ಇಂದಿರಾ ಎಂದರೆ ಇಂಡಿಯಾ

Last Updated : Nov 19, 2017, 01:05 PM IST
ಇಂದಿರಾ ಎಂದರೆ ಇಂಡಿಯಾ title=

 

 "ಒಂದು ವೇಳೆ ನಾನು ದೇಶ ಸೇವೆಯ ಸಂದರ್ಭದಲ್ಲಿ ಸಾವನ್ನಪ್ಪಿದರೆ,ನಾನು ಅದಕ್ಕೆ ಹೆಮ್ಮೆ ಪಡುತ್ತೇನೆ 

ನನ್ನ ಪ್ರತಿ ರಕ್ತದ ಹನಿಯು ಈ ದೇಶವನ್ನು ಪ್ರಬಲ ಮತ್ತು ಕ್ರಿಯಾಶೀಲಗೊಳಿಸಲು ಸಹಾಯಕವಾಗುತ್ತದೆ."

 

ಇಂದಿರಾ ಗಾಂಧಿ ಈ ಮಾತನ್ನು ಹೇಳಿದ್ದು ಅವರು ಹತ್ಯೆಯಾಗುವ ಎರಡು ದಿನಗಳ ಮುಂಚೆ 

ಹೇಳಿದ್ದು,ಇಂತಹ ಧೈರ್ಯ ದಿಟ್ಟತನ ತೋರಿದ್ದ ಮಹಿಳೆಗೆ ಇಂದು ಜನ್ಮ ಶತಮಾನೋತ್ಸವದ ಸಂಭ್ರಮ. 

1917 ರ ನವಂಬರ್ 19 ರಂದು ಜವಾಹರ್ ಲಾಲ್ ನೆಹರು ಮತ್ತು ಕಮಲಾ ದಂಪತಿಗಳಿಗೆ  ಉತ್ತರ 

ಪ್ರದೇಶದ ಅಲಹಾಬಾದ್ ನಲ್ಲಿ ಏಕೈಕ ಮಗುವಾಗಿ ಜನಿಸಿದರು. ಆ ಸುಸಂಧರ್ಭಕ್ಕೆ ಈಗ ಬರೋಬ್ಬರಿ 

ಶತಮಾನದ ಸಂಭ್ರಮ.ಆದ್ದರಿಂದ ಇಂತಹ ವರ್ಣರಂಜಿತ  ಧೀರ ಮಹಿಳೆಯ ವ್ಯಕ್ತಿತ್ವವನ್ನು ಈ 

ಸಂದರ್ಭದಲ್ಲಿ ನೆನೆಯುವುದು ಅತ್ಯಂತ ಅವಶ್ಯಕ ಸಂಗತಿಯಾಗಿದೆ.

ಒಂದು ಕಡೆ ಇಂದಿರಾ ಎಂದರೆ ಇಂಡಿಯಾ ಎನ್ನುವುದು  70-80ರ ದಶಕದಲ್ಲಿ ಹೆಚ್ಚು ಪ್ರಚಲಿತವಾಗಿದ್ದ 

ಮಾತು, ಅಷ್ಟರ ಮಟ್ಟಿಗೆ ಇಂದಿರಾಗಾಂಧಿ ಸ್ವಾತಂತ್ರೋತ್ತರ ರಾಜಕೀಯದಲ್ಲಿ ತಮ್ಮ ಛಾಪನ್ನು 

ಮೂಡಿಸಿದ್ದರು.ಅಪ್ಪ ನೆಹರು ನಂತರ ನಿಜವಾಗಿಯೂ ಆಧುನಿಕ ಭಾರತದ ಸಾರಥಿಯಾಗಿದ್ದರು.ಒಂದು ಕಡೆ 

ಪುರುಷರಿಂದಲೇ ತುಂಬಿ ಹೋಗಿದ್ದ ಕಾಂಗ್ರೆಸ್ಸ್ ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರಲ್ಲದೆ ಆ 

ಮೂಲಕ ಪಕ್ಷ ಮತ್ತು ಸರ್ಕಾರವನ್ನು ತಾವೊಬ್ಬರೇ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ರೀತಿ ನಿಜಕ್ಕೂ ಅಚ್ಚರಿ 

ಮೂಡಿಸುತ್ತದೆ.

