ನಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ - ಪಾಕ್ ಗೆ ಭಾರತ ಸಲಹೆ

ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅನಗತ್ಯ ಹೇಳಿಕೆ ನೀಡಿದ್ದಕ್ಕಾಗಿ ಭಾರತದ ವಿದೇಶಾಂಗ ಸಚಿವಾಲಯ ಗುರುವಾರದಂದು ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದೆ. 

Last Updated : Aug 29, 2019, 06:02 PM IST
ನಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ - ಪಾಕ್ ಗೆ ಭಾರತ ಸಲಹೆ  title=
file photo

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅನಗತ್ಯ ಹೇಳಿಕೆ ನೀಡಿದ್ದಕ್ಕಾಗಿ ಭಾರತದ ವಿದೇಶಾಂಗ ಸಚಿವಾಲಯ ಗುರುವಾರದಂದು ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದೆ. 

ಈಗ ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್  'ಭಾರತದ ಆಂತರಿಕ ವಿಷಯಗಳ ಬಗ್ಗೆ ಪಾಕಿಸ್ತಾನದ ನಾಯಕತ್ವದ ಇತ್ತೀಚಿನ ಹೇಳಿಕೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇವು ಬಹಳ ಬೇಜವಾಬ್ದಾರಿ ಹೇಳಿಕೆಗಳು' ಎಂದು ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪಿಸಿ ಪಾಕಿಸ್ತಾನವು ವಿಶ್ವಸಂಸ್ಥೆಗೆ ಬರೆದ ಪತ್ರದದ ವಿಚಾರವಾಗಿ ಪ್ರತಿಕ್ರಿಯೇ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ 'ಈ ಪತ್ರ ಬರೆದ ಕಾಗದಕ್ಕೆ ಸಹ ಯೋಗ್ಯವಾಗಿಲ್ಲ.ಇದಕ್ಕೆ  ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿದೆ. 

'ನಾವು ಅರ್ಥಮಾಡಿಕೊಂಡಿರುವುದು ಬಹುಶಃ ಕೆಲವು ವಲಯಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದವು, ನೋಟಾಮ್ (ವಾಯುಪಡೆಯವರಿಗೆ ಸೂಚನೆ) ನೀಡಲಾಗಿದೆ, ಅದೂ ಒಂದು ನಿರ್ದಿಷ್ಟ ಅವಧಿಗೆ. ಪಾಕಿಸ್ತಾನದಿಂದ ವಾಯುಪ್ರದೇಶ ಮುಚ್ಚುವಿಕೆ ಧೃಡಿಕರಿಸುವ ಯಾವುದೇ ಹೇಳಿಕೆ ಬಂದಿಲ್ಲ ಎಂದು ತಿಳಿಸಿದರು. ಕಾಶ್ಮೀರದಲ್ಲಿ ವೈದ್ಯಕೀಯ ಸಾಮಗ್ರಿಗಳ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿದ ರವೀಶ್ ಕುಮಾರ್, 'ಒಂದು ಘಟನೆಯಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಔಷಧದ ಕೊರತೆ ವಸ್ತುವಿನ ಬಗ್ಗೆ ವರದಿಯಾಗಿಲ್ಲ. ಒಂದೇ ಒಂದು ಜೀವವೂ ಹೋಗಿಲ್ಲ, ಒಂದೇ ಒಂದು ಗುಂಡು ಹಾರಿಸಲಾಗಿಲ್ಲ. ಈಗಾಗಲೇ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಸುಧಾರಣೆ ಕಂಡುಬಂದಿದೆ ಎಂದರು.

ಪಾಕಿಸ್ತಾನ ಭಯೋತ್ಪಾದನೆಯನ್ನು ರಾಜ್ಯ ನೀತಿಯಾಗಿ ಬಳಸುತ್ತದೆ ಮತ್ತು ಪ್ರತಿ ಬಾರಿಯೂ ಭಾರತದ ಕಳವಳಗಳನ್ನು ತಿಳಿಸಲಾಗಿದ. ಪಾಕಿಸ್ತಾನವು ಭಯೋತ್ಪಾದಕರೊಂದಿಗೆ ಭಾರತದ ಒಳನುಸುಳಲು ಪ್ರಯತ್ನಿಸುತ್ತಿದೆ ಎಂಬ ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ. ಪಾಕಿಸ್ತಾನ ತನ್ನ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದರು.

"ಪಾಕಿಸ್ತಾನ ಈಗ ಸಾಮಾನ್ಯ ನೆರೆಯವರಂತೆ ವರ್ತಿಸುವುದು ಮುಖ್ಯ. ಸಾಮಾನ್ಯ ನೆರೆಹೊರೆಯವರು ಏನು ಮಾಡುತ್ತಾರೆ? ನೀವು ಭಯೋತ್ಪಾದಕರನ್ನು ನೆರೆಯ ದೇಶಕ್ಕೆ ತಳ್ಳಬೇಡಿ ಎಂದು ಹೇಳಿದರು.
 

Trending News