Accidental Cover Plan: ಶೀಘ್ರವೇ ನಿಮ್ಮ ಗೊಂದಲ ನಿವಾರಣೆ, ಬರಲಿದೆ ಈ ಹೊಸ ನಿಯಮ

ಮುಂದಿನ ವರ್ಷದ ಏಪ್ರಿಲ್‌ನಿಂದ, ಆಕ್ಸಿಡೆಂಟಲ್ ಕವರ್‌ಗಾಗಿ ಉತ್ತಮ ಯೋಜನೆಯನ್ನು ಆಯ್ಕೆಮಾಡುವಲ್ಲಿ ನೀವು ಹೆಚ್ಚಿನ ತಾಪತ್ರಯ ಪಡೆಯಬೇಕಾದ ಅವಶ್ಯಕತೆ ಇಲ್ಲ.

Last Updated : Dec 11, 2020, 11:13 AM IST
  • ಮುಂದಿನ ವರ್ಷದ ಏಪ್ರಿಲ್‌ನಿಂದ, ಆಕ್ಸಿಡೆಂಟಲ್ ಕವರ್‌ಗಾಗಿ ನೂತನ ನಿಯಮ ಬರಲಿದೆ.
  • ಇದರಿಂದ ಪಾಲಸಿ ಆಯ್ಕೆಮಾಡುವಲ್ಲಿ ನೀವು ಹೆಚ್ಚಿನ ತಾಪತ್ರಯ ಪಡೆಯಬೇಕಾದ ಅವಶ್ಯಕತೆ ಇಲ್ಲ.
  • ಎಲ್ಲಾ ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳು ಇನ್ಮುಂದೆ ಸ್ಟ್ಯಾಂಡರ್ಡ್ ವೈಯಕ್ತಿಕ ಅಪಘಾತ ವಿಮಾ ಉತ್ಪನ್ನ ನೀಡುವುದು ಕಡ್ಡಾಯವಾಗಲಿದೆ.
Accidental Cover Plan: ಶೀಘ್ರವೇ ನಿಮ್ಮ ಗೊಂದಲ ನಿವಾರಣೆ, ಬರಲಿದೆ ಈ ಹೊಸ ನಿಯಮ title=
Accidental Cover Plan

ನವದೆಹಲಿ: Accidental Cover Plan- ಮುಂದಿನ ವರ್ಷ ಏಪ್ರಿಲ್ 1 ರಿಂದ, ಆಕ್ಸಿಡೆಂಟಲ್ ಕವರ್ ಗಾಗಿ ಉತ್ತಮ ಯೋಜನೆಯನ್ನು ಆಯ್ಕೆಮಾಡುವಲ್ಲಿ ನಿಮಗೆ ಹೆಚ್ಚಿನ ಗೊಂದಲ ಇರುವುದಿಲ್ಲ. ಇದಕ್ಕೆ ದೊಡ್ಡ ಕಾರಣವೆಂದರೆ, ಎಲ್ಲಾ ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳು ಇನ್ಮುಂದೆ ಪ್ರಮಾಣಿತ ವೈಯಕ್ತಿಕ ಅಪಘಾತ ವಿಮಾ ಉತ್ಪನ್ನವನ್ನು ನೀಡಬೇಕು ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ನಿರ್ದೇಶನಗಳನ್ನು ನೀಡಿದೆ. ಈ ಆದೇಶವು 1 ಏಪ್ರಿಲ್ 2021 ರಿಂದ ಜಾರಿಗೆ ಬರಲಿದೆ. ಈ ಪ್ರಮಾಣಿತ ಉತ್ಪನ್ನದೊಂದಿಗೆ ಕನಿಷ್ಠ ವ್ಯಾಪ್ತಿ ಅನಿವಾರ್ಯವಾಗಿ ಲಭ್ಯವಿರಲಿದೆ. ವಿಮಾದಾರನು ಅದನ್ನು ಹೆಚ್ಚುವರಿ ಕವರ್ ನೊಂದಿಗೆ ವಿಸ್ತರಿಸಲು ಸಾಧ್ಯವಾಗುತ್ತದೆ. ಆದರೆ, ಪ್ರೀಮಿಯಂ ಅನ್ನು ವಿಮಾ ಕಂಪನಿಗಳು ಮಾತ್ರ ನಿರ್ಧರಿಸಲಿವೆ. ಈ ಉತ್ಪನ್ನದ ಅಡಿಯಲ್ಲಿ 1 ಕೋಟಿವರೆಗೆ ವ್ಯಾಪ್ತಿ ಪಾಲಸಿಧಾರಕರಿಗೆ ಲಭ್ಯವಿರುತ್ತದೆ.

