ಜನವರಿ 31 ಮತ್ತು ಫೆಬ್ರವರಿ 1 ರಂದು 10 ಲಕ್ಷ ಬ್ಯಾಂಕ್ ನೌಕರರ ಮುಷ್ಕರ

ಜನವರಿ 31 ಮತ್ತು ಫೆಬ್ರವರಿ 1 ರಂದು ಹೆಚ್ಚಿನ ಪ್ರಮಾಣದ ಬ್ಯಾಂಕಿಂಗ್ ಕಾರ್ಯಾಚರಣೆಗಳು ಸ್ಥಗಿತಗೊಳ್ಳಲಿದ್ದು, ಸರ್ಕಾರಿ ಮತ್ತು ಖಾಸಗಿ ವಲಯದ ಸುಮಾರು 10 ಲಕ್ಷ ಬ್ಯಾಂಕರ್‌ಗಳು ವೇತನ ಪರಿಷ್ಕರಣೆಗಾಗಿ ಮುಷ್ಕರ ನಡೆಸುತ್ತಿದ್ದಾರೆ.

Last Updated : Jan 30, 2020, 10:46 PM IST
ಜನವರಿ 31 ಮತ್ತು ಫೆಬ್ರವರಿ 1 ರಂದು 10 ಲಕ್ಷ ಬ್ಯಾಂಕ್ ನೌಕರರ ಮುಷ್ಕರ  title=

ನವದೆಹಲಿ: ಜನವರಿ 31 ಮತ್ತು ಫೆಬ್ರವರಿ 1 ರಂದು ಹೆಚ್ಚಿನ ಪ್ರಮಾಣದ ಬ್ಯಾಂಕಿಂಗ್ ಕಾರ್ಯಾಚರಣೆಗಳು ಸ್ಥಗಿತಗೊಳ್ಳಲಿದ್ದು, ಸರ್ಕಾರಿ ಮತ್ತು ಖಾಸಗಿ ವಲಯದ ಸುಮಾರು 10 ಲಕ್ಷ ಬ್ಯಾಂಕರ್‌ಗಳು ವೇತನ ಪರಿಷ್ಕರಣೆಗಾಗಿ ಮುಷ್ಕರ ನಡೆಸುತ್ತಿದ್ದಾರೆ.

ಮುಷ್ಕರದ ವಿಚಾರವನ್ನು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಉನ್ನತ ಅಧಿಕಾರಿ ಸಿ.ಎಚ್.ವೆಂಕಟಾಚಲಂ ಧೃಡಪಡಿಸಿದ್ದಾರೆ. "ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಯೊಂದಿಗಿನ ಮಾತುಕತೆ ವಿಫಲವಾಗಿದೆ.ಆದ್ದರಿಂದ ಜನವರಿ 31 ಮತ್ತು ಫೆಬ್ರವರಿ 1 ರಂದು ಎರಡು ದಿನಗಳ ಮುಷ್ಕರ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

"ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಗಾಗಿ ಐಬಿಎ ಸಮಾಲೋಚನಾ ಸಮಿತಿ ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್‌ಗಳ ನಡುವೆ ಅನೇಕ ಸುತ್ತಿನ ಚರ್ಚೆಗಳು ನಡೆದಿವೆ. 2020 ರ ಜನವರಿ 30 ರಂದು ನಡೆದ ಸಭೆಯಲ್ಲಿ, ಐಬಿಎ ಕಡೆಯಿಂದ ಮಾಡಿದ ಕಾರ್ಯಕ್ಷಮತೆ-ಸಂಬಂಧಿತ ಪ್ರೋತ್ಸಾಹ ಸೇರಿದಂತೆ 19% ರಷ್ಟು ಹೆಚ್ಚಳಕ್ಕೆ ಪರಿಷ್ಕೃತ ಪ್ರಸ್ತಾಪದ ಹೊರತಾಗಿಯೂ, ಯೂನಿಯನ್ಗಳು ದುರದೃಷ್ಟವಶಾತ್ ಜನವರಿ 31 ಮತ್ತು ಫೆಬ್ರವರಿ 1 ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಮುಂದಾಗಲು ನಿರ್ಧರಿಸಿದೆ' ಎಂದು ಭಾರತೀಯ ಬ್ಯಾಂಕುಗಳ ಸಂಘ (ಐಬಿಎ)ದ ಹೇಳಿಕೆ ತಿಳಿಸಿದೆ.

 

Trending News