It Is Tah Mahal: ಮಡದಿಯ ಮೇಲಿನ ಅಪಾರ ಪ್ರೀತಿಗಾಗಿ, ಆಕೆ ಜೀವಂತವಾಗಿರುವಾಗಲೇ Taj Mahal ನಿರ್ಮಿಸಿದ ಪತಿ

It Is Tah Mahal : ಪ್ರಪಂಚದ ಅದ್ಭುತಗಳಲ್ಲಿ (Wonders Of World) ಒಂದಾದ ತಾಜ್ ಮಹಲ್‌ನಂತಹ  (Taj Mahal) ಕಟ್ಟಡವನ್ನು ನಿರ್ಮಿಸುವುದು ಸುಲಭದ ಕೆಲಸವಾಗಿರಲಿಲ್ಲ. ಅಷ್ಟಕ್ಕೂ ಈ ಕಟ್ಟಡದ ಭವ್ಯತೆ ನಿಜವಾದ ತಾಜ್ ಮಹಲ್ ಗಿಂತ ಯಾವ ರೀತಿಯಲ್ಲೂ ಕಡಿಮೆ ಆಗಬಾರದು ಎಂಬ ಸವಾಲುಗಳು ಮೊದಲಿಗೆ ಎಂಜಿನಿಯರ್ ಗಳ ಮುಂದೆ ಇದ್ದವು.

Written by - Nitin Tabib | Last Updated : Nov 22, 2021, 07:52 PM IST
  • ವ್ಯಕ್ತಿಯೊಬ್ಬ ತನ್ನ ಹೆಂಡತಿಗಾಗಿ 'ತಾಜ್ ಮಹಲ್' ಕಟ್ಟಿಸಿದ್ದಾನೆ.
  • ಈ ವಿಶಿಷ್ಟ ಕಟ್ಟಡವನ್ನು ಬುರ್ಹಾನ್‌ಪುರ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ.
  • ಸುಮಾರು ಮೂರು ವರ್ಷಗಳಲ್ಲಿ ಈ ಕಟ್ಟಡವನ್ನು ಪೂರ್ಣಗೊಳಿಸಲಾಗಿದೆ
It Is Tah Mahal: ಮಡದಿಯ ಮೇಲಿನ ಅಪಾರ ಪ್ರೀತಿಗಾಗಿ, ಆಕೆ ಜೀವಂತವಾಗಿರುವಾಗಲೇ Taj Mahal ನಿರ್ಮಿಸಿದ ಪತಿ title=
It Is Tah Mahal The Replica Of Taj Mahal (File Photo)

ನವದೆಹಲಿ: It Is Tah Mahal The Replica Of Taj Mahal - ಆಗ್ರಾದ (Agra) ತಾಜ್ ಮಹಲ್ (Taj Mahal) ವಿಶ್ವವಿಖ್ಯಾತವಾಗಿದ್ದು, ಜಗತ್ತಿನಾದ್ಯಂತ ಪ್ರೀತಿಯ ಸಂಕೇತವಾಗಿ ಗುರುತಿಸಿಕೊಂಡಿದೆ. ಆದರೆ ಇದೀಗ ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ 'ತಾಹಮಹಲ್' ಕೂಡ ರೂಪುಗೊಂಡಿದೆ ಮತ್ತು ಅದು ಕೂಡ ಪ್ರೀತಿಯ ಸಂಕೇತವಾಗಿದೆ ಎಂದರೆ ನೀವೂ ಕೂಡ ಆಶ್ಚರ್ಯಪಡುವಿರಿ. ಇಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗಾಗಿ ತಾಜ್ ಮಹಲ್ ಅನ್ನು ಹೋಲುವ ಐಷಾರಾಮಿ ಮನೆಯನ್ನು ನಿರ್ಮಿಸಿದ್ದು, ಅದರಲ್ಲಿ 4 ಮಲಗುವ ಕೋಣೆಗಳು, ಒಂದು ಅಡುಗೆಮನೆ, ಒಂದು ಗ್ರಂಥಾಲಯ, ಧ್ಯಾನದ ಕೊನೆ ಇದೆ. ಈ ಮನೆಯನ್ನು ನಿರ್ಮಿಸಲು 3 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. 

ಮಧ್ಯಪ್ರದೇಶದಲ್ಲಿ ಹೊಸ 'ತಾಜ್ ಮಹಲ್' ನಿರ್ಮಿಸಲಾಗಿದೆ (Trending News)
ಬುರ್ಹಾನ್‌ಪುರದ ಈ ತಾಜ್ ಮಹಲ್ ನಿಖರವಾಗಿ ಆಗ್ರಾದ ತಾಜ್ ಮಹಲ್‌ನಂತೆಯೇ ಇದೆ, ಇದನ್ನು ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್‌ಗಾಗಿ ನಿರ್ಮಿಸಿದ್ದನು. ಆದರೆ ಬುರ್ಹಾನ್ ಪುರದಲ್ಲಿರುವ ಈ ವಿಶಿಷ್ಟ ಕಟ್ಟಡವನ್ನು ನಿರ್ಮಿಸಿದ ವ್ಯಕ್ತಿಯ ಹೆಸರು ಆನಂದ್ ಚೌಕ್ಸೆ (Anand Chouksy) ಮತ್ತು ಅವರು ತಮ್ಮ ನಗರದಲ್ಲಿಯೂ ತಾಜ್ ಮಹಲ್ ಇರಬೇಕು ಎಂದು ಕನಸು ಕಂಡಿದ್ದರು. ಇದಾದ ನಂತರ ತಾಜ್ ಮಹಲ್ ನಂತಹ ಕಟ್ಟಡವನ್ನು ನಿರ್ಮಿಸಲು ಅವರು ನಿರ್ಧರಿಸಿದರು ಮತ್ತು 3 ವರ್ಷಗಳ ನಂತರ ಕುಶಲಕರ್ಮಿಗಳು ಈ ಭವ್ಯ ಕಟ್ಟಡವನ್ನು ಸಿದ್ಧಪಡಿಸಿದರು. ಇದೀಗ ಈ ವಿಶಿಷ್ಟ ಉಡುಗೊರೆಯನ್ನು ತಮ್ಮ ಪತ್ನಿ ಮಂಜುಷಾ ಚೋಕ್ಸೆಗೆ ಅವರು ಹಸ್ತಾಂತರಿಸಿದ್ದಾರೆ.

ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್‌ನಂತಹ ಕಟ್ಟಡವನ್ನು ನಿರ್ಮಿಸುವುದು ಸುಲಭದ ಕೆಲಸವಾಗಿರಲಿಲ್ಲ. ಅಷ್ಟಕ್ಕೂ ಈ ಕಟ್ಟಡದ ಭವ್ಯತೆ ನಿಜವಾದ ತಾಜ್ ಮಹಲ್ ಗಿಂತ ಯಾವ ರೀತಿಯಲ್ಲೂ ಕಡಿಮೆ ಆಗಬಾರದು ಎಂಬ ಸವಾಲುಗಳು ಮೊದಲಿಗೆ ಎಂಜಿನಿಯರ್ ಗಳ ಮುಂದೆ ಇದ್ದವು. ಇದರೊಂದಿಗೆ, ಪ್ರದೇಶ ಮತ್ತು ಅದರ ವಿಸ್ತೀರ್ಣವನ್ನು ಸಹ ನೋಡಿಕೊಳ್ಳಲಾಗಿದೆ ಆದ್ದರಿಂದ ಅನುಪಾತದ ಪ್ರಕಾರ, ಈ ಕಟ್ಟಡವು ಒಂದೇ ರೀತಿ ಕಾಣುತ್ತದೆ.

ಇದನ್ನೂ ಓದಿ-WONDER: 3000 ವರ್ಷಗಳಷ್ಟು ಹಳೆಯದಾದ ಈಜಿಪ್ಟ್ ಮಮಿ ಮಾತನಾಡಿದೆಯಂತೆ!

ಅನೇಕ ರಾಜ್ಯಗಳ ಕುಶಲಕರ್ಮಿಗಳು ಕೆಲಸ ಮಾಡಿದ್ದಾರೆ
ತಾಜ್ ಮಹಲ್‌ನಂತಹ ಈ ಕಟ್ಟಡವನ್ನು ನಿರ್ಮಿಸಲು ಆಗ್ರಾ ಮಾತ್ರವಲ್ಲದೆ ಇಂದೋರ್ ಮತ್ತು ಪಶ್ಚಿಮ ಬಂಗಾಳದ ಕುಶಲಕರ್ಮಿಗಳನ್ನು ಕರೆಯಿಸಲಾಗಿತ್ತು. ಇದರೊಂದಿಗೆ ಕಲ್ಲಿನ ಕೆತ್ತನೆಯ ಕೆಲಸವನ್ನು ಬಹಳ ನಿಖರವಾಗಿ ಮತ್ತು ವಿವರವಾಗಿ ಮಾಡಲಾಗಿದೆ.  ಈ ಕಟ್ಟಡದಲ್ಲಿ 29 ಅಡಿ ಎತ್ತರದಲ್ಲಿ ಗುಮ್ಮಟವನ್ನು ನಿರ್ಮಿಸಲಾಗಿದೆ, ಜೊತೆಗೆ ತಾಜ್ ಮಹಲ್‌ನಂತೆ ಸುತ್ತಲೂ ಗೋಪುರಗಳನ್ನು ಸಹ ನಿರ್ಮಿಸಲಾಗಿದೆ. ನೆಲವನ್ನು ಸಿದ್ಧಪಡಿಸಲು ರಾಜಸ್ಥಾನದಿಂದ ಮಕ್ರಾನ ಕಲ್ಲು (Makrana Stone) ತರಲಾಗಿದೆ.

ಇದನ್ನೂ ಓದಿ-Viral Video: ಗಡ್ಡದಿಂದ 63 ಕೆಜಿ ಮಹಿಳೆ ಎತ್ತಿ ಗಿನ್ನಿಸ್ ರೆಕಾರ್ಡ್ ಮಾಡಿದ ಭೂಪ..!

ಮುಂಬೈನ ಕುಶಲಕರ್ಮಿಗಳು ಮನೆಯೊಳಗೆ ಪೀಠೋಪಕರಣಗಳ ಕೆಲಸವನ್ನು ಮಾಡಿದ್ದಾರೆ. ರಚನೆ ಮಾತ್ರವಲ್ಲ, ಈ ಕಟ್ಟಡದ ಪ್ರತಿಯೊಂದು ಮೂಲೆಯೂ ತಾಜ್ ಮಹಲ್‌ನಂತೆಯೇ ಇದೆ. ರಾತ್ರಿಯಲ್ಲಿ, ಈ ಕಟ್ಟಡವು ದೂರದಿಂದ ತಾಜ್ನಂತೆಯೇ ಕಂಗೊಳಿಸುತ್ತದೆ.

ಇದನ್ನೂ ಓದಿ-Viral Video: ಹೀಗೂ ಸಹ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಬಹುದು, ವಿಡಿಯೋ ಕಂಡು ನಿಮಗೂ ಅಚ್ಚರಿ ಆಗಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News