1966 ರಲ್ಲಿ ರಷ್ಯಾದ ತಾಷ್ಕೆಂಟ್ ನಲ್ಲಿ ಪ್ರಧಾನಿ ಶಾಸ್ತ್ರಿಯವರ ಅಕಾಲಿಕ ಮರಣದ ಹಿನ್ನಲೆಯಲ್ಲಿ ಹಿರಿಯ 

ಪಕ್ಷದ ನಾಯಕರಾದ ಅತುಲ್ಯ ಗೋಷ್, ಎಸ್ಕೆ.ಪಾಟೀಲ್,ಏನ್ ನಿಜಲಿಂಗಪ್ಪ ಮತ್ತು ಬಿಜು ಪಟ್ನಾಯಕ್ 

ರಂಥಹ ಹಿರಿಯ ಘಟಾನುಘಟಿಗಳಿಂದ ಕೂಡಿದ  ಕಾಂಗ್ರೆಸ್ಸ್(ಸಿಂಡಿಕೇಟ್) ಇಂದಿರಾ ಗಾಂಧಿಯನ್ನು 

ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ನೇಮಕ ಮಾಡಲಾಯಿತು. ಇಂದಿರಾ ಪ್ರಾರಂಭದ ದಿನಗಳಲ್ಲಿ 

ಅಂದರೆ ಲಾಲ್ ಬಹುದೂರ್ ಶಾಸ್ತ್ರಿ ಸಂಪುಟದಲ್ಲಿ ವಾರ್ತಾ ಮಂತ್ರಿಯಾಗಿದ್ದ ಇಂದಿರಾ ಅದರ ನಿರ್ವಹನಾ 

ವೈಪಲ್ಯದಿಂದ ಅವರನ್ನು  ರಾಮ್ ಮನೋಹರ ಲೋಹಿಯನಂತಹ ರಾಜಕಾರಣಿಗಳಿಂದ 'ಗೂಂಗಿ 

ಗುಡಿಯಾ' ಅಂತಲೂ ಕರೆದಿದ್ದಿದೆ.ಆದರೆ ಕಾಲಾಂತರದಲ್ಲಿ ಇಂತಹ ಟೀಕೆಗಳನ್ನು ಶ್ರೀಮತಿ ಇಂದಿರಾ ತಮ್ಮ 

ಆಡಳಿತ ಶೈಲಿಯಿಂದಲೇ ಅಂತವರ ಬಾಯಿ ಮುಚ್ಚಿಸಿದ್ದರು ಎನ್ನುವುದು ಇತಿಹಾಸದ ಸಂಗತಿ.    

ತಿರುವು ನೀಡಿದ  1967 ರ ಚುನಾವಣೆ:

