಪೂರ್ತಿನಡೆಯಲಿದೆ ಎಂದು ಹೇಳಲಾಗುತ್ತಿದೆ. ಇತ್ತಿಚೆಗಿನ ಹೊಸ ಆಫ್ಘಾನ ಸರ್ಕಾರದ ಕಾಯ್ದೆಯಂತೆ ಅದು ಕನಿಷ್ಠ ಶೇಕಡಾ 10 ರಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳಬೇಕೆಂಬ ನಿಯಮ ಮಾಡಿದೆ. ಅದನ್ನು ಜಾರಿಗೆ ತರುವ ಸಲುವಾಗಿ ಭಾರತ ದ್ವಿಪಕ್ಷೀಯ ಸಂಬಂಧದ ಭಾಗವಾಗಿ ಈ ತರಬೇತಿಯನ್ನು ಮಹಿಳೆಯರಿಗೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.