Jama Masjid verdict: ಮಹಿಳೆಯರ ಪ್ರವೇಶ ನಿಷೇಧಿಸಿ ಜಾಮಾ ಮಸೀದಿ ತೀರ್ಪು: ಮಹಿಳಾ ಆಯೋಗ ಖಂಡನೆ

Jama Masjid verdict: ಜಾಮಾ ಮಸೀದಿಯ ಎಲ್ಲಾ ಮೂರು ಪ್ರವೇಶ ದ್ವಾರಗಳ ಮೇಲೆ ಸೂಚನಾ ಫಲಕವನ್ನು ಹಾಕಲಾಗಿದ್ದು, “ಜಾಮಾ ಮಸೀದಿಗೆ ಹುಡುಗಿಯರು ಅಥವಾ ಮಹಿಳೆಯರು ಏಕಾಂಗಿಯಾಗಿ ಪ್ರವೇಶ ಮಾಡುವಂತಿಲ್ಲ” ಎಂದು ಬರೆಯಲಾಗಿದೆ.

Written by - Bhavishya Shetty | Last Updated : Nov 24, 2022, 02:58 PM IST
    • ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ನಿಷೇಧ
    • ಮಸೀದಿಯ ಇಮಾಮ್‌ಗೆ ನೋಟಿಸ್ ನೀಡಲು ನಿರ್ಧರಿಸಿದ ದೆಹಲಿ ಮಹಿಳಾ ಆಯೋಗ
    • ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲಾ ಟ್ವೀಟ್ ಮೂಲಕ ಮಾಹಿತಿ
Jama Masjid verdict: ಮಹಿಳೆಯರ ಪ್ರವೇಶ ನಿಷೇಧಿಸಿ ಜಾಮಾ ಮಸೀದಿ ತೀರ್ಪು: ಮಹಿಳಾ ಆಯೋಗ ಖಂಡನೆ title=
Jama Masjid verdict

Jama Masjid verdict: ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ವಿಷಯದ ಕುರಿತು ದೆಹಲಿ ಮಹಿಳಾ ಆಯೋಗವು ಮಸೀದಿಯ ಇಮಾಮ್‌ಗೆ ನೋಟಿಸ್ ನೀಡಲು ನಿರ್ಧರಿಸಿದೆ. ಈ ಬಗ್ಗೆ ಸ್ವತಃ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲಾ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: TATA ಒಡೆತನಕ್ಕೆ ಸೇರಲಿದೆ Bisleri: ಭಾವನಾತ್ಮಕ ಪತ್ರ ಬರೆದ ಅಧ್ಯಕ್ಷರು ಹೇಳಿದ್ದೇನು?

ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವ ನಿರ್ಧಾರ ಸಂಪೂರ್ಣವಾಗಿ ತಪ್ಪು. ಪುರುಷನಿಗೆ ಪೂಜೆ ಮಾಡುವ ಹಕ್ಕು ಎಷ್ಟು ಇದೆಯೋ ಅಷ್ಟೇ ಹಕ್ಕು ಮಹಿಳೆಗೂ ಇದೆ. ನಾನು ಜಾಮಾ ಮಸೀದಿಯ ಇಮಾಮ್‌ಗೆ ನೋಟಿಸ್ ನೀಡುತ್ತಿದ್ದೇನೆ. ಈ ರೀತಿ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ಹಕ್ಕು ಯಾರಿಗೂ ಇಲ್ಲ” ಎಂದು ಸ್ವಾತಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಜಾಮಾ ಮಸೀದಿಯ ಎಲ್ಲಾ ಮೂರು ಪ್ರವೇಶ ದ್ವಾರಗಳ ಮೇಲೆ ಸೂಚನಾ ಫಲಕವನ್ನು ಹಾಕಲಾಗಿದ್ದು, “ಜಾಮಾ ಮಸೀದಿಗೆ ಹುಡುಗಿಯರು ಅಥವಾ ಮಹಿಳೆಯರು ಏಕಾಂಗಿಯಾಗಿ ಪ್ರವೇಶ ಮಾಡುವಂತಿಲ್ಲ” ಎಂದು ಬರೆಯಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, “ಹುಡುಗಿಯರು ತಮ್ಮ ಗೆಳೆಯರೊಂದಿಗೆ ಮಸೀದಿಗೆ ಬರುತ್ತಾರೆ ಎಂಬ ದೂರುಗಳು ಬರುತ್ತಿವೆ. ಈ ಕಾರಣಕ್ಕಾಗಿ ಅಂತಹ ಹುಡುಗಿಯರು ಒಂಟಿಯಾಗಿ ಬರುವುದಕ್ಕೆ ನಿರ್ಬಂಧ ಹೇರಲಾಗಿದೆ” ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಹೇಳುತ್ತಾರೆ..

ಇದನ್ನೂ ಓದಿ: Cat Funny Video: ಮೆಟ್ಟಿಲು ಇಳಿಯೋಕು ಈ ಬೆಕ್ಕಿಗೆ ಸೋಮಾರಿತನ: ಏನು ಮಾಡಿದೆ ಅಂತಾ ನೀವೆ ನೋಡಿ

ಮಹಿಳೆಯೊಬ್ಬರು ಜಾಮಾ ಮಸೀದಿಗೆ ಬರಲು ಬಯಸಿದರೆ ಆಕೆ ತನ್ನ ಕುಟುಂಬ ಅಥವಾ ಪತಿಯೊಂದಿಗೆ ಬರಬೇಕು ಎಂದು ಶಾಹಿ ಇಮಾಮ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ನಮಾಜ್ ಮಾಡಲು ಬರುವ ಮಹಿಳೆಯನ್ನು ತಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News