ಈ ಅವಧಿ ಇಂದಿರಾ ಗಾಂಧಿಗೆ ಜನಪ್ರಿಯತೆಯನ್ನು ಹೆಚ್ಚಿಸಿದ ಅವಧಿ ಎಂದು ಹೇಳಬಹುದು. ಚುನಾವಣಾ 

ವರ್ಷವಾದ 1967, ಈ ಸಂದರ್ಭದಲ್ಲಿ ಇಡಿ ದೇಶವನ್ನು ನಗರ ಹಳ್ಳಿಗಳೆನ್ನದೆ ಸಾವಿರಾರು 

ಕಿಲೋಮೀಟರ್ಗಳಲ್ಲಿ ತೆರೆದ ವಾಹನದ ಮೂಲಕ ತಿರುಗಿದ್ದಳಲ್ಲದೆ ಲಕ್ಷಾಂತರ ಜನರನ್ನು ಉದ್ದೇಶಿಸಿ 

ಮಾತನಾಡಿದರು. ಹೀಗೆ ಅವರ ಈ ಅನುಭವ ರಾಜಕಾರಣದ ಕ್ರಿಯಾಶಿಲತೆಯನ್ನು ಸಂಪೂರ್ಣವಾಗಿ 

ಬದಲಾಯಿಸಿತು. ಅಲ್ಲದೆ ಅದು ಅವರು ಗ್ರಾಮೀಣ ಭಾರತದಲ್ಲಿರುವ ಸಾಮಾಜಿಕ ಮತ್ತು ರಾಜಕೀಯ 

ಸಮೀಕರಣವನ್ನು ಚೆನ್ನಾಗಿ ಅರಿತ ಇಂದಿರಾ ಮುಂದೆ ಅಲ್ಲಿರುವ ಭೂಮಾಲಿಕ ಮತ್ತು ಭೂರಹಿತರ ನಡುವೆ 

ಇರುವ ಕಂದಕಕ್ಕೆ ಮಂಗಳ ಹಾಡಲು ಅವರ ಜನಪ್ರಿಯ ಘೋಷಣೆಯಾದ 'ಗರೀಭಿ ಹಟಾವೋ' ಜಾರಿಗೆ 

ತಂದರು. ಆ ಮೂಲಕ ಗ್ರಾಮೀಣ ಭಾಗದ ಜನರನ್ನು ತಲುಪಲು ಯಶಸ್ವಿಯಾದ ಇಂದಿರಾ ಗಾಂಧಿಯವರ 

ಜನಪ್ರಿಯತೆ ಮಹಾತ್ಮಾ ಗಾಂಧೀಜಿಯವರ ನಂತರ ಯಶಸ್ವಿಯಾಗಿ ಎಲ್ಲಾ ಸಮೂಹದ ಜನರನ್ನು ಇಂದಿರಾ 

ಗಾಂಧಿ ತಲುಪಿದರು.   

ಇಂತಹ ಉತ್ತುಂಗದ ಅವಧಿಯಲ್ಲಿ  ತಮ್ಮ ಜನಪ್ರಿಯ ಕಾರ್ಯಕ್ರಮಗಳಾದ  14 ರಾಷ್ಟ್ರೀಯ ವಾಣಿಜ್ಯ 

ಬ್ಯಾಂಕಗಳನ್ನು ರಾಷ್ಟ್ರೀಕರಣಗೊಳಿಸಿದರು.ರಾಜ್ಯವಂಶಸ್ಥ ಕುಟುಂಬಗಳಿಗಿರುವ  ವಾರ್ಷಿಕ ಸರ್ಕಾರಿ 

ನಿಧಿಯನ್ನು ನಿಲ್ಲಿಸಲಾಯಿತು. ಆ ಮೂಲಕ ಸಾಮಾನ್ಯ ವರ್ಗದ ಜನರನ್ನು ಈ ರೀತಿಯ ಕಾರ್ಯಕ್ರಮಗಳು  

ಬಹುಬೇಗ ಆಕರ್ಷಿಸಿದವು .ಇದರಿಂದಾಗಿ 1971 ಚುನಾವಣೆಯಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿದ 

ಇಂದಿರಾ ಅಂದಿನಿಂದ ಕಾಂಗ್ರೆಸ್ಸ್ ಎಂದರೆ ಅದು 'ಇಂದಿರಾ ಕಾಂಗ್ರೆಸ್' ಎನ್ನುವಷ್ಟರ ಮಟ್ಟಿಗೆ 

ಜನಪ್ರಿಯತೆಯನ್ನು ಪಡೆಯಿತು. ಅಲ್ಲದೆ ಹಳೆಯ ಕಾಂಗ್ರೆಸ್ ನ ಎಲ್ಲ ಹಿರಿಯ ತಲೆಗಳನ್ನು ಪಕ್ಷದಲ್ಲಿ 

ಮೂಲೆಗುಂಪು ಮಾಡಿದ ಇಂದಿರಾ ಒಂದರ್ಥದಲ್ಲಿ ಪಕ್ಷ ಮತ್ತು ಸರ್ಕಾರವನ್ನು ಸಂಪೂರ್ಣ ಹತೋಟೆಗೆ 

ತೆಗೆದುಕೊಂಡರು.