ಪ್ರಸ್ತುತ ಹಲವು ಪಾಲಸಿಗಳಲ್ಲಿ ಈ ತೊಂದರೆ ಇದೆ
ವಿಮಾ ಮಾರುಕಟ್ಟೆಯಲ್ಲಿ ಪ್ರಸ್ತುತ ಅನೇಕ ರೀತಿಯ ಅಪಘಾತ ವಿಮಾ ಉತ್ಪನ್ನಗಳು ಲಭ್ಯವಿದೆ. ಎಲ್ಲಾ ಉತ್ಪನ್ನಗಳು ತಮ್ಮದೇ ಆದ ವಿಶೇಷ ಲಕ್ಷಣಗಳನ್ನು ಹೊಂದಿವೆ. ಈ ಕಾರಣದಿಂದಾಗಿ, ವಿಮಾ ರಕ್ಷಣೆಯನ್ನು ತೆಗೆದುಕೊಳ್ಳುವ ಜನರು ಉತ್ತಮ ಯೋಜನೆಯನ್ನು ಆಯ್ಕೆಮಾಡುವಲ್ಲಿ ಅನೇಕ ಗೊಂದಲಗಳನ್ನೂ ಎದುರಿಸುತ್ತಾರೆ.  ಹೀಗಾಗಿ ಐಆರ್‌ಡಿಎಐನ ಈ ನಿರ್ಧಾರವು ಜನರಿಗೆ ವೈಯಕ್ತಿಕ ಅಪಘಾತ ವಿಮಾ ಉತ್ಪನ್ನವನ್ನು ಆಯ್ಕೆ ಮಾಡಲು ಸುಲಭವಾಗಿಸುತ್ತದೆ. ಈ ರೀತಿಯ ಉತ್ಪನ್ನಗಳನ್ನು ನೀಡುವುದು ಎಲ್ಲಾ ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳಿಗೆ ಕಡ್ಡಾಯವಾಗಿರುತ್ತದೆ.

ಈ ರೀತಿ ಲಾಭ ಸಿಗಲಿದೆ
ಈ ರೀತಿಯ ಸ್ಟ್ಯಾಂಡರ್ಡ್ ಪಾಲಸಿ ಮೃತ್ಯುವಾದ ಸಂದರ್ಭದಲ್ಲಿ ಹಾಗೂ ಭಾಗಶಃ  ಅಂಗವೈಕಲ್ಯ ಮತ್ತು ಶಾಶ್ವತ ಅಂಗವೈಕಲ್ಯವನ್ನು ಮೂಲ ಕವರ್ ಆಗಿ ನೀಡಲಾಗುವುದು. ಶಾಶ್ವತ ಅಂಗವೈಕಲ್ಯದ ಅಡಿಯಲ್ಲಿ, ಪಾಲಿಸಿ ಅವಧಿಯಲ್ಲಿ, ವಿಮಾದಾರನು ಅಪಘಾತದಿಂದಾಗಿ ಸಂಪೂರ್ಣ ಹಾಗೂ ಶಾಶ್ವತ ಅಂಗವೈಕಲ್ಯದ ಸಮಸ್ಯೆ ಅನುಭವಿಸಿದರೆ, ಪಾಲಸಿಧಾರಕರಿಗೆ ಸಂಪೂರ್ಣ ಮೊತ್ತವು ಸಿಗಲಿದೆ.

ಇದನ್ನು ಓದಿ- ಕೊರೊನಾ ಕಾಲದಲ್ಲಿ ನೌಕರಿ ಕಳೆದುಕೊಂಡ್ರಾ? EMI ತೀರಿಸಲು ಸಹಾಯ ಮಾಡುತ್ತಿವೆ Insurance ಕಂಪನಿಗಳು

ಅಪಘಾತದ ಸಮಯದಲ್ಲಿ ತಾತ್ಕಾಲಿಕವಾಗಿ ಸಂಪೂರ್ಣ ಅಂಗವೈಕಲ್ಯ ಚಿಕಿತ್ಸೆಗಾಗಿ ಆಸ್ಪತ್ರೆಯ ವೆಚ್ಚಗಳು,  ಶಿಕ್ಷಣ ಅನುದಾನದಂತಹ ಕೆಲವು ಅತ್ಯುತ್ತಮ ಕವರ್‌ಗಳಿಗೆ ವಿಮಾ ಕಂಪನಿಗಳು ತಮ್ಮ ಉತ್ಪನ್ನದಲ್ಲಿ ಅವಕಾಶ ಕಲ್ಪಿಸಬಹುದು. ಸ್ಟ್ಯಾಂಡರ್ಡ್ ಉತ್ಪನ್ನ ಬೇಸ್ ಕವರ್ ಮತ್ತು ತಾತ್ಕಾಲಿಕ ಸಂಪೂರ್ಣ ಅಂಗವೈಕಲ್ಯ ಲಾಭ ಮತ್ತು ಶಿಕ್ಷಣ ಅನುದಾನದಂತಹ ಗರಿಷ್ಠ ಕವರ್ ಅನ್ನು ಲಾಭದ ಆಧಾರದ ಮೇಲೆ ನೀಡಲಾಗುವುದು. ಮತ್ತೊಂದೆಡೆ, ಅಪಘಾತದಿಂದಾಗಿ, ಆಸ್ಪತ್ರೆಯ ವೆಚ್ಚಗಳಂತಹ ಗರಿಷ್ಠ ಕವರ್ ಅನ್ನು ಪರಿಹಾರದ ಆಧಾರದ ಮೇಲೆ ನೀಡಲಾಗುವುದು.

