ಸ್ವಿಸ್ ಬ್ಯಾಂಕ್ ನಲ್ಲಿ 50 ಪ್ರತಿಶತದಷ್ಟು ಹೆಚ್ಚಾದ ಭಾರತೀಯರ ಠೇವಣಿ

ಕಳೆದ ಒಂದು ವರ್ಷದಲ್ಲಿ ಭಾರತೀಯರ ಸಂಪತ್ತು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಶೇ. 50 ರಷ್ಟು ಹೆಚ್ಚಳವಾಗಿದೆ.  

Last Updated : Jun 29, 2018, 11:31 AM IST
ಸ್ವಿಸ್ ಬ್ಯಾಂಕ್ ನಲ್ಲಿ 50 ಪ್ರತಿಶತದಷ್ಟು ಹೆಚ್ಚಾದ ಭಾರತೀಯರ ಠೇವಣಿ title=

ನವದೆಹಲಿ: ಸ್ವಿಸ್ ಬ್ಯಾಂಕ್ ಗಳಲ್ಲಿನ ಭಾರತೀಯ ಠೇವಣಿಗಳು ನಾಲ್ಕು ವರ್ಷಗಳಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಏರಿತ್ತು, ಕಳೆದ ವರ್ಷ ಒಂದು ಬಿಲಿಯನ್ ಸ್ವಿಸ್ ಫ್ರಾಂಕ್ಗಳು (7,000 ಕೋಟಿ) ತಲುಪಿದ್ದವು, ಇದು ಒಂದು ವರ್ಷದಲ್ಲಿ 50 ಪ್ರತಿಶತದಷ್ಟು ಹೆಚ್ಚಳವಾಗಿದೆ. ಸ್ವಿಟ್ಜರ್ಲೆಂಡ್ನ ಕೇಂದ್ರ ಬ್ಯಾಂಕ್ನ ಇತ್ತೀಚಿನ ಅಂಕಿಅಂಶಗಳಲ್ಲಿ ಇದು ಬಹಿರಂಗವಾಗಿದೆ. ಇದರ ಪ್ರಕಾರ, ಭಾರತೀಯರು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು 2017 ರಲ್ಲಿ ಶೇ. 50 ಕ್ಕಿಂತ ಹೆಚ್ಚಾಗಿದ್ದು 7,000 ಕೋಟಿ (1.01 ಅರಬ್ ಫ್ರಾಂಕ್) ಹೆಚ್ಚಾಗಿದೆ. ಈ ಹಿಂದಿನ ಮೂರು ವರ್ಷಗಳಲ್ಲಿ ಈ ಬ್ಯಾಂಕ್ ನಲ್ಲಿ ಭಾರತೀಯರ ಠೇವಣಿಗಳಲ್ಲಿ ಸ್ಥಿರವಾದ ಕುಸಿತ ಕಂಡುಬಂದಿತ್ತು. 

ಸ್ವಿಸ್ ನ್ಯಾಷನಲ್ ಬ್ಯಾಂಕ್ (SNB) ನ ವಾರ್ಷಿಕ ಅಂಕಿಅಂಶಗಳ ಪ್ರಕಾರ, ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಭಾರತೀಯ ಸಂಪತ್ತು 2016 ರಲ್ಲಿ 45.6 ರಷ್ಟು ಇಳಿಕೆಯಾಗಿ 67.6 ಮಿಲಿಯನ್ ಫ್ರಾಂಕ್ಗಳಿಗೆ (ಸುಮಾರು 4,500 ಕೋಟಿ ರೂ.) ಇಳಿಕೆಯಾಗಿದೆ. 1987ರಿಂದ ಇದೇ ಮೊದಲ ಬಾರಿಗೆ ಈ ಪ್ರಮಾಣದ ಕುಸಿತ ಕಂಡುಬಂದಿತ್ತು. ಎಸ್ಎನ್ಬಿಯ ಅಂಕಿಅಂಶಗಳ ಪ್ರಕಾರ, 2017 ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ 6,891 ಕೋಟಿ (99.9 ಮಿಲಿಯನ್ ಫ್ರಾಂಕ್) ಗೆ ಏರಿಕೆಯಾಯಿತು. 

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಭಾರತೀಯ ಗ್ರಾಹಕರು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ರೂ. 3,200 ಕೋಟಿ, ಇತರ ಬ್ಯಾಂಕ್ಗಳ ಮೂಲಕ 1,050 ಕೋಟಿ ರೂ.  ಠೇವಣಿ ಮಾಡಿದ್ದಾರೆ. ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಭಾರತೀಯರ ಸಂಪತ್ತು 2013 ರಲ್ಲಿ 12%, 2013 ರಲ್ಲಿ 43% ಮತ್ತು 2017 ರಲ್ಲಿ 50.2% ಹೆಚ್ಚಾಗಿದೆ. ಈ ಹಣವು 2004 ರಲ್ಲಿ 56% ನಷ್ಟಿತ್ತು.

ಅಂತಹ ಸಮಯದಲ್ಲಿ SNB ಯ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ, ಕೆಲವು ತಿಂಗಳುಗಳ ಹಿಂದೆ, ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಮಾಹಿತಿಯ ಸ್ವಯಂಚಾಲಿತ ವಿನಿಮಯದ ಹೊಸ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಕಪ್ಪು ಹಣದ ಸಮಸ್ಯೆಯನ್ನು ತೊಡೆದುಹಾಕುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ. ಏತನ್ಮಧ್ಯೆ, ಸ್ವಿಜರ್ಲೆಂಡ್ನ ಬ್ಯಾಂಕುಗಳ ಲಾಭವು 2017 ರಲ್ಲಿ 25% ರಷ್ಟು ಏರಿಕೆಯಾಗಿ 9.8 ಬಿಲಿಯನ್ ಫ್ರಾಂಕ್ಗಳಿಗೆ ತಲುಪಿತು. 

Trending News