ಇದೆ ಸಂದರ್ಭದಲ್ಲಿ  ಇಂದಿರಾ ನೇತೃತ್ವದಲ್ಲಿ ಹಸಿರುಕ್ರಾಂತಿ ಕಾರ್ಯಕ್ರಮದ ಮೂಲಕ ದೇಶಕ್ಕಿರುವ 

ಆಹಾರದ ಕೊರತೆಯನ್ನು ನೀಗಿಸಲಾಯಿತು. ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಹೆಚ್ಚಿನ 

ಉತ್ತೇಜನ ನೀಡಿದ್ದರಿಂದಾಗಿ  ಪರಮಾಣು ಮತ್ತು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ತೀವ್ರವಾದ 

ಪ್ರಗತಿಯನ್ನು ಸಾಧಿಸಿತು. 1971 ರಲ್ಲಿ ಭಾರತೀಯ ಸೈನ್ಯವು  ಬಾಂಗ್ಲಾ ವಿಮೋಚನೆಯ ಯುದ್ದದಲ್ಲಿ 

ಪಾಕಿಸ್ತಾನದ ವಿರುದ್ದ ಗೆಲುವು ಸಾದಿಸಿದ್ದರ ಫಲವಾಗಿ ಇಂದಿರಾ ಗಾಂಧಿಗೆ 'ದುರ್ಗಾ' ಎನ್ನುವು 

ನಾಮಾಂಕಿತದಿಂದ ಮೂಲಕ ಅವರ ನಾಯಕತ್ವವನ್ನು ವಿರೋಧ ಪಕ್ಷಗಳು ಹೊಗಳುವಂತಾಯಿತು 

ಎನ್ನುವುದು ಗಮನಾರ್ಹವಾದ ಸಂಗತಿ ಎನ್ನಬಹುದು.

ತುರ್ತುಪರಿಸ್ಥಿತಿ ತಂದ ಬಿಕ್ಕಟ್ಟು:

ಇಂದಿರಾ ಗಾಂಧಿಯು ತನ್ನ ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ತಂದಿದ್ದ ವರ್ಚಸ್ಸು 

ಜನಸಾಮಾನ್ಯರಲ್ಲಿ ಅಚ್ಚಳಿಯದ ಗುರುತನ್ನು ತಂದಿತ್ತು. ಇದೆ ಸಂದರ್ಭದಲ್ಲಿ ಇಂದಿರಾ ಗಾಂಧೀ ತನಗಿರುವ 

ಶಕ್ತಿ ಮತ್ತು ಸಾಮರ್ಥ್ಯವನ್ನು ಅರಿತಿದ್ದ ಅವರು 1975-77 ರ ಸಂದರ್ಭದಲ್ಲಿ ವಿಧಿಸಿದ ತುರ್ತುಪರಿಸ್ಥಿತಿಯು 

ಒಂದರ್ಥದಲ್ಲಿ ಅವರಿಗಿದ್ದ ಸಂಪೂರ್ಣ ಜನಬೆಂಬಲವನ್ನು  ನಕಾರಾತ್ಮಕ ರೀತಿಯಲ್ಲಿ ಬಳಸಿಕೊಂಡರು. ಈ  

ಕಾರ್ಯವು  ಅವರಿಗೆ ಕೆಟ್ಟ ಹೆಸರನ್ನು ತಂದಿತು.ಏಕೆಂದರೆ ಆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮತ್ತು 

