Jammu Kashmir- ಪುಲ್ವಾಮಾದಲ್ಲಿ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

ಮತ್ತೊಂದು ಘಟನೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಶಿಬಿರದಲ್ಲಿ ಶರಣಾದ ಭಯೋತ್ಪಾದಕನು ಪೊಲೀಸ್ ಸಿಬ್ಬಂದಿಯಿಂದ  ರೈಫಲ್ ಅನ್ನು ಕಿತ್ತು ಅವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. 

Written by - Yashaswini V | Last Updated : Jun 3, 2021, 09:55 AM IST
  • ಪೊಲೀಸರ ಮೇಲೂ ಗುಂಡು ಹಾರಿಸಿದ ಭಯೋತ್ಪಾದಕ
  • ಕೇವಲ ಎರಡು ದಿನಗಳ ಹಿಂದಷ್ಟೇ ಶರಣಾಗಿದ್ದ ಭಯೋತ್ಪಾದಕ
  • ಪೊಲೀಸ್ ಸಿಬ್ಬಂದಿಯಿಂದಲೇ ರೈಫಲ್ ಕಿತ್ತು ಶಿಬಿರದಲ್ಲಿ ಅಡಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ
Jammu Kashmir- ಪುಲ್ವಾಮಾದಲ್ಲಿ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು  title=
ಪುಲ್ವಾಮಾದಲ್ಲಿ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ನಿನ್ನೆ ಸಂಜೆ ಭಯೋತ್ಪಾದಕರು ಬಿಜೆಪಿ ಕೌನ್ಸಿಲರ್ ರಾಕೇಶ್ ಪಂಡಿತ್ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ರಾಕೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಇದಲ್ಲದೆ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬರೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಮೇಲೂ ಗುಂಡು ಹಾರಿಸಿದ ಭಯೋತ್ಪಾದಕ:
ಮತ್ತೊಂದು ಘಟನೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪುಲ್ವಾಮಾ ಜಿಲ್ಲೆಯ ಶಿಬಿರದಲ್ಲಿ ಶರಣಾದ ಭಯೋತ್ಪಾದಕನು ಪೊಲೀಸ್ ಸಿಬ್ಬಂದಿಯಿಂದ  ರೈಫಲ್ ಅನ್ನು ಕಿತ್ತು ಅವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. 

ಇದನ್ನೂ ಓದಿ- Model Tenancy Act: ಮಾದರಿ ಹಿಡುವಳಿ ಕಾಯ್ದೆಗೆ ಕೇಂದ್ರ ಸರ್ಕಾರದ ಅನುಮತಿ

ದಕ್ಷಿಣ ಕಾಶ್ಮೀರದ ಟ್ರಾಲ್ (Tral) ಪ್ರದೇಶದಲ್ಲಿ ನೆಲೆಗೊಂಡಿರುವ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಶಿಬಿರದಲ್ಲಿ ಮೊಹಮ್ಮದ್ ಅಮೀನ್ ಮಲಿಕ್ ಎಂದು ಗುರುತಿಸಲ್ಪಟ್ಟ ಭಯೋತ್ಪಾದಕ ಕಾನ್‌ಸ್ಟೆಬಲ್ ಅಮ್ಜದ್ ಖಾನ್‌ನಿಂದ ರೈಫಲ್ ಕಿತ್ತು ಗುಂಡು ಹಾರಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇವಲ ಎರಡು ದಿನಗಳ ಹಿಂದಷ್ಟೇ ಶರಣಾಗಿದ್ದ ಭಯೋತ್ಪಾದಕರು ಪೊಲೀಸ್ ಸಿಬ್ಬಂದಿಯಿಂದಲೇ ರೈಫಲ್ ಕಿತ್ತು ಶಿಬಿರದಲ್ಲಿ ಅಡಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕಾನ್‌ಸ್ಟೆಬಲ್ ಅಮ್ಜದ್ ಖಾನ್‌ ಅವರನ್ನು ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ- ಪಾಕ್ ಜೈಲಿನಲ್ಲಿ 4 ವರ್ಷ ಕಳೆದ ನಂತರ ಮನೆಗೆ ಬಂದ ಹೈದರಾಬಾದ್ ಟೆಕ್ಕಿ

ಭದ್ರತಾ ಪಡೆಗಳು ಭಯೋತ್ಪಾದಕನನ್ನು ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಿದವು, ಅದಕ್ಕಾಗಿ ಅವರ ಹೆತ್ತವರನ್ನು ಸಹ ಕರೆಸಲಾಗಿತ್ತು. ಆದರೆ ಭಯೋತ್ಪಾದಕನು ಶರಣಾಗಲು ನಿರಾಕರಿಸಿದ್ದು ಮಾತ್ರವಲ್ಲದೆ ಭದ್ರತಾ ಪಡೆಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದವು. ಟ್ರಾಲ್‌ನ ನಾಗ್ಬಾಲ್ ನಿವಾಸಿ ಮಲಿಕ್ ಎಂಬಾತ ಮೇ 30 ರಂದು 12 ಬೋರ್ ರೈಫಲ್‌ನೊಂದಿಗೆ ಭದ್ರತಾ ಪಡೆಗಳಿಗೆ ಶರಣಾಗಿದ್ದರು ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News