IPL 2020: ದೆಹಲಿ ಕ್ಯಾಪಿಟಲ್ಸ್ ಗೆ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ 18 ರನ್ ಗಳ ಗೆಲುವು

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಗೆ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ 18 ರನ್ ಗಳ ರೋಚಕ ಗೆಲುವು ಸಾಧಿಸಿದೆ.

Last Updated : Oct 4, 2020, 12:06 AM IST
IPL 2020: ದೆಹಲಿ ಕ್ಯಾಪಿಟಲ್ಸ್ ಗೆ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ 18 ರನ್ ಗಳ ಗೆಲುವು title=
Photo Courtsey : Twitter

ನವದೆಹಲಿ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಗೆ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ 18 ರನ್ ಗಳ ರೋಚಕ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಕೋಲ್ಕತಾ ತಂಡವು ದೆಹಲಿ ಕ್ಯಾಪಿಟಲ್ಸಗೆ ಬ್ಯಾಟಿಂಗ್ ಅವಕಾಶ ನೀಡಿತು. ಇದನ್ನು ಸದುಪಯೋಗಪಡಿಸಿಕೊಂಡ ದೆಹಲಿ ತಂಡವು ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 88 ಹಾಗೂ ಪೃಥ್ವಿ ಶಾ 66 ರನ್ ಗಳ ನೆರವಿಂದ ನಾಲ್ಕು ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 228 ಬೃಹತ್ ಮೊತ್ತವನ್ನು ಗಳಿಸಿತು.

IPL 2020: ಐಪಿಎಲ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಎಂ.ಎಸ್ ಧೋನಿ

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕೊಲ್ಕತ್ತಾ ತಂಡಕ್ಕೆ ಆರಂಭದಲ್ಲಿಯೇ ಸುನಿಲ್ ನರೈನ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟವನ್ನು ಎದುರಿಸಿತು.ಇದೆಲ್ಲದರ ನಡುವೆ ನಿತೀಶ್ ರಾಣಾ 58 ಇಯೋನ್ ಮೋರ್ಗನ್ 44 ರಾಹುಲ್ ತ್ರಿಪಾಠಿ 36 ರನ್ ಗಳಿಸುವುದರ ಮೂಲಕ ಗೆಲುವಿನ ಭರವಸೆ ಮೂಡಿಸಿತ್ತಾದರೂ ಕೂಡ ಸ್ಟೋನಿಸ್ ಅವರ ಪರಿಣಾಮಕಾರಿ ಬೌಲಿಂಗ್ ನಿಂದಾಗಿ ಗೆಲುವು ದೆಹಲಿ ತಂಡದಪರವಾಗಿ ವಾಲಿತು.ಕೊಲ್ಕತ್ತಾ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 210 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.

Trending News