ವ್ಯಕ್ತಿಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಷೇದಿಸಿರು.ಇದನ್ನು ವಿರೋಧಿಸಿ ಹಿರಿಯ ಗಾಂಧಿವಾದಿ 

ಜಯಪ್ರಕಾಶ ನಾರಾಯಣ ರವರು 'ಸಂಪೂರ್ಣ ಕ್ರಾಂತಿ'ಗೆ ಕರೆ ನೀಡಿದರು. ಇದರ ಭಾಗವಾಗಿ ಎಲ್ಲ 

ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಬಂದು ಈ ನಡೆಯನ್ನು ವಿರೋಧಿಸಲು ಹೋರಾಟ 

ಪ್ರಾರಂಭಿಸಿದರು. ಇದರ ಭಾಗವಾಗಿ ಇಂದಿರಾ ಚುನಾವಣೆಯಲ್ಲಿ ಸೋತರು ಆಗ ಕಾಂಗ್ರೆಸ್ ಕೂಡಾ 

ದೇಶದಲ್ಲೆಡೆ ಸೋತಿತು.ಈ ಸಂದರ್ಭದಲ್ಲಿ ಮೊದಲ ಭಾರಿಗೆ ದೇಶದಲ್ಲೆಡೆ  ಮೂರಾರ್ಜಿ ದೇಸಾಯಿ 

ನೇತೃತ್ವದ ಕಾಂಗ್ರೇಸೇತರ ಜನತಾ ಸರ್ಕಾರ ಅಧಿಕಾರಕ್ಕೆ ಬಂದಿತು.ಈ 77 ಮತ್ತು 80 ಅವಧಿಯ ನಡುವೆ 

ಮೂರಾರ್ಜಿ ದೇಸಾಯಿ ಮತ್ತು ಚೌಧರಿ ಚರಣ್ ಸಿಂಗ್ ಪ್ರಧಾನ ಮಂತ್ರಿಗಳಾದರು.ಆದರೆ ಸಮ್ಮಿಶ್ರ 

ಸರ್ಕಾರವು ಹಲವಾರು ಬಿಕ್ಕಟ್ಟುಗಳಿಂದ ಅದು ಬೇಗನೆ ಪತನಗೊಂಡಿತು.ನಂತರ ಮತ್ತೆ 1980ರಲ್ಲಿ ಪುನರ್ 

ಅಧಿಕಾರಕ್ಕೆ ಬಂದಂತಹ ಇಂದಿರಾಗಾಂಧಿ ಯವರು ಸಿಖ್ ರ ಖಲಿಸ್ತಾನ ಬೇಡಿಕೆಯಿತ್ತಿದ್ದ ಶಕ್ತಿಗಳನ್ನು 

ಸಾರಾಸಗಟಾಗಿ ತಿರಸ್ಕರಿಸಿ  ಸ್ವರ್ಣಮಂದಿರದ ಮೇಲೆ 'ಆಪರೇಷನ್ ಬ್ಲೂ ಸ್ಟಾರ್' ಕಾರ್ಯಾಚರನೆ 

ಮೂಲಕ ಇಂದಿರಾ ಗಾಂಧಿಜಿ ಅಂತವರನ್ನು ಹತ್ತಿಕ್ಕಿದರು. 
ಇಂತಹ ಕ್ರಮಗಳಿಂದ ಸಿಖ್ ರ ಕೆಂಗಣ್ಣಿಗೆ ಗುರಿಯಾದ ಇಂದಿರಾ 1984 ಅಕ್ಟೋಬರ್ 31 ರಂದು ಅವರಿಗೆ 

ಸೆಕ್ಯೂರಿಟಿ ಗಾರ್ಡ್ಗಳ ಮೂಲಕ ಅವರನ್ನು ಅವರ ನಿವಾಸದಲ್ಲೇ ಹತ್ಯೆ ಮಾಡಲಾಯಿತು.