ಇದನ್ನು ಓದಿ-ಈ ಪ್ಲಾನ್ ಅಡಿ ಕುಟುಂಬದ 15 ಸದಸ್ಯರಿಗೆ ಸಿಗುತ್ತೆ Health Insurance Cover

2.5 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳವರೆಗೆ ಕವರ್
ಸ್ಟ್ಯಾಂಡರ್ಡ್ ಪರ್ಸನಲ್ ಆಕ್ಸಿಡೆಂಟ್ ಇನ್ಸೂರೆನ್ಸ್ ಅಡಿ 2.5 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳ ಸಮ್ ಇನ್ಸ್ಯೋರ್ಡ್ ಇರಲಿದೆ. ಈ ರೇಂಜ್ ಅನ್ನು ಹೊರತುಪಡಿಸಿ ವಿಮಾ ಕಂಪನಿಗಳು ಸಮನಾದ ನೀತಿ-ನಿಯಮ ಜೊತೆಗೆ ಸಮನಾದ ಹೆಸರಿನ ಇತರೆ ಉತ್ಪನ್ನವನ್ನು ಕೂಡ ಪರಿಚಯಿಸಬಹುದಾಗಿದೆ. ಉತ್ಪನ್ನ ಖರೀದಿಸಲು ಕನಿಷ್ಠ ವಯೋಮಿತಿ 18 ಆಗಿದೆ ಹಾಗೂ ಗರಿಷ್ಠ ವಯೋಮಿತಿ 70 ಇರಲಿದೆ.

ಇದನ್ನು ಓದಿ-Gym, Yoga ಮಾಡುವವರಿಗೆ ಸಂತಸದ ಸುದ್ದಿ ಪ್ರಕಟಿಸಿದ IRDAI

ಕ್ಯುಮಲೇಟಿವ್ ಬೋನಸ್ ಕೂಡ ಸಿಗಲಿದೆ
ಈ ಹೊಸ ಪ್ರಮಾಣಿತ ಉತ್ಪನ್ನದಲ್ಲಿ, ಕ್ಯುಮಲೇಟಿವ್ ಬೋನಸ್‌ ಗೂ ಕೂಡ  ಅವಕಾಶವಿರುತ್ತದೆ. ಕುಮಲೇಟಿವ್ ಬೋನಸ್ ಅನ್ನು ಹೊರತುಪಡಿಸಿ ಸಮ್ ಇನ್ಸ್ಯೋರ್ಡ್ ಅನ್ನು ಪ್ರತಿ ಕ್ಲೇಮ್ ಫ್ರೀ ಪಾಲಸಿ ವರ್ಷದ ಬಳಿಕ ಶೇ.5ರಷ್ಟನ್ನು ಹೆಚ್ಚಿಸಬಹುದಾಗಿದೆ.  ಇದರರ್ಥ ನೀವು ಯಾವುದೇ ಪಾಲಿಸಿ ವರ್ಷದಲ್ಲಿ ಹಕ್ಕು ಸಾಧಿಸದಿದ್ದರೆ, ನೀವು ಅದನ್ನು ವಿಮೆ ಮಾಡಿದ ಮೊತ್ತದ ಗರಿಷ್ಠ 50 ಪ್ರತಿಶತಕ್ಕೆ ಹೆಚ್ಚಿಸಲು ಸಾಧ್ಯವಾಗುತ್ತದೆ. ಆದರೆ ಒಂದು ವರ್ಷದಲ್ಲಿ ಹಕ್ಕು ಸಾಧಿಸಿದರೆ, ಕ್ಯುಮಲೇಟಿವ್ ಬೋನಸ್ ಅನ್ನು ಅದೇ ದರದಲ್ಲಿ ಕಡಿಮೆ ಸಹ ಆಗಲಿದೆ.

Trending News