ಧೈರ್ಯದ ಮಹಿಳೆ:

ನಾವು ಇಂದಿಗೂ ಕೂಡಾ ಸರ್ಕಾರದಲ್ಲಿ ಮಹಿಳಾ ಪ್ರಾತಿನಿಧ್ಯತೆಯನ್ನು ಕುರಿತಾಗಿ ಮಾತನಾಡುತ್ತಲೇ 

ಇದ್ದೇವೆ,ಅದು ಸ್ವಾತಂತ್ರ್ಯಸಿಕ್ಕು ಕೆಲವು ದಶಕಗಳಲ್ಲಿ  ದೇಶವನ್ನು ಕಟ್ಟುವ ಮಹತ್ತರ ಕಾರ್ಯವು ಆ 

ಸಂಧರ್ಭದಲ್ಲಿ ಮುಖ್ಯವಾಗಿತ್ತು, ನೆಹರು ಆ ಕೆಲಸಕ್ಕೆ ಸ್ಪಷ್ಟ ಗುರಿಗಳ ಮೂಲಕ ದಾರಿ 

ತೋರಿಸಿದ್ದರು.ಅಚ್ಚರಿಯೆಂದರೆ ಮಹಿಳೆಯು ರಾಜಕೀಯದಿಂದ ವಿಮುಖವಾಗಿದ್ದ ಆ ಕಾಲಘಟ್ಟದಲ್ಲಿ ಇಂದಿರಾ 

ಗಾಂಧಿಯ ರಾಜಕಾರಣದ ಪ್ರವೇಶವು ಒಂದರ್ಥದಲ್ಲಿ ಮಹಿಳಾ ಸಬಲಿಕರಣಕ್ಕೆ ಒಂದು ಭಿನ್ನವಾದ 

ಆಯಾಮವನ್ನು ನೀಡಿತು.ಮತ್ತು ಅದನ್ನು ಇಂದಿರಾಗಾಂಧಿಯವರು ಪುರುಷ ಪ್ರಧಾನ ರಾಜಕೀಯ ಮತ್ತು 

ಸಮಾಜದ ಸಂಧರ್ಭದಲ್ಲಿ ಎರಡನ್ನು ನಿಭಾಯಿಸಿದ ರೀತಿ, ಅದು ನಿಜಕ್ಕೂ ಇಂದಿಗೂ ಕೂಡ ಎಲ್ಲ 

ಮಹಿಳೆಯರಿಗೆ ಮಾದರಿ ಎಂದು ಹೇಳಬಹುದು.

ಇಂಥಹ ಭಾರತದ ಉಕ್ಕಿನ ಮಹಿಳೆಗೆ ಇಂದು ಜನ್ಮ ಶತಮಾನೋತ್ಸವದ  ಸಂಭ್ರಮ.

ಈ ಸಂದರ್ಭದಲ್ಲಿ ಇಂದಿಗೂ ಕೂಡ ಲಿಂಗ ತಾರತಮ್ಯ,ಮಹಿಳೆಯ ಸಾಮರ್ಥದ ಕುರಿತಾಗಿರುವ 

ಅಪನ೦ಬಿಕೆ ಹೋಗಬೇಕಾಗಿದೆ. ಮತ್ತು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಮಹಿಳೆಗೆ ಪುರುಷನಷ್ಟೇ 

ಪ್ರಾತಿನಿದ್ಯತೆಯನ್ನು ಕೊಡಬೇಕಾಗಿದೆ. ಅಂತಹ ಎಲ್ಲ ಯಶಸ್ವಿ ಕಾರ್ಯಗಳಿಗೆ ಇಂದಿರಾ ಗಾಂಧಿಯವರ 

ಧೈರ್ಯ ತ್ಯಾಗದ ನಡೆಗಳು ನಮಗೆ ಇಂದಿಗೂ ಆದರ್ಶಪಾರ್ಯವಾಗಬೇಕಾಗಿರುವುದು ಇಂದಿನ ತುರ್ತಿನ 

ಸಂಗತಿಯಾಗಿದೆ.